ರಾಜ್ಯ

ವಿದ್ಯುತ್ ಉಳಿತಾಯಕ್ಕೆ ಬೆಂಗಳೂರಿನ ರೈಲ್ವೆ ನಿಲ್ದಾಣಗಳಾದ್ಯಂತ ಖಗೋಳ ಟೈಮರ್ ಸ್ವಿಚ್ ಗಳು

Srinivas Rao BV

ಬೆಂಗಳೂರು: ವಿದ್ಯುತ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣಗಳಾದ್ಯಂತ ಖಗೋಳ ಟೈಮರ್ ಸ್ವಿಚ್ ಗಳನ್ನು ಅಳವಡಿಕೆ ಮಾಡಲಾಗಿದೆ. 

ಸೂರ್ಯಾಸ್ತ ಹಾಗೂ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ವಿದ್ಯುತ್ ಬಳಕೆಯನ್ನು ನಿಯಂತ್ರಿಸುವುದಕ್ಕೆ ಈ ಟೈಮರ್ ಸ್ವಿಚ್ ಗಳು ಸಹಕಾರಿಯಾಗಿದ್ದು ನಗರದ 84 ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. ಈ ಮೂಲಕ ವಾರ್ಷಿಕ 730 ಯುನಿಟ್ ಗಳಿಂದ 1095 ಯುನಿಟ್ ಗಳಷ್ಟು ವಿದ್ಯುತ್ ನ್ನು ಉಳಿತಾಯ ಮಾಡಬಹುದಾಗಿದೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಕೆ.ಪೂಜ, "ವಿಭಾಗೀಯ ಎಲೆಕ್ಟ್ರಿಕಲ್ ಇಂಜಿನಿಯರ್, ಲೈಟ್ ಗಳನ್ನು ಆನ್ ಮತ್ತೆ ಆಫ್ ಮಾಡುವುದಕ್ಕೆ ಟೈಮರ್ ನಿಯಂತ್ರಕ ಪಾನಲ್ ಗಳನ್ನು ಅಳವಡಿಕೆ ಮಾಡಲಾಗಿದೆ. ಸುಧಾರಿತ ಮೈಕ್ರೋ ಕಂಟ್ರೋಲರ್ ಆಧಾರಿತ ತಂತ್ರಜ್ಞಾನ ಸಾಧನಗಳಾಗಿರುವ ಅಸ್ಟ್ರಾನಮಿಕಲ್ ಟೈಮರ್ ಸ್ವಿಚ್ ಗಳು ಸಜ್ಜುಗೊಂಡಿವೆ".
 
ಪ್ರದೇಶದ ರೇಖಾಂಶ ಮತ್ತು ಅಕ್ಷಾಂಶ ಆಧಾರದಲ್ಲಿ ಸೂರ್ಯಾಸ್ತ, ಸೂರ್ಯೋದಕ್ಕೆ ಅನುಗುಣವಾಗಿ ರೈಲ್ವೆ ನಿಲ್ದಾಣಗಳಲ್ಲಿನ ದೀಪಗಳನ್ನು ಈ ಟೈಮರ್ ಸ್ವಿಚ್ ಗಳು ನಿಯಂತ್ರಣ ಮಾಡಲಿವೆ" ಎಂದು ಪೂಜಾ ವಿವರಿಸಿದ್ದಾರೆ.  

ಪ್ರಮುಖ ನಿಲ್ದಾಣಗಳ ಹೊರತಾಗಿ ಸಂಪಿಗೆ ರಸ್ತೆ, ಗುಬ್ಬಿ, ನಿಟ್ಟೂರು, ರಾಯಕೊಟ್ಟೈ, ಕೆಲಮಂಗಲಂ, ನಾಗಸಮುದ್ರಂ, ಬಸಂಪಲ್ಲಿ, ಬಿಸನಟ್ಟಂ, ಯೆಲಿಯೂರು, ಮುಲನೂರು, ಚಿಂತಾಮಣಿಗಳಲ್ಲೂ ಈ ಮಾದರಿಯ ಸ್ವಿಚ್ ಗಳನ್ನು ಅಳವಡಿಸಲಾಗಿದೆ ಎಂದು ಪೂಜಾ ಮಾಹಿತಿ ನೀಡಿದ್ದಾರೆ.

"ಈ ನಿಲ್ದಾಣಗಳಲ್ಲಿ ದೀಪಗಳನ್ನು ನಿಯಂತ್ರಿಸುವ ಸಿಬ್ಬಂದಿಗಳು ಇಲ್ಲ. ಆದ್ದರಿಂದ ವಿದ್ಯುತ್ ಉಳಿತಾಯ ಮಾಡುವುದಕ್ಕೆ ಈ ಕ್ರಮ ನೆರವಾಗಲಿದ್ದು ಹಾಸನ ಜಿಲ್ಲೆಯ 11 ರೈಲ್ವೆ ನಿಲ್ದಾಣಗಳಿಗೂ ಶೀಘ್ರವೇ ಇದನ್ನು ಅಳವಡಿಸಲಾಗುತ್ತದೆ" ಎಂದು ಹೇಳಿದ್ದಾರೆ.

SCROLL FOR NEXT