ರಾಜ್ಯ

ಬೇಡಿಕೆ ಈಡೇರಿಸುವವರೆಗೂ ಶೈಕ್ಷಣಿಕ ಶುಲ್ಕ ಪಾವತಿಸಲ್ಲ: ಪ್ರತಿಭಟನಾ ನಿರತ ನಿವಾಸಿ ವೈದ್ಯರ ನಿರ್ಧಾರ

Shilpa D

ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಶೈಕ್ಷಣಿಕ ಶುಲ್ಕ ಪಾವತಿಸದಿರಲು ಪ್ರತಿಭಟನೆ ನಡೆಸುತತಿರುವ ಕರ್ನಾಟಕ ನಿವಾಸಿ ವೈದ್ಯರು ನಿರ್ಧರಿಸಿದ್ದಾರೆ. 

ತಮ್ಮ ಬೇಡಿಕೆಗಳಲ್ಲಿ ಬೋಧನಾ ಶುಲ್ಕ ಕಡಿತ, ಕಾನೂನು ಕೋಶ ಮತ್ತು ಕೋವಿಡ್ ಅಪಾಯ ಭತ್ಯೆ ಸೇರಿವೆ ಎಂದು ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ವೈದ್ಯರ ಸದಸ್ಯರು ಹೇಳಿದ್ದಾರೆ.

ಈ ಸಂಬಂಧ ಆರೋಗ್ಯ ಸಚಿವ ಸುಧಾಕರ್ ಅವರಿಗೆ ಪತ್ರ ಬರೆದಿದ್ದೇವೆ ಮತ್ತು ಸರ್ಕಾರಿ ಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದೇವೆ, ಹೀಗಿದ್ದರೂ ಇದುವರೆಗೂ ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ಸರ್ಕಾರಿ ಕಾಲೇಜಿನಲ್ಲಿ ಸರ್ಕಾರಿ ಸೀಟಿಗಾಗಿ ಸಂಗ್ರಹಿಸಿದ ಶುಲ್ಕದಲ್ಲಿ ಭಾರಿ ಅಸಮಾನತೆಯಿದೆ. ಕರ್ನಾಟಕವು ಹೆಚ್ಚಿನ ಬೋಧನಾ ಶುಲ್ಕವನ್ನು ಪಡೆಯುತ್ತಿರುವ ರಾಜ್ಯವಾಗಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ನಮ್ಮ ಸೇವೆಗಳ ಮಾನ್ಯತೆಯಾಗಿ, ಶುಲ್ಕವನ್ನು ಕಡಿಮೆ ಮಾಡಲು ನಾವು ವಿನಂತಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.

SCROLL FOR NEXT