ರಾಜ್ಯ

ಯೋಗೇಶ್ ಗೌಡ ಹತ್ಯೆ ಪ್ರಕರಣ: ಎರಡನೇ ಬಾರಿಯೂ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾ

Shilpa D

ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಕಾಂಗ್ರೆಸ್ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಎರಡನೇ ಬಾರಿ ಹೈಕೋರ್ಟ್ ವಜಾಗೊಳಿಸಿದೆ.

ಮೃತರ ಪತ್ನಿಗೆ ಹಣ ಹಾಗೂ ಕಾಂಗ್ರೆಸ್ ನಲ್ಲಿ ಹುದ್ದೆ ನೀಡುವ ಆಮೀಷ ಒಡ್ಡಿದ ವಿನಯ್ ಕುಲಕರ್ಣಿ ಪ್ರಕರಣದ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾರೆ ಎಂದು ಹೇಳಿ ಮುಖ್ಯ ನ್ಯಾಯಮೂರ್ತಿ  ಕೆ. ನಟರಾಜನ್ ಎರಡನೇ ಬಾರಿಯೂ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ.

ವಿನಯ್ ಕುಲಕರ್ಣಿ ನಡವಳಿಕೆಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ, ಸಾಕ್ಷಿಗಳನ್ನು ನಾಶ ಮಾಡುವುದು, ಪೊಲೀಸ್ ಅಧಿಕಾರಿಯ ಮೇಲೆ ಸುಳ್ಳು ಚಾರ್ಜ್‌ಶೀಟ್ ಸಲ್ಲಿಸಲು ಪ್ರಭಾವ ಬೀರುವುದು, ಸಾರ್ವಜನಿಕ ಅಭಿಯೋಜಕರನ್ನು ಬದಲಾಯಿಸುವುದು ಮತ್ತು ಪೊಲೀಸರನ್ನು ಮತ್ತು ತನಿಖೆಯನ್ನು ಬೇರೆಡೆಗೆ ತಿರುಗಿಸುವ ಕೆಲಸ ಮಾಡಿದ್ದಾರೆ.

ಅರ್ಜಿದಾರರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾರಣ ತಮ್ಮ ಪ್ರಭಾವ ಬಳಸಿಕೊಂಡು ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಸಾಕ್ಷ್ಯ ನಾಶಕ್ಕೆ ಮತ್ತು ಸುಳ್ಳು ಆರೋಪಪಟ್ಟಿ ಸಲ್ಲಿಸಲು ತನಿಖಾಧಿಕಾರಿಗೆ 2 ಲಕ್ಷ ನೀಡಿದ್ದಾರೆ’ ಎಂದು ಸಿಬಿಐ ಸಲ್ಲಿಸಿರುವ ದಾಖಲೆಗಳನ್ನು ಪೀಠ ಅವಲೋಕಿಸಿ ಜಾಮೀನು ಅರ್ಜಿ ವಜಾಗೊಳಿಸಿದೆ.

SCROLL FOR NEXT