ಸ್ವಾಬ್ ಮಾದರಿ ಸಂಗ್ರಹವನ್ನು ತೆಗೆದುಕೊಳ್ಳುತ್ತಿರುವ ಆರೋಗ್ಯ ಇಲಾಖೆ ಕಾರ್ಯಕರ್ತ 
ರಾಜ್ಯ

ಈ ಬಾರಿ ಕೂಡ ಬೆಂಗಳೂರಲ್ಲಿ ಕ್ರಿಸ್ ಮಸ್, ನ್ಯೂ ಇಯರ್ ಪಾರ್ಟಿಗೆ ಕೊಕ್?: ಓಮಿಕ್ರಾನ್ ತಡೆಗೆ ಬಿಬಿಎಂಪಿ ಗಂಭೀರ ಚಿಂತನೆ

ರಾಜ್ಯ ಸೇರಿದಂತೆ ದೇಶದಲ್ಲಿ ಕೋವಿಡ್ -19 ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ. ಈ ಹೊತ್ತಿನಲ್ಲಿ ವರ್ಷಾಂತ್ಯ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗೆ ದಿನ ಹತ್ತಿರ ಬರುತ್ತಿದ್ದು ಈ ಬಾರಿ ಕೂಡ ನಿರ್ಬಂಧ ಹೇರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. 

ಬೆಂಗಳೂರು: ರಾಜ್ಯ ಸೇರಿದಂತೆ ದೇಶದಲ್ಲಿ ಕೋವಿಡ್ -19 ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ. ಈ ಹೊತ್ತಿನಲ್ಲಿ ವರ್ಷಾಂತ್ಯ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಗೆ ದಿನ ಹತ್ತಿರ ಬರುತ್ತಿದ್ದು ಈ ಬಾರಿ ಕೂಡ ನಿರ್ಬಂಧ ಹೇರಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. 

ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸೆಕ್ಷನ್ 144 ಹೇರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಷಾಂತ್ಯದಲ್ಲಿ ನಿರ್ಬಂಧ ಹೇರುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಇದುವರೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಸರ್ಕಾರ ಕೂಡ ಏನು ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಚಿಂತಿಸುತ್ತಿದೆ. ಕೋವಿಡ್ ವೈರಸ್ ನ ಕೊಂಡಿಯನ್ನು ಹೇಗೆ ಮುರಿಯಬಹುದು ಎಂದು ನೋಡುತ್ತಿದ್ದೇವೆ ಎಂದರು.

ಬಿಬಿಎಂಪಿಯ ಆಯುಕ್ತರು, ಆರೋಗ್ಯಾಧಿಕಾರಿಗಳು ತಜ್ಞರ ಜೊತೆ ನಡೆಸಿದ ಸಭೆಯಲ್ಲಿ ಸೆಕ್ಷನ್ 144 ಮತ್ತು ನೈಟ್ ಕರ್ಫ್ಯೂ ಹೇರಿದರೆ ನಗರದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಿ ಕೊರೋನಾ ಕೊಂಡಿಯನ್ನು ಮುರಿಯಬಹುದು ಎಂದು ಹೇಳಿದ್ದಾರೆ. ಡಿಸೆಂಬರ್ 31ರಂದು ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ರಾತ್ರಿ ಪಾರ್ಟಿಗೆ ಅವಕಾಶ ನೀಡಬಾರದು ಎಂದು ತಜ್ಞರು ಬಿಬಿಎಂಪಿಗೆ ಸಲಹೆ ನೀಡಿದ್ದಾರೆ.

