ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್: ರಾಜಾಜಿನಗರ ಅಪಾರ್ಟ್ ಮೆಂಟ್ ನ 21 ಮಂದಿಗೆ ಕೋವಿಡ್ ಸೋಂಕು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ವರದಿಯಾಗಿದ್ದು, ರಾಜಾಜಿನಗರ ಅಪಾರ್ಟ್ ಮೆಂಟ್ ನ 21 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಕೋವಿಡ್ ಕ್ಲಸ್ಟರ್ ವರದಿಯಾಗಿದ್ದು, ರಾಜಾಜಿನಗರ ಅಪಾರ್ಟ್ ಮೆಂಟ್ ನ 21 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಒಂದು ವಾರದ ಅವಧಿಯಲ್ಲಿ ರಾಜಾಜಿನಗರದ ಅಪಾರ್ಟ್‌ಮೆಂಟ್‌ನಲ್ಲಿ 21 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಇದು ಬೆಂಗಳೂರಿನಲ್ಲಿ ಮತ್ತೊಂದು ಕ್ಲಸ್ಟರ್ ಸೃಷ್ಟಿಗೆ ಕಾರಣವಾಗಿದೆ. ರಾಜಾಜಿನಗರದಲ್ಲಿರುವ ಇಂದ್ರಪ್ರಸ್ಥ ಅಪಾರ್ಟ್ ಮೆಂಟ್ ನಲ್ಲಿ ಹಲವು ನಿವಾಸಿಗಳು ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಕೆಲವು ನಿವಾಸಿಗಳು ಪ್ರಯಾಣದ ಇತಿಹಾಸವನ್ನು ಹೊಂದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ ತ್ರಿಲೋಕ್ ಚಂದ್ರ ಅವರು, 'ನಾವು ಅವರ ಪ್ರಯಾಣದ ಇತಿಹಾಸವನ್ನು ಸಂಗ್ರಹಿಸುತ್ತಿದ್ದೇವೆ. ನಾವು ಎಲ್ಲಾ ಇತರz ನಿವಾಸಿಗಳನ್ನು ಸಹ ಪರೀಕ್ಷಿಸುತ್ತಿದ್ದೇವೆ. ಯಾವ ರೂಪಾಂತರವು ಕ್ಲಸ್ಟರ್‌ಗೆ ಕಾರಣವಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾದರಿಗಳನ್ನು ಜೀನೋಮಿಕ್ ಸೀಕ್ವೆನ್ಸಿಂಗ್ ಗಾಗಿ ಕಳುಹಿಸಲಾಗಿದೆ ಎಂದು ಹೇಳಿದರು.

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ 98 ಸಕ್ರಿಯ ಕಂಟೈನ್‌ಮೆಂಟ್ ವಲಯಗಳನ್ನು ಹೊಂದಿದ್ದು ಈ ಪೈಕಿ 31 ವಲಯಗಳು ಬೊಮ್ಮನಹಳ್ಳಿ ವಲಯದಲ್ಲಿವೆ. ಇದರ ನಂತರ ದಕ್ಷಿಣ ವಲಯದಲ್ಲಿ 19, ಮಹದೇವಪುರದಲ್ಲಿ 14, ಪೂರ್ವ ವಲಯದಲ್ಲಿ 13, ಪಶ್ಚಿಮದಲ್ಲಿ 10, ಯಲಹಂಕದಲ್ಲಿ 6 ಮತ್ತು ಆರ್‌ಆರ್ ನಗರದಲ್ಲಿ ಐದು ಕಂಟೈನ್ ಮೆಂಟ್ ವಲಯಗಳಿವೆ. ದಾಸರಹಳ್ಳಿಯಲ್ಲಿ ಯಾವುದೇ ಕಂಟೈನ್‌ಮೆಂಟ್ ವಲಯಗಳಿಲ್ಲ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT