ರಾಜ್ಯ

ಕೋವಿಡ್-19: ರಾಜ್ಯದಲ್ಲಿ 4 ತಿಂಗಳ ಬಳಿಕ ಅತ್ಯಂತ ಕಡಿಮೆ ಕೇಸ್ ಪತ್ತೆ!

Manjula VN

ಬೆಂಗಳೂರು: ರಾಜ್ಯದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಅತ್ಯಂತ ಕನಿಷ್ಟ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಮವಾರ 1291 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ಉದ್ಯಾನನಗರಿ ಬೆಂಗಳೂರಿನಲ್ಲಿ ಕೇವಲ 300ಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. 

ಮಾರ್ಚ್.1 ರಂದು ಬೆಂಗಳೂರಿನಲ್ಲಿ 210 ಮತ್ತು ಮಾರ್ಚ್.2 ರಂದು 282 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಇದಾದ ನಂತರ ನಿನ್ನೆ ಕಡಿಮೆ ಪ್ರಕರಣ ದಾಖಲಾಗಿದೆ. 

ಸೋಮವಾರ ನಗರದಲ್ಲಿ ಹೊಸದಾಗಿ 165 ಪುರುಷರು ಮತ್ತು 101 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 266 ಸೋಂಕಿತರ ಪ್ರಕರಣಗಳು ದೃಢಪಟ್ಟಿದ್ದು, ಇದೂವರೆಗೆ 12,22,455 ಜನರಲ್ಲಿ ಸೋಂಕು ಕಾಣಿಸಿಕೊಂಡಂತಾಗಿದೆ. 721 ಪುರುಷರು, 481 ಮಹಿಳೆಯರು ಬಿಡುಗಡೆಯಾಗಿದ್ದು, ಗುಣಮುಖರ ಸಂಖ್ಯೆ 11,95,843ಕ್ಕೆ ಏರಿಕೆಯಾಗಿದೆ. 

ಇನ್ನು ನಗರದಲ್ಲಿ ನಿನ್ನೆ ಕೋವಿಡ್'ಗೆ 6 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 15,803ಕ್ಕೆ ತಲುಪಿದೆ. ಪ್ರಸ್ತುತ ನಗರದಲ್ಲಿ 10,809 ಸಕ್ರಿಯ ಸೋಂಕಿನ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ರಾಜ್ಯದಲ್ಲಿಯೂ ಕೊರೋನಾ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ರಾಜ್ಯದಲ್ಲಿ ನಿನ್ನೆ ನಿನ್ನೆ 1291 ಹೊಸ ಪ್ರಕರಣಗಳು ಪತ್ತೆಯಾಗಿದೆ. ಮಾರ್ಚ್ 17 ರಂದು ರಾಜ್ಯದಲ್ಲಿ 1,275 ಪ್ರಕರಣಗಳು ಪತ್ತೆಯಾಗಿತ್ತು. ಬಳಿಕ ಜುಲೈ 4 ರಂದು 1,564, ಜು.12ರಂದು 1,386 ಕೇಸ್ ಪತ್ತೆಯಾಗಿದ್ದವು. ಇದರೊಂದಿಗೆ ರಾಜ್ಯದಲ್ಲಿ ದೈನಂದಿನ ಸೋಂಕು ಮತ್ತಷ್ಟು ಇಳಿಕೆಯಾಗಿದೆ. 

ರಾಜ್ಯದಲ್ಲಿ ಪಾಸಿಟಿವಿ ದರ ಶೇ.7.81ರಿಂದ ಶೇ.7.79ಕ್ಕೆ ಇಳಿಕೆಯಾಗಿದೆ. ಈ ನಡುವೆ ರಾಜ್ಯದಲ್ಲಿ ನಿನ್ನೆ ಒಂದೇ ದಿನ 3,015 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 28,21,491ಕ್ಕೆ ತಲುಪಿದೆ. ಇದರಂತೆ ಚೇತರಿಕೆ ಪ್ರಮಾಣ ಶೇ.97.72ಕ್ಕೆ ಏರಿಕೆಯಾಗಿದೆ.
 
ಇನ್ನು ರಾಜ್ಯದಲ್ಲಿ ನಿನ್ನೆ 40 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 36,197ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸಾವಿನ ಪ್ರಮಾಣ ಸೇ.3.9ಕ್ಕೆ ತಲುಪಿದೆ.

SCROLL FOR NEXT