ನಗರದಲ್ಲಿ ಕೊರೋನಾ ಲಸಿಕೆ ಸ್ಥಿತಿ, ಕಂಟೈನ್‌ಮೆಂಟ್ ವಲಯಗಳು, ಒಮಿಕ್ರಾನ್ ಪ್ರಕರಣಗಳು ವರದಿಯಾಗಿರುವ ಪ್ರದೇಶಗಳ ಸೀಲಿಂಗ್ ಮತ್ತು ಕೋವಿಡ್ -19 ಪಾಸಿಟಿವ್ ಆಗಿರುವ ಸಂಪರ್ಕಿತರನ್ನು ಪತ್ತೆಹಚ್ಚುವಿಕೆ ಬಗ್ಗೆ ತಜ್ಞರ ಜೊತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. 

ಈ ಬಗ್ಗೆ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಅಥವಾ ಸಲಹೆಯನ್ನು ಕಳುಹಿಸಲಾಗಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊರಡಿಸಿದ ಪ್ರೋಟೋಕಾಲ್‌ಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂದು ಗುಪ್ತ ಹೇಳಿದರು.

ವಿದೇಶಗಳಿಂದ ಬಂದ ಪ್ರಯಾಣಿಕರಿಗೆ ಬಿಬಿಎಂಪಿ ನಿರ್ಬಂಧವೇನು?: ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸಂಪರ್ಕ ತಡೆಯನ್ನು ಕುರಿತ ಪ್ರಶ್ನೆಗೆ ಗುಪ್ತಾ ಅವರು, ವಿದೇಶಗಳಿಂದ ಬಂದವರು ಒಂದು ವಾರದವರೆಗೆ ಹೋಮ್ ಕ್ವಾರಂಟೈನ್‌ನಲ್ಲಿರಬೇಕು, ಯಾವುದೇ ದೇಶದಿಂದ ಬಂದರೂ ಕೂಡ, ನಕಾರಾತ್ಮಕ ಆರ್‌ಟಿ-ಪಿಸಿಆರ್ ಟೆಸ್ಟ್ ವರದಿಯನ್ನು ಹೊಂದಿದ್ದರೂ ಕೂಡ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ. 

ಎಂಟನೇ ದಿನ, ಮರು-ಪರೀಕ್ಷೆಯನ್ನು ಮಾಡಲಾಗುತ್ತದೆ. ರೋಗಲಕ್ಷಣಗಳಿಲ್ಲದೆ ಕಂಡುಬಂದರೆ, ಕೊರೋನಾ ಟೆಸ್ಟ್ ನೆಗೆಟಿವ್ ಬಂದರೆ ಮನೆಗೆ ಕಳುಹಿಸಲಾಗುತ್ತದೆ. ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಸಾಂಸ್ಥಿಕ ಸಂಪರ್ಕ ತಡೆಯನ್ನು ಕಡ್ಡಾಯಗೊಳಿಸುವ ಸರ್ಕಾರ ಇನ್ನೂ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಸಾರ್ವತ್ರಿಕ ಪಾಸ್ ಜಾರಿಗೆ ತರುವ ಬಗ್ಗೆ, ಅದರ ಸ್ಥಿತಿಗತಿ ಬಗ್ಗೆ ಗುಪ್ತ, ಮಹಾರಾಷ್ಟ್ರ ಮಾತ್ರ ಜಾರಿಗೆ ತರುತ್ತಿದೆ. ಕರ್ನಾಟಕದಲ್ಲಿ, ಕೋವಿಡ್ ನ ಎರಡನೇ ಡೋಸ್ ಲಸಿಕೆ ಸರ್ಟಿಫಿಕೇಟ್ ನ ಸಾಫ್ಟ್ ಪ್ರತಿ ಒಯ್ಯುವುದು ಮತ್ತು ನೆಗೆಟಿವ್ ಆರ್ ಟಿ-ಪಿಸಿಆರ್ ಪರೀಕ್ಷಾ ವರದಿ ಸಾಕಾಗುತ್ತದೆ. ಸಾರ್ವತ್ರಿಕ ಪಾಸ್ ನ್ನು ಸರ್ಕಾರ ಕಡ್ಡಾಯ ಮಾಡಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!