ರಾಜ್ಯ

ಕೋವಿಡ್-19: ರಾಜ್ಯದಲ್ಲಿ ಸತತ ನಾಲ್ಕನೇ ದಿನವೂ ಸೋಂಕು ಪ್ರಕರಣ ಇಳಿಕೆ

Manjula VN

ಬೆಂಗಳೂರು: ಕೋವಿಡ್ 2ನೇ ಅಲೆ ಕಟ್ಟಿಹಾಕುವ ಉದ್ದೇಶದಿಂದ ಸರ್ಕಾರ ಮತ್ತೆ ಲಾಕ್ಡೌನ್ ಜಾರಿಗೊಳಿಸಿದ ಪರಿಣಾಮ ರಾಜ್ಯದಲ್ಲಿ ಕೊರೋನಾ ಸೋಂಕು ಕೊನೆಯೂ ನಿಯಂತ್ರಣಕ್ಕೆ ಬಂದಿದೆ. ರಾಜ್ಯದಲ್ಲಿ ಸತತ ನಾಲ್ಕನೇ ದಿನವೂ ದೈನಂದಿನ ಸೋಂಕು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. 

ರಾಜ್ಯದಲ್ಲಿ ನಿನ್ನೆ 5,041 ಹೊಸ ಪ್ರಕರಣಗಳು ಪತ್ತೆಯಾಗಿದ್ದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 1,000ಕ್ಕಿಂತಲೂ ಕಡಿಮೆ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ ಕಳೆದ ಏಪ್ರಿಲ್ 4ರಂದು 4,553 ಪ್ರಕರಣ ಪತ್ತೆಯಾಗಿತ್ತು. 

ರಾಜ್ಯವು ಜೂನ್ 12 ರಂದು 9,785, ಜೂನ್ 13 ರಂದು 7,810, ಮತ್ತು ಜೂನ್ 14 ರಂದು 6,835 ಪ್ರಕರಣಗಳು ಪತ್ತೆಯಾಗಿದ್ದವು. ಇದರೊಂದಿಗೆ ರಾಜ್ಯದಲ್ಲಿ ಪ್ರಸ್ತುತ ಒಟ್ಟು ಸೋಂಕು ಪ್ರಕರಣ 27,77,010ಕ್ಕೆ ಏರಿಕೆಯಾಗಿದೆ. 

ಸೋಂಕು ಪ್ರಕರಣವಷ್ಟೇ ಅಲ್ಲದೆ, ರಾಜ್ಯದಲ್ಲಿ ಸಾವಿನ ಪ್ರಮಾಣ ಕೂಡ ಇಳಿಕೆಯಾಗಿದೆ. ಜೂನ್.12ರಂದು ಶೇ.0.35, ಜೂನ್ 13 ಶೇ.0.28, ಜೂನ್.14 ಶೇ.0.24 ದಾಖಲಾಗಿದೆ. ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ನಡುವಲ್ಲೇ ಸೋಂಕು ಪ್ರಕರಣ ಇಳಿಕೆಯಾಗಿದೆ. 

ಈ ನಡುವೆ ವಾರಗಳ ಬಳಿಕ ಬೆಂಗಳೂರು ನಗರದಲ್ಲಿಯೂ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ನಗರದಲ್ಲಿ ನಿನ್ನೆ 985 ಹೊಸ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ನಿನ್ನೆ 115 ಸಾವು ಸಂಭವಿಸಿದ್ದು, ಸಾವಿನ ಪ್ರಮಾಣ ಶೇ.1.19ಕ್ಕೆ ತಲುಪಿದೆ. 

SCROLL FOR NEXT