ರಾಜ್ಯ

ಕೋವಿಡ್ ಸ್ಥಿತಿಗತಿ: ಕರ್ನಾಟಕ ಸೇರಿ 6 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ವಿಡಿಯೊ ಸಂವಾದ 

Sumana Upadhyaya

ನವದೆಹಲಿ: ಕೋವಿಡ್ ಸೋಂಕು ಸ್ಥಿತಿಗತಿ ಕುರಿತು, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಒಡಿಶಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಇಂದಿನ ವಿಡಿಯೊ ಸಂವಾದ ವೇಳೆ ಪ್ರಧಾನ ಮಂತ್ರಿಗಳಿಗೆ ರಾಜ್ಯದ ಕೋವಿಡ್ ಸ್ಥಿತಿಗತಿ, ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳು, ಲಸಿಕೆ ನೀಡಿಕೆಯಲ್ಲಿನ ಪ್ರಗತಿ ಬಗ್ಗೆ ಮಾಹಿತಿ ನೀಡಲಿದ್ದಾರೆ.

ನಿನ್ನೆ ಸಾಯಂಕಾಲ ಹೊತ್ತಿಗೆ ರಾಜ್ಯದಲ್ಲಿ ಹೊಸ ಕೋವಿಡ್ ಪ್ರಕರಣಗಳು ಸಾವಿರದ 977 ವರದಿಯಾಗಿದ್ದು, 3 ಸಾವಿರದ 188 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 32 ಸಾವಿರದ 383 ಇದ್ದು, ಇಂದಿನ ಸಾವಿನ ಸಂಖ್ಯೆ ಮತ್ತು ಶೇಕಡಾವಾರು ಪ್ರಮಾಣ 48 ಅಂದರೆ ಶೇಕಡಾ 2.42 ರಷ್ಟಾಗಿದೆ.

ರಾಜ್ಯದಲ್ಲಿ ಇಲ್ಲಿಯವರೆಗೆ 36 ಸಾವಿರದ 037 ಮಂದಿ ಮೃತಪಟ್ಟಿದ್ದು, ಕೋವಿಡ್ ಪರೀಕ್ಷೆ ಮತ್ತು ಶೇಕಡಾವಾರು ಪ್ರಮಾಣ 1 ಲಕ್ಷದ 38 ಸಾವಿರದ 274 ಆಗಿದ್ದು ಅಂದರೆ ಶೇಕಡಾ 1.42ರಷ್ಟಿದ್ದು, ಇಲ್ಲಿಯವರೆಗೆ 2 ಕೋಟಿಯ 65 ಲಕ್ಷದ 59 ಸಾವಿರದ 710 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 

SCROLL FOR NEXT