ಘಟನೆಗೆ ಕಾರಣವಾದ ಕಾರು 
ರಾಜ್ಯ

ಕುಂದಾಪುರ: ಗ್ರಾಮ ಪಂಚಾಯಿತಿ ಅಧ್ಯಕ್ಷರ ಕಾರು ಡಿಕ್ಕಿಯಾಗಿ ವ್ಯಕ್ತಿ ಸಾವು, ದ್ವೇಷದ ಹಿನ್ನೆಲೆ ಕೊಲೆ -ಆರೋಪ

ಜೂನ್ 5 ರ ಶನಿವಾರ ತಡರಾತ್ರಿ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಈ ಕಾರನ್ನು ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಚಾಲನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇದು ಶಂಕಿತ 'ಕೊಲೆ' ಪ್ರಕರಣವಾಗಿರಬಹುದು ಎಂದು ಹೇಳಲಾಗಿದೆ.

ಕುಂದಾಪುರ: ಜೂನ್ 5 ರ ಶನಿವಾರ ತಡರಾತ್ರಿ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಈ ಕಾರನ್ನು ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಚಾಲನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇದು ಶಂಕಿತ 'ಕೊಲೆ' ಪ್ರಕರಣವಾಗಿರಬಹುದು ಎಂದು ಹೇಳಲಾಗಿದೆ.

ಮೃತ ವ್ಯಕ್ತಿಯನ್ನು ಯಡಮೊಗೆ ಮೂಲದ ಉದಯ್ ಗಾಣಿಗ (45) ಎಂದು ಗುರುತಿಸಲಾಗಿದೆ.

ರಾತ್ರಿ 8 ಗಂಟೆ ಸುಮಾರಿಗೆ ಉದಯ್ ಅವರ ನಿವಾಸದ ಮುಂದೆ ಈ ಘಟನೆ ನಡೆದಿದೆ.

ಜೂನ್ 5 ರ ಶನಿವಾರ ಸಂಜೆ ಉದಯ್ ರಸ್ತೆಯಲ್ಲಿ ನಿಂತಿದ್ದಾಗ ಪ್ರಾಣೇಶ್ ಯಡಿಯಾಳ ಅವರ ಕಾರು ಅವರನ್ನು ಡಿಕ್ಕಿಯಾಗಿದೆ ಎಂದು ಆರೋಪಿಸಲಾಗಿದೆ. ಅಪಘಾತಕ್ಕೆ ಕಾರಣವಾದ ನಂತರ, ಪಂಚಾಯತ್ ಅಧ್ಯಕ್ಷರು ಸ್ಥಳದಿಂದ ಪರಾರಿಯಾಗಿದ್ದು, ತಮ್ಮ ಕಾರನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ.

ಜನರು 108 ಆಂಬ್ಯುಲೆನ್ಸ್ ಗೆ ಕರೆಮಾಡಿ ಉದಯ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದರು.

ಉದಯ್ ಹಾಗೂ ಪ್ರಾಣೇಶ್ ಅವರ ನಡುವೆ ಕೊಳವೆ ಬಾವಿ ಪರವಾನಿಗಿ ವಿಚಾರವಾಗಿ ದ್ವೇಷವಿತ್ತೆಂದು ಹೇಳಲಾಗಿದ್ದು  ಉದಯ್ ಕೊರೋನಾವೈರಸ್ ಸೋಂಕಿತ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಸದ್ಯಕ್ಕೆ ಪ್ರಚಾರಪ್ರಿಯತೆಯನ್ನು ಬದಿಗಿರಿಸಬೇಕೆಂದು  ಅವರು ಅಧಿಕಾರದ ಸ್ಥಾನದಲ್ಲಿರುವವರನ್ನು ಒತ್ತಾಯಿಸಿದ್ದರು. ಸರ್ಕಾರದಿಂದ ಪಡೆದ ಹಣವನ್ನು ದುರುಪಯೋಗಪಡಿಸಿಕೊಳ್ಳದಂತೆ ಅವರು ಕೇಳಿದ್ದರು

ಉದಯ್ ಕೊಲೆ ಮಾಡಿದ ಕೃತ್ಯದಲ್ಲಿ ಪ್ರಾಣೇಶ್ ಅವರ ಮೇಲೆ ಆರೋಪವಿದೆ.

ಪ್ರಾಣೇಶ್ ಹಾಗೂ ಉದಯ್ ನಡುವಿನ ಘರ್ಷಣೆಯಿಂದ ಉದ್ಭವಿಸಿದ ಪ್ರಕರಣ ಇದು ಎಂದು ಇಲ್ಲಿನ ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ ಶ್ರೀಕಾಂತ್ ಹೇಳಿದ್ದಾರೆ. ಸ್ಥಳ ತಪಾಸಣೆಯ ಸಮಯದಲ್ಲಿ, ಇದು ಅಪಘಾತವಲ್ಲ ಆದರೆ ಯೋಜಿತ ಕೊಲೆ ಎಂದು ಕಂಡುಬಂದಿದೆ,  ಸಧ್ಯ ಆರೋಪಿ ಪ್ರಾಣೇಶ್ ಯಡಿಯಾಳ ಅವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಹೇಳಿದರು. ಉದಯ್ ಅವರ ಕುಟುಂಬ ಕೂಡ ಇದು ಕೊಲೆ ಪ್ರಕರಣ ಎಂದು ಶಂಕಿಸಿದ್ದಾರೆ ಮತ್ತು ಅವರ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಪೋಲೀಸ್ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಡಿಗೆದಾರರಿಗೆ ಸಿಹಿ ಸುದ್ದಿ: ಕರ್ನಾಟಕ 'ಬಾಡಿಗೆ ತಿದ್ದುಪಡಿ ವಿಧೇಯಕ' 2025 ವಿಧಾನಸಭೆಯಲ್ಲಿ ಮಂಡನೆ!

ವಿಧಾನಸಭೆಯಲ್ಲಿ 'ಸಿಎಂ ಕುರ್ಚಿ ಕದನ' ಸದ್ದು: ಆರ್. ಅಶೋಕ್ ಮಾತಿಗೆ ಕೆರಳಿದ ಬೈರತಿ; ತೀವ್ರ ಮಾತಿನ ಚಕಮಕಿ!

EVMs ಅಲ್ಲವೇ ಅಲ್ಲ, ಪ್ರಧಾನಿ ಮೋದಿ ಇದನ್ನೇ 'ಹ್ಯಾಕ್' ಮಾಡಿದ್ದಾರೆ! ಲೋಕಸಭೆಯಲ್ಲಿ ಕಂಗನಾ

ಸರ್ಕಾರದ ವಿರುದ್ಧ ಹೋರಾಡಿ ಗೆದ್ದ ಅಲೋಕ್ ಕುಮಾರ್​​ಗೆ DGP ಆಗಿ ಮುಂಬಡ್ತಿ: ADGP ಬಿ.ದಯಾನಂದ್ ವರ್ಗಾವಣೆ

Protection of personality rights: ಹೈಕೋರ್ಟ್ ಗೆ ಸಲ್ಮಾನ್ ಖಾನ್; ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಟ್ರೆಂಡ್ ಆಗ್ತಿರೋದೇಕೆ?

SCROLL FOR NEXT