ರಾಜ್ಯ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೇಸರಿ ಸ್ಪರ್ಶ?: 'ಕಮಲ' ಆಕೃತಿ ಹೋಲುತ್ತಿದೆ ಕಟ್ಟಡದ ವಿನ್ಯಾಸ

Manjula VN

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡ ಬಳಿಕ ಎಂದಾದರೂ ವಿಮಾನದಲ್ಲಿ ತೆರಳುವಾಗ ಕಟ್ಟಡದ ವಿನ್ಯಾಸ ಕಂಡು ಬಿಜೆಪಿ ಪಕ್ಷದ ಚಿನ್ಹೆಯಂತಿದೆಯಲ್ಲಾ, ಭಾರತದ ರಾಷ್ಟ್ರೀಯ ಹೂವಿನಂತಿದೆ ಅಲ್ಲವೇ...? ಎಂದು ಆಶ್ಚರ್ಯಪಡದೆ ಇರಲು ಸಾಧ್ಯವಿಲ್ಲ.

ನಿನ್ನೆಯಷ್ಟೇ ಸೋಗಾನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪರಿಶೀಲನೆ ನಡೆಸಿದ್ದು, ಇದೇ ವೇಳೆ ವಿಮಾನ ನಿಲ್ದಾಣ ಕಟ್ಟಡ ವಿನ್ಯಾಸವನ್ನು ಅನಾವರಣ ಮಾಡಿದ್ದಾರೆ. 

ಮುಖ್ಯಮಂತ್ರಿಗಳು ಅನಾವರಣಗೊಳಿಸಿದ ಕಟ್ಟಡದ ವಿನ್ಯಾಸವು ಕಮಲದ ಆಕೃತಿಯಲ್ಲಿರುವುದು ಕಂಡು ಬಂದಿದೆ. ಹೀಗಾಗಿ ವಿಮಾನ ನಿಲ್ದಾಣಕ್ಕೂ ಕೇಸರಿ ಸ್ಪರ್ಶವನ್ನು ನೀಡಲಾಗಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಲೆ ಅವರು ಶಿವಮೊಗ್ಗ ಜಿಲ್ಲೆಯವರಾಗಿರುವುದು, ಜಿಲ್ಲೆ ಪ್ರಮುಖ ರಾಜಕೀಯ ಬಲವನ್ನು ಹೊಂದಿರುವುದು ವಿಮಾನ ನಿಲ್ದಾಣದ ವಿನ್ಯಾಸದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಯಡಿಯೂರಪ್ಪ ಅವರು ಶಿಕಾರಿಪುರದಿಂದ ಬಂದವರಾಗಿದ್ದು, ಹೊಸಬಲೆಯವರು ಸೊರಬ ಮೂಲದವರಾಗಿದ್ದಾರೆ. ಇನ್ನು ಸಂತೋಷ್ ಅವರು ಆರ್‌ಎಸ್‌ಎಸ್ ಸಿದ್ಧಾಂತವನ್ನು ಉತ್ತೇಜಿಸುವ ಮೂಲಕ ಜಿಲ್ಲೆಯಲ್ಲಿ ದೀರ್ಘಕಾಲ ಕೆಲಸ ಮಾಡಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನಸಭೆ ಮಾಜಿ ಸ್ಪೀಕರ್ ಡಿಹೆಚ್ ಶಣಕರಮೂರ್ತಿಯವರೂ ಇದೇ ಜಿಲ್ಲೆಯವರೇ ಆಗಿದ್ದಾರೆ. 

ಶಿವಮೊಗ್ಗದ ಪಿಡಬ್ಲ್ಯುಡಿಯ ಕಾರ್ಯನಿರ್ವಾಹಕ ಎಂಜಿನಿಯರ್ (ವಿಶೇಷ ವಿಭಾಗ) ಸಂಪತ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿ, ಕಟ್ಟಡದ ವಿನ್ಯಾಸವನ್ನು ಮೊದಲ ಬಾರಿಗೆ ಶನಿವಾರ ಅನಾವರಣಗೊಳಿಸಲಾಗಿದ್ದು, ಇದು ಬಹುತೇಕ ಅಂತಿಮಗೊಂಡಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಎರಡನೇ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಭರವಸೆ ನೀಡಿದ್ದಾರೆ. ಕಟ್ಟಡವನ್ನು ರೂ.384 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

SCROLL FOR NEXT