ರಾಜ್ಯ

ಕೊರೋನಾ ಕರಿನೆರಳು: ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಈ ವರ್ಷ ಕೂಡ ಹೊಸ ವರ್ಷ ಸಂಭ್ರಮಾಚರಣೆಗೆ ನಿರ್ಬಂಧ!

Sumana Upadhyaya

ಬೆಂಗಳೂರು: ಹೊಸ ವರ್ಷ ಬಂತೆಂದರೆ ಬೆಂಗಳೂರಿನ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ ಡಿಸೆಂಬರ್ 31ರ ರಾತ್ರಿ ಯುವಜನತೆಯ ಪಾರ್ಟಿ ಪ್ರಿಯರಿಂದ ತುಂಬಿ ಇಡೀ ರಸ್ತೆ ಕಳೆಕಟ್ಟುತ್ತದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುತ್ತಾರೆ. ಆದರೆ ಈ ವರ್ಷ ಕೂಡ ಕಳೆದ ವರ್ಷದಂತೆ ಕೊರೋನಾ ಕರಿಛಾಯೆ ಆವರಿಸಿದೆ.

ಸರ್ಕಾರ ಇನ್ನೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಸಂಭ್ರಚಾರಣೆಗೆ ಬ್ರೇಕ್ ಹಾಕುವ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ. ಆದರೂ ಬ್ರಿಗೇಡ್ ರಸ್ತೆ ಶಾಪ್ಸ್ ಅಂಡ್ ಅಸ್ಟಾಬ್ಲಿಷ್ ಮೆಂಟ್ ಅಸೋಸಿಯೇಷನ್ (Brigade Road Shops and Establishments’ Association) ಈ ವರ್ಷ ಕೂಡ ಸಂಭ್ರಮಾಚರಣೆ ಮಾಡದಿರಲು ಮುಂದಾಗಿದೆ. 

ಜನರ ಆರೋಗ್ಯ ಮತ್ತು ಸುರಕ್ಷತೆಯ ಆದ್ಯತೆಯಾಗಿ ಓಮಿಕ್ರಾನ್ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಈ ವರ್ಷ ಸರಳವಾಗಿ ಬೀದಿಯಲ್ಲಿ ದೀಪಗಳನ್ನು ಹಚ್ಚಿ ಸಾಂಪ್ರದಾಯಿಕವಾಗಿ ಆಚರಿಸಲು ಮುಂದಾಗಿದೆ. ಅದು ಈಗಾಗಲೇ ಆರಂಭವಾಗಿದೆ.

ಅಸೋಸಿಯೇಷನ್ ನ ಕಾರ್ಯದರ್ಶಿ ಸುಶಿಲ್ ಯೂಸಫ್, ಕಳೆದ ವರ್ಷ ಹೊಸ ವರ್ಷ ಸಂಭ್ರಮಾಚರಣೆಗೆ ಅವಕಾಶವಿರಲಿಲ್ಲ. ಈ ವರ್ಷ, ನಾವೇ ಯಾವುದೇ ಸಂಭ್ರಮಾಚರಣೆ ಮಾಡದಿರಲು ನಿರ್ಧರಿಸಿದ್ದೇವೆ. ಹೊಸ ವರ್ಷದ ಮುನ್ನಾದಿನ ರಾತ್ರಿ ವ್ಯಾಪಾರ ಕಡಿಮೆಯಾದರೂ ಜನದಟ್ಟಣೆ ಹೆಚ್ಚಾಗಿರುತ್ತದೆ. ಈ ವರ್ಷ ಸಾಮಾನ್ಯ ನಿಗದಿತ ಸಮಯಕ್ಕಿಂತ ಒಂದೆರಡು ಗಂಟೆ ಮೊದಲು ಅಂಗಡಿಗಳನ್ನು ಮುಚ್ಚಲು ತೀರ್ಮಾನಿಸಿದ್ದೇವೆ. ಜನದಟ್ಟಣೆ ಸೇರಬಾರದು ಎಂಬುದು ನಮ್ಮ ಉದ್ದೇಶ ಎಂದರು.

ಸಾಮಾನ್ಯವಾಗಿ, ಬೀದಿಯಲ್ಲಿರುವ ವಾಣಿಜ್ಯ ಸಂಸ್ಥೆಗಳು ವರ್ಷಾಂತ್ಯದಲ್ಲಿ ಮಾರಾಟದಲ್ಲಿ ಶೇಕಡಾ 20-50 ರಷ್ಟು ಏರಿಕೆ ಕಾಣುತ್ತವೆ. ಕಳೆದ ವಾರದಲ್ಲಿ ಬೀದಿಬದಿ ವ್ಯಾಪಾರದಲ್ಲಿ ಶೇಕಡಾ 50 ರಷ್ಟು ಏರಿಕೆಯಾಗಲಿದೆ. ಆದಾಗ್ಯೂ, ಎಂಜಿ ರಸ್ತೆಯಲ್ಲಿರುವ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಬೆಂಗಳೂರು ಟ್ರೇಡ್ಸ್ ಅಸೋಸಿಯೇಶನ್ (ಬಿಟಿಎ) ಸದಸ್ಯರು ನಿರ್ಬಂಧಗಳ ಭಾಗವಾಗಿಲ್ಲ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸದ್ಯಕ್ಕೆ ವಾಣಿಜ್ಯ ಘಟಕಗಳಿಂದ ಯಾವುದೇ ನಿರ್ಬಂಧ ಹೇರುತ್ತಿಲ್ಲ ಎಂದು ಬಿಟಿಎ ಅಧ್ಯಕ್ಷ ಶ್ರೀನಾಥ್ ಪಿ ಹೇಳುತ್ತಾರೆ.

ಬೆಂಗಳೂರು ವಾಣಿಜ್ಯ ಸಂಘದ ಸದಸ್ಯರ ಅಭಿಪ್ರಾಯವೂ ಇದೇ ಆಗಿತ್ತು. ಅಸೋಸಿಯೇಶನ್‌ನ ಅಧ್ಯಕ್ಷ ಸಂಜಯ್ ಮೋಟ್ವಾನಿ, ವರ್ಷದ ಈ ಸಮಯ ಉತ್ತಮ ಶಾಪಿಂಗ್ ಸೀಸನ್ ಆಗಿದೆ. ಯಾವುದೇ ನಿರ್ಬಂಧಗಳನ್ನು ಇರಿಸಲಾಗುತ್ತಿಲ್ಲ, ಆದರೆ ಬೀದಿಗಳಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ದೀಪಗಳಿಂದ ಝಗಮಗಿಸುವುದಿಲ್ಲ. ಇದು ಕೋವಿಡ್ -19 ಗಾಗಿ ಮಾತ್ರವಲ್ಲದೆ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಕಾರಣದಿಂದಾಗಿ ಆಗಿದೆ. ಜನವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ದೀಪ ಬೆಳಗುತ್ತೇವೆ ಎಂದರು.

SCROLL FOR NEXT