ರಾಜ್ಯ

ಮಂಗಳೂರು: ಮತ್ತೋರ್ವ ಮೀನುಗಾರನಿಗೆ ತಲೆಕೆಳೆಗೆ ಮಾಡಿ ನೇತುಹಾಕಿ ಹಲ್ಲೆ ನಡೆಸಿದ್ದ ಆರು ಮೀನುಗಾರರ ಬಂಧನ

Lingaraj Badiger

ಮಂಗಳೂರು: ಇಲ್ಲಿನ ಹಳೆ ಬಂದರಿನಲ್ಲಿ ಮೀನುಗಾರನೊಬ್ಬನನ್ನು ಮೀನುಗಾರಿಕಾ ಹಡಗಿನಲ್ಲಿ ತಲೆಕೆಳೆಗೆ ಮಾಡಿ ನೇತುಹಾಕಿ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಆರು ಮೀನುಗಾರರನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನಲ್ಲೂರಿನ ಕೊಂಡೂರು ಪೋಲಯ್ಯ(23), ಅವುಲ್ ರಾಜ್ ಕುಮಾರ್(26), ಕರಪಿಂಗರ ರವಿ(27), ಪ್ರಳಯಕಾವೇರಿ ಗೋವಿಂದಯ್ಯ(47), ಪ್ರಕಾಶಂ ಜಿಲ್ಲೆಯ ಕಟಿಂಗರಿ ಮನೋಹರ್(21), ವೋಟು ಕೋರಿ ಜಾಲಯ್ಯ(30) ಎಂದು ಗುರುತಿಸಲಾಗಿದೆ.

ಹಲ್ಲೆಗೊಳಗಾದ ಮೀನುಗಾರನನ್ನು ಪ್ರಕಾಶಂ ಜಿಲ್ಲೆಯ ವೈಲಾ ಶೀನು(32) ಎಂದು ಗುರುತಿಸಲಾಗಿದೆ.

ಡಿಸೆಂಬರ್ 16 ರಂದು ಜಾನ್ ಶೈಲೇಶ್ -2 ಎಂಬ ಹಡಗಿನಲ್ಲಿ ಮೀನುಗಾರಿಕೆಗೆ ತೆರಳಲು ಹಲ್ಲೆಗೊಳಗಾದ ವ್ಯಕ್ತಿ ಆರೋಪಿಗಳೊಂದಿಗೆ ಸೇರಿಕೊಳ್ಳಬೇಕಿತ್ತು. ಆದರೆ ಹಿಂದಿನ ರಾತ್ರಿ ನಡೆದ ಔತಣಕೂಟದ ನಂತರ ಎರಡು ಮೊಬೈಲ್‌ ಫೋನ್‌ಗಳು ಕಾಣೆಯಾಗಿವೆ. ಈ ವೇಳೆ ವೈಲಾ ಶೀನು ಮೇಲೆ ಅನುಮಾನಗೊಂಡ ಮೀನುಗಾರರು, ಆತನೇ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ದೋಣಿಗೆ ಕರೆದೊಯ್ದು ಥಳಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಅವರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ದಕ್ಷಿಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಲೋಕೇಶ್ ಎಸಿ ಅವರ ಮೊಬೈಲ್ ಗೆ ಮೀನುಗಾರನನ್ನು ಥಳಿಸಿದ ವಿಡಿಯೋ ಬಂದಿತ್ತು. ಅವರು ಸಂತ್ರಸ್ತನನ್ನು ಹುಡುಕಲು ಪ್ರಾರಂಭಿಸಿದರು ಮತ್ತು ಅವರ ಕುಟುಂಬವನ್ನು ತಲುಪಿದರು. ಅಷ್ಟರಲ್ಲಾಗಲೇ ಘಟನೆಯಿಂದ ಮನನೊಂದ ಸಂತ್ರಸ್ತ ವ್ಯಕ್ತಿ ಕಾರವಾರಕ್ಕೆ ತೆರಳಿದ್ದರು. ನಂತರ ಅವರು ಮಂಗಳೂರಿಗೆ ಮರಳಿದ್ದು, ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT