ರಾಜ್ಯ

ಮಸೀದಿಗಳಲ್ಲಿ ಧ್ವನಿವರ್ಧಕ ತೆರವಿನಿಂದ ಮುಸ್ಲಿಂರ ಭಾವನೆಗಳಿಗೆ ಧಕ್ಕೆ: ಶಾಸಕ ಜಮೀರ್ ಅಹಮದ್ ಖಾನ್

Nagaraja AB

ಬೆಂಗಳೂರು: ಮಸೀದಿಗಳಲ್ಲಿ ಧ್ವನಿ ವರ್ಧಕ  ತೆರವು ನಿಲ್ಲಿಸಿ, ಈ ಬಗ್ಗೆ ಮೂಡಿರುವ ಗೊಂದಲ ನಿವಾರಿಸುವಂತೆ  ಶಾಸಕ ಬಿ. ಝಡ್ ಜಮೀರ್ ಅಹಮದ್ ಖಾನ್ ಅವರು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಮನವಿ ಸಲ್ಲಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಜಮೀರ್ ಅಹ್ಮದ್ ಖಾನ್ ಟ್ಯಾಂಕ್ ಗಾರ್ಡನ್ ನ ಮಸೀದಿಯಿಂದ ಇತ್ತೀಚಿಗೆ ಕಾನೂನುಬಾಹಿರವಾಗಿ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಇದರ ವಿರುದ್ಧ ಪ್ರವೀಣ್ ಸೂದ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಇದರಿಂದ ಮುಸ್ಲಿಂರ ಭಾವನೆಗಳಿಗೆ ಧಕ್ಕೆಯಾಗಿದ್ದು, ಧ್ವನಿವರ್ಧಕಗಳನ್ನು ಮತ್ತೆ ಹಾಕಲು ಒತ್ತಾಯಿಸುವುದಾಗಿ ಟ್ವೀಟರ್ ನಲ್ಲಿ ಹೇಳಿದ್ದಾರೆ.

SCROLL FOR NEXT