ಶ್ರೀ ಕೃಷ್ಣ 
ರಾಜ್ಯ

ಇಂದಿನಿಂದ ಭಕ್ತರಿಗೆ ಉಡುಪಿ ಶ್ರೀಕೃಷ್ಣನ ದರ್ಶನ ಲಭ್ಯ!

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಲಭಿಸಲಿದೆ.

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಲಭಿಸಲಿದೆ.

ಇಂದಿನಿಂದ (ಜುಲೈ 11 ರ ಭಾನುವಾರ) ಭಕ್ತಾದಿಗಳಿಗೆ ಶ್ರೀ ಕೃಷ್ಣನ ದರ್ಶನಕ್ಕಾಗಿ ಅವಕಾಶ ಕಲ್ಪಿಸಲು ಲು ಶ್ರೀ ಕೃಷ್ಣ ಮಠ ಆಡಳಿತ ನಿರ್ಧರಿಸಿದೆ.

ಭಕ್ತಾದಿಗಳು ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಕೃಷ್ಣನ ದರ್ಶನ ಪಡೆಯಬಹುದು ಎಂದು ಪ್ರಕಟಣೆ ಹೇಳಿದೆ.

ಒಂದು ವಾರದ ಹಿಂದೆ ದೇವಾಲಯಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದರೂ, ಶ್ರೀ ಕೃಷ್ಣ ಮಠ ಆಡಳಿತವು ಇನ್ನೊಂದು ವಾರ ಕಾಯಲು ನಿರ್ಧರಿಸಿತ್ತು. ಮಠದ ಆಡಳಿತವು ಹೊರಡಿಸಿದ  ಪತ್ರಿಕಾ ಹೇಳಿಕೆಯಲ್ಲಿ, "ಜುಲೈ 11 ರ ಭಾನುವಾರದಿಂದ ಭಕ್ತರಿಗೆ ಕೃಷ್ಣನ ದರ್ಶನ ಪಡೆಯಲು ಅವಕಾಶವಿರುತ್ತದೆ. ಎಲ್ಲಾ ಭಕ್ತರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು" ಎಂದು ಸೂಚಿಸಿದೆ.

ಲಾಕ್ ಡೌನ್ ಕಾರಣ ಭಕ್ತರಿಗೆ 2-3 ತಿಂಗಳ ನಂತರ ದೇವಾಲಯ ತೆರೆದಿವೆ.

ಇನ್ನು 2022ರಲ್ಲಿ ನಡೆಯುವ ಶ್ರೀಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರ ಪರ್ಯಾಯ ಪೂರ್ವಭಾವಿಯಾದ ಕಟ್ಟಿಗೆ ಮಹೂರ್ತವು ಭಾನುವಾರ ಬೆಳಿಗ್ಗೆ ೮.೪೫ಕ್ಕೆ ಕೃಷ್ಣಾಪುರ ಮಠದ ವತಿಯಲ್ಲಿ ನೆರವೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