ಕಾಫಿ ಎಸ್ಟೇಟ್ ಗೆ ಆರೋಗ್ಯ ಸಿಬ್ಬಂದಿ ಭೇಟಿ ಚಿತ್ರ 
ರಾಜ್ಯ

ಹಾಸನ: ಕಾಫಿ ಎಸ್ಟೇಟ್ ನಲ್ಲಿ ಪಶ್ಚಿಮ ಬಂಗಾಳದಿಂದ ಬಂದಿದ್ದ 23 ವಲಸೆ ಕಾರ್ಮಿಕರಿಗೆ ಕೋವಿಡ್-19 ದೃಢ

ಸಕಲೇಶಪುರದ ಕಾಫಿ ಎಸ್ಟೇಟ್ ವೊಂದರಲ್ಲಿ ಪಶ್ಚಿಮ ಬಂಗಾಳದಿಂದ ಬಂದಿದ್ದ 23 ವಲಸೆ ಕಾರ್ಮಿಕರಲ್ಲಿ ಬುಧವಾರ ಕೋವಿಡ್-19 ಸೋಂಕು ದೃಢಪಟ್ಟಿದೆ.

ಹಾಸನ: ಸಕಲೇಶಪುರದ ಕಾಫಿ ಎಸ್ಟೇಟ್ ವೊಂದರಲ್ಲಿ ಪಶ್ಚಿಮ ಬಂಗಾಳದಿಂದ ಬಂದಿದ್ದ 23 ವಲಸೆ ಕಾರ್ಮಿಕರಲ್ಲಿ ಬುಧವಾರ ಕೋವಿಡ್-19 ಸೋಂಕು ದೃಢಪಟ್ಟಿದೆ.

ಸುದ್ದಿ ತಿಳಿಯುತ್ತಿದ್ದಂತೆ ಕಾಫಿ ಎಸ್ಟೇಟ್ ಗೆ ತೆರಳಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ನೇತೃತ್ವದಲ್ಲಿನ ಆರೋಗ್ಯ ಸಿಬ್ಬಂದಿ, ಜಿಲ್ಲಾಧಿಕಾರಿ ಆರ್ . ಗಿರೀಶ್ ಅವರ ನಿರ್ದೇಶನದ ಮೇರೆಗೆ  ಸೋಂಕಿತರನ್ನು ಸಕಲೇಶಪುರದ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

ಇತ್ತೀಚಿಗೆ ಪಶ್ಚಿಮ ಬಂಗಾಳದಿಂದ ವಾಪಸ್ಸಾಗಿದ್ದ ಇಬ್ಬರು ಕಾರ್ಮಿಕರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಅವರಿಗೆ ಪಾಸಿಟಿವ್ ಕಂಡುಬಂದ ನಂತರ ಉಳಿದ ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಮಂಗಳವಾರ ಪರೀಕ್ಷಿಸಲಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 

ಸಕಲೇಶಪುರ ತಾಲೂಕಿನಾದ್ಯಂತ ಇರುವ ಬೇರೆ ಬೇರೆ ಕಾಫಿ ಎಸ್ಟೇಟ್ ಗಳಿಗೆ ಭೇಟಿ ನೀಡಿ, ವಲಸೆ ಕಾರ್ಮಿಕರಿಗೆ ಸೋಂಕು ಪರೀಕ್ಷೆ ನಡೆಸುವಂತೆ ಆರೋಗ್ಯ ಸಿಬ್ಬಂದಿಗೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Epstein ties ಆರೋಪದ ಕುರಿತು ಮೌನ ಮುರಿದ ಬಿಲ್ ಗೇಟ್ಸ್; ಉದ್ಯಮಿ ಹೇಳಿದ್ದೇನು?

ಹಾರ್ಡ್‌ವೇರ್ ಗೋಡೌನ್ ನಲ್ಲಿ ಅಗ್ನಿದುರಂತ: ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೂ ಗಾಯ!

Shikhar Dhawanಗೆ ಬಿಗ್ ರಿಲೀಫ್: 5.7 ಕೋಟಿ ರೂ ಹಣ ಹಿಂದಿರುಗಿಸಿ.. ಮಾಜಿ ಪತ್ನಿಆಯೇಷಾ ಮುಖರ್ಜಿಗೆ ಕೋರ್ಟ್ ಸೂಚನೆ!

ಆರೋಗ್ಯ ಇಲಾಖೆಯಲ್ಲಿ ಅಕ್ರಮ, ಔಷಧಿ ಕೊರತೆ: ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ತರಾಟೆ

ಮಂಡ್ಯ: 1,844 ಅಕ್ರಮ ಇ-ಖಾತಾ ವಿತರಣೆ; ಮೂವರು ಪಿಡಿಒಗಳು ಸೇರಿ ನಾಲ್ವರು ಅಧಿಕಾರಿಗಳ ಅಮಾನತು

SCROLL FOR NEXT