ರಾಜ್ಯ

ಬೆಂಗಳೂರು: ನವಜಾತ ಶಿಶುಗಳಲ್ಲಿ ಮಲ್ಟಿ ಇನ್‌ಫ್ಲಮೇಟರಿ ಸಿಂಡ್ರೋಮ್‌ ಪತ್ತೆ, ಹೆಚ್ಚಿದ ಆತಂಕ

Manjula VN

ಬೆಂಗಳೂರು: ಕೊರೋನಾ ವೈರಸ್ ಆತಂಕದ ನಡುವಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಎರಡು ನವಜಾತ ಶಿಶುಗಳಲ್ಲಿ ಮಲ್ಟಿ ಇನ್‌ಫ್ಲಮೇಟರಿ ಸಿಂಡ್ರೋಮ್‌ ಎಂಬ ರೋಗ ಲಕ್ಷಣಗಳು ಪತ್ತೆಯಾಗಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. 

ಮಲ್ಟಿ ಇನ್‌ಫ್ಲಮೇಟರಿ ಸಿಂಡ್ರೋಮ್‌ ರೋಗದಿಂದ ಬಳಲುತ್ತಿರುವ ಈ ಶಿಶುಗಳಿಗೆ ನಗರದ ಬೌರಿಂಗ್ ಹಾಗೂ ಲೇಡಿ ಕರ್ಜನ್ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಚಿಕಿತ್ಸೆಗೆ ಮಕ್ಕಳು ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದಾರೆಂದು ಪ್ರಾಧ್ಯಾಪಕ ಡಾ. ಚಿಕ್ಕನರಸ ರೆಡ್ಡಿಯವರು ಹೇಳಿದ್ದಾರೆ. 

ಕೊರೋನಾ ಸೋಂಕು ಪೀಡಿತ ತಾಯಿಯಂದಿರು ಈ ಇಬ್ಬರು ಮಕ್ಕಳಿಗೆ ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಶನಿವಾರ ಜನ್ಮನೀಡಿದ್ದು, ಇಬ್ಬರು ಮಕ್ಕಳಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳು ಅಳು ದುರ್ಬಲದಿಂದ ಕೂಡಿದ್ದು, ಆಘಾತಕ್ಕೊಳಗಾಗಿವೆ ಅಲ್ಲದೆ, ಹೃದಯ ಬಡಿತ ಕೂಡ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. 

ಈ ನಡುವೆ ಮಕ್ಕಳಿಗೆ ಆರ್'ಟಿ-ಪಿಸಿಆರ್ ಪರೀಕ್ಷೆ, ಆ್ಯಂಟಿಬಾಡಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೊರೋನಾ ಸೋಂಕು ಇಲ್ಲ ಎಂದು ತಿಳಿದುಬಂದಿದೆ. ಆದರೆ, ಮಕ್ಕಳಲ್ಲಿ ಅತೀ ಹೆಚ್ಚಿನ ಪ್ರಮಾಣದ ಆ್ಯಂಟಿಬಾಡಿ ಇರುವುದನ್ನು ಕಂಡು ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ. 

ವಯಸ್ಕರದಲ್ಲಿ ಆ್ಯಂಟಿಬಾಡಿ ಕೊರೋನಾ ವೈರಸ್ ನಿಂದ ರಕ್ಷಿಸುತ್ತದೆ. ಆದರೆ, ನವಜಾತ ಶಿಶುಗಳಲ್ಲಿ ಅದು ತದ್ವಿರುದ್ಧವಾಗಿ ಕೆಲಸ ಮಾಡುತ್ತದೆ ಎಂದು ವೈದ್ಯರು ಹೇಳಿದ್ದಾರೆ. 

SCROLL FOR NEXT