ರಾಜ್ಯ

ಕೋವಿಡ್-19: ರಾಜ್ಯದಲ್ಲಿ 1,978 ಹೊಸ ಸೋಂಕು ಪ್ರಕರಣಗಳು ಪತ್ತೆ, 56 ಮಂದಿ ಸಾವು

Srinivasamurthy VN

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಅಬ್ಬರ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 1,978 ಹೊಸ ಪ್ರಕರಣಗಳು ಮತ್ತು 56 ಸಾವು ದಾಖಲಾಗಿವೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಇಂದು 1,978 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಆ ಮೂಲಕ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 28,71,298ಕ್ಕೆ ಏರಿಕೆಯಾಗಿದೆ. ಅಂತೆಯೇ ಇಂದು 56 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಸಾವಿಗೀಡಾದವರ ಸಂಖ್ಯೆ  35,835ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 2326 ಮಂದಿ ಸೋಂಕಿತರು ಗುಣಮುಖರಾಗಿದ್ದು. ಆ ಮೂಲಕ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 2798703ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 36,737 ಪ್ರಕರಣಗಳು ಸಕ್ರಿಯವಾಗಿದ್ದು, ಕೋವಿಡ್‌ ಖಚಿತ ಪ್ರಕರಣಗಳ ಪ್ರಮಾಣ  ಶೇ.1.24ರಷ್ಟಾಗಿದೆ ಹಾಗೂ ಮೃತಪಟ್ಟವರ ಪ್ರಮಾಣ ಶೇ 2.83ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ತಿಳಿಸಿದೆ. 

ಬೆಂಗಳೂರಿನಲ್ಲೂ ಇಳಿಕೆಯಾದ ಸೋಂಕು 
ಇನ್ನು ಬೆಂಗಳೂರು ನಗರದಲ್ಲಿ 433 ಪ್ರಕರಣಗಳು, ಮೈಸೂರಿನಲ್ಲಿ 261 ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 195 ಪ್ರಕರಣಗಳು, ಹಾಸನದಲ್ಲಿ 132 ಪ್ರಕರಣಗಳು, ಶಿವಮೊಗ್ಗದಲ್ಲಿ 124, ಬೆಳಗಾವಿಯಲ್ಲಿ 112 ಹಾಗೂ ತುಮಕೂರಿನಲ್ಲಿ 100 ಪ್ರಕರಗಳು ದಾಖಲಾಗಿವೆ.

ಕೋವಿಡ್‌-19 ರೂಪಾಂತರಗಳ ಪೈಕಿ ರಾಜ್ಯದಲ್ಲಿ ಈವರೆಗೆ ಆಲ್ಫಾ ಸ್ವರೂಪದ 140 ಪ್ರಕರಣಗಳು, 725 ಡೆಲ್ಟಾ ಪ್ರಕರಣಗಳು, 145 ಕಪ್ಪಾ ಪ್ರಕರಣಗಳು, ಎರಡು ಡೆಲ್ಟಾ ಪ್ಲಸ್‌ ಹಾಗೂ 6 ಬೀಟಾ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಾದ್ಯಂತ 2.56 ಕೋಟಿಗೂ ಅಧಿಕ ಡೋಸ್‌ ಕೋವಿಡ್‌ ಲಸಿಕೆ ಹಾಕಲಾಗಿದೆ.

SCROLL FOR NEXT