ರಾಜ್ಯ

ಬಿಬಿಎಂಪಿ ವ್ಯಾಪ್ತಿಯಲ್ಲಿ ಪೊಲೀಸರಿಂದ ಸುಮಾರು 1 ಲಕ್ಷ ಕೋವಿಡ್-19 ಜನರ ಪತ್ತೆ!

Nagaraja AB

ಬೆಂಗಳೂರು: ಕಾನೂನು ಸುವ್ಯವಸ್ಥೆ ನಿರ್ವಹಣೆ ಹೊರತಾಗಿಯೂ ಪೊಲೀಸ್ ಇಲಾಖೆ ಪ್ರತಿದಿನ ಕೋವಿಡ್-19 ಪರೀಕ್ಷೆಗಾಗಿ ಮಾದರಿಗಳನ್ನು ನೀಡಿದ ಅಥವಾ ಪಾಸಿಟಿವ್ ಇರುವ ಸುಮಾರು 1500-200 ಜನರನ್ನು ಪತ್ತೆ ಹಚ್ಚುತ್ತಿದೆ. ಏಪ್ರಿಲ್ 2020 ರಿಂದ ಮೊದಲ ಅಲೆ ಪ್ರಾರಂಭವಾದಾಗಿನಿಂದ ಜೂನ್ 20, 2021 ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1.53 ಲಕ್ಷ  ಜನರನ್ನು ಪೊಲೀಸ್ ಇಲಾಖೆ ಪತ್ತೆ ಮಾಡಿದೆ.

ಕರೆಗಳ ಮೂಲಕ ಪತ್ತೆಯಾಗದವರು ಅಥವಾ ಹೇಳಿದ ವಿಳಾಸದಲ್ಲಿ ಕಂಡುಬಾರದಿದ್ದವರು ಕೂಡಾ ಈ ಪಟ್ಟಿಯಲ್ಲಿದ್ದಾರೆ. ಆಶ್ಚರ್ಯವೆಂದರೆ ಈವರೆಗೂ ಬಿಬಿಎಂಪಿ ಅಥವಾ ಪೊಲೀಸ್ ಇಲಾಖೆ ಈ ಉಲ್ಲಂಘನೆ ಮಾಡುವವರ ವಿರುದ್ಧ ಯಾವುದೇ ಕೇಸ್ ದಾಖಲಿಸಿಲ್ಲ. ಪೊಲೀಸ್ ಅಧಿಕಾರಿಗಳು ಶೇ.80 ರಷ್ಟು ಈ ಜನರನ್ನು ಅವರ ಕರೆಗಳಿಂದ ಪತ್ತೆ ಹಚ್ಚಿದ್ದಾರೆ.

ಪಟ್ಟಿಯಲ್ಲಿರುವವರಲ್ಲಿ ಬಹುತೇಕರು ಬೆಂಗಳೂರಿನವರಾಗಿದ್ದಾರೆ. ಆಸ್ಪತ್ರೆಯಲ್ಲಿ ಅಥವಾ ಪ್ರತಿಕ್ರಿಯೆ ನೀಡುವ ಪರಿಸ್ಥಿತಿ ಇರದ ಕಾರಣ ಜನರು ಕರೆಗಳನ್ನು ಸ್ವೀಕರಿಸಿಲ್ಲ. ಆದ್ದರಿಂದ ಅಂತವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಎಂಎನ್ ಅನುಚೇತ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಇದರಲ್ಲಿ 4 ಸಾವಿರ ಜನರು ಮೊದಲ ಅಲೆಯಲ್ಲಿ ಪತ್ತೆ ಹಚ್ಚಲಾಗಿತ್ತು. ಪ್ರತಿದಿನ ಬಿಬಿಎಂಪಿಯ ಪೋರ್ಟಲ್‌ನಿಂದ ಪತ್ತೆಹಚ್ಚಲು ಸರಾಸರಿ 1500 ಜನರ ಕರೆಗಳನ್ನು ಪಡೆಯುತ್ತೇವೆ.ಇದು ದೈನಂದಿನ ಆಧಾರದ ಮೇಲೆ ನಡೆಯುತ್ತಿದ್ದು, ಎರಡನೇ ಅಲೆಯಲ್ಲಿ ಸುಮಾರು 79 ಸಾವಿರ ಜನರನ್ನು ಪತ್ತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕರೆಗಳು ಮತ್ತು ಮನೆಗಳಿಗೆ ಭೇಟಿ ನೀಡುವ ಮೂಲಕ 24 ಗಂಟೆಯೂ ಸೋಂಕು ಪತ್ತೆ ಕಾರ್ಯ ನಡೆಯುವಂತೆ ವಾರ್ ರೂಮ್ ಮತ್ತು ಸಿಬ್ಬಂದಿಗೆ ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್ ನಿರ್ದೇಶನ ನೀಡಿದ್ದಾರೆ. ಅದರ ನಂತರ ವ್ಯಕ್ತಿಯನ್ನು ಇನ್ನೂ ಪತ್ತೆ ಹಚ್ಚಲಾಗದಿದ್ದರೆ ಅದನ್ನು ತಕ್ಷಣ ಪೊಲೀಸರಿಗೆ ಸೂಚಿಸಬೇಕು ಎಂದು ಹೇಳಲಾಗಿದೆ.

ಕೆಲವು ಸಂದರ್ಭಗಳಲ್ಲಿ ಪೊಲೀಸರು 48 ಗಂಟೆಗಳ ಅಥವಾ 14 ದಿನಗಳಲ್ಲಿ ವ್ಯಕ್ತಿಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ರಂದೀಪ್ ಹೇಳಿದರು. ಆದಾಗ್ಯೂ ಕೆಲವು ಪ್ರಕರಣಗಳಿವೆ, ಒಂದು ತಿಂಗಳ ನಂತರವೂ ವ್ಯಕ್ತಿಯನ್ನು ಪತ್ತೆಹಚ್ಚಲಾಗುವುದಿಲ್ಲ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಪೊಲೀಸರು ಆ ವ್ಯಕ್ತಿಯ ಹುಡುಕಾಟವನ್ನು ಮುಂದುವರೆಸುತ್ತಿದ್ದರೂ ಸಹ, ಅದನ್ನು ಡಿಸ್ಚಾರ್ಜ್ ಎಂದು ಪರಿಗಣಿಸಿ ಆ ಪ್ರಕರಣವನ್ನು ವೈದ್ಯಕೀಯವಾಗಿ ಬಿಬಿಎಂಪಿ ಮುಚ್ಚಿಹಾಕುತ್ತದೆ.

SCROLL FOR NEXT