ನಟ ಚೇತನ್ 
ರಾಜ್ಯ

ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿದ ನಟ ಚೇತನ್ ನನ್ನು ಅಮೆರಿಕಾಗೆ ಗಡಿಪಾರು ಮಾಡಿ: ವಿಎಚ್‌ಪಿ ಕಾರ್ಯಕರ್ತರ ಮನವಿ

ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕನ್ನಡ ನಟ ಚೇತನ್ ವಿರುದ್ಧ ಎರಡು ಎಫ್‌ಐಆರ್ ದಾಖಲಾದ ನಂತರ ಅಮೆರಿಕಾದ ನಾಗರಿಕತ್ವ ಹೊಂದಿರುವ ಚೇತನ್ ಅವರನ್ನು ಒತ್ತಾಯಪೂರ್ವಕ ಗಡಿಪಾರು ಮಾಡಬೇಕೆಂದು ವಿಎಚ್‌ಪಿ ಕಾರ್ಯಕರ್ತರೊಬ್ಬರು ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕನ್ನಡ ನಟ ಚೇತನ್ ವಿರುದ್ಧ ಎರಡು ಎಫ್‌ಐಆರ್ ದಾಖಲಾದ ನಂತರ ಅಮೆರಿಕಾದ ನಾಗರಿಕತ್ವ ಹೊಂದಿರುವ ಚೇತನ್ ಅವರನ್ನು ಒತ್ತಾಯಪೂರ್ವಕ ಗಡೀಪಾರು ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕರ್ತರೊಬ್ಬರು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಮನವಿ ಸಲ್ಲಿಸಿದ್ದಾರೆ.

ವಿಎಚ್‌ಪಿ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಅವರು ಶನಿವಾರ ಅರ್ಜಿಯನ್ನು ಸಲ್ಲಿಸಿದ್ದು, ಚೇತನ್ ಸಾಮಾಜಿಕ ಮಾಧ್ಯಮಗಳಲ್ಲಿ ಬ್ರಾಹ್ಮಣ ಸಮುದಾಯದ ವಿರುದ್ಧ ಕೆಟ್ಟ ಪದಪ್ರಯೋಗಗಳನ್ನು, ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

"ಅವರು ಯುನೈಟೆಡ್ ಸ್ಟೇಟ್ಸ್ ನ ನಾಗರಿಕರಾಗಿದ್ದಾರೆ ಮತ್ತು ತಾತ್ಕಾಲಿಕವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ಕೋಮುಭಾವನೆಗಳನ್ನು ಮತ್ತು ಜಾತಿಗಳ ಸಂಘರ್ಷವನ್ನು ಉಂಟುಮಾಡುತ್ತಿದ್ದಾರೆ, ಇದರ ಪರಿಣಾಮವಾಗಿ ಬಹುತ್ವ ನೀತಿಯನ್ನು ಹೊಂದಿರುವ ಭಾರತದಲ್ಲಿ ಸಾಮಾಜಿಕ ಅಸಮಾನತೆ ಉಂಟಾಗುತ್ತದೆ.

"ಯು.ಎಸ್. ಪ್ರಜೆಯಾಗಿರುವ ಅವರು ಅಂತಹ ಹೇಳಿಕೆಗಳನ್ನು ನೀಡುವ ಮೂಲಕ ವಿದೇಶಿಯರ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ, ಇದನ್ನು ಎಫ್‌ಆರ್‌ಆರ್‌ಒ ಗಂಭೀರವಾಗಿ ಪರಿಗಣಿಸಬೇಕು. ನಿಮ್ಮ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ಕಾರಣ ಅವರ ನಿವಾಸದ  ಪರವಾನಗಿಯನ್ನು ವಿದೇಶಿಯರ ಕಾಯ್ದೆಯಡಿ ರದ್ದುಪಡಿಸಬೇಕು ಮಾತ್ರವಲ್ಲದೆ  ಭಾರತೀಯ ಕಾನೂನುಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ತಕ್ಷಣ ತನ್ನ ದೇಶಕ್ಕೆ ಗಡೀಪಾರು ಮಾಡಲು ಅಗತ್ಯ ಆದೇಶಗಳನ್ನು ಸಹ ರವಾನಿಸಲು ನಾವು ನಿಮ್ಮ ಕಚೇರಿಗೆ ವಿನಂತಿಸುತ್ತೇವೆ" ಭಾರದ್ವಾಜ್ ಹೇಳಿದ್ದಾರೆ.

ಇತ್ತೀಚೆಗೆ, ನಟ ಬ್ರಾಹ್ಮಣವಾದವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸಿದೆ. ನಾವು ಬ್ರಾಹ್ಮಣ ಧರ್ಮವನ್ನು ಬೇರುಸಹಿತ ಕಿತ್ತುಹಾಕಬೇಕು ಅಂಬೇಡ್ಕರ್ . ''ಎಲ್ಲರೂ ಸಮಾನರಾಗಿ ಜನಿಸಿದಾಗ, ಬ್ರಾಹ್ಮಣರು ಮಾತ್ರ ಉನ್ನತರು ಮತ್ತು ಉಳಿದವರೆಲ್ಲರೂ ಕಡಿಮೆ ಎಂದು ಹೇಳುವುದುಸಂಪೂರ್ಣ ಅಸಂಬದ್ಧ. ಇದು ದೊಡ್ಡ ವಂಚನೆ'  ಎಂದು ಹೇಳಿದ್ದಾರೆ, ಇದಲ್ಲದೆ, ಬ್ರಾಹ್ಮಣ ಧರ್ಮವು ಬಸವ ಮತ್ತು ಬುದ್ಧನ ವಿಚಾರಗಳನ್ನು ಕೊಂದಿದೆ ಮತ್ತು ಬುದ್ಧ ಒಂದು ಹಂತದಲ್ಲಿ ಬ್ರಾಹ್ಮಣ ಧರ್ಮದ ವಿರುದ್ಧ ಹೋರಾಡಿದನು ಎಂದು ಅವರು ಹೇಳಿದ್ದಾರೆ.

ಚೇತನ್ ವಿರುದ್ಧ ಹಲಸೂರು ಗೇಟ್ ಮತ್ತು ಬಸವನಗುಡಿ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ. ಸಚಿವ ಶಿವರಾಮ್ ಹೆಬ್ಬಾರ್ ನಟನ ಬಂಧನಕ್ಕೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT