ರಾಜ್ಯ

ಸ್ಪುಟ್ನಿಕ್ ವಿ ಲಸಿಕೆ ಅಭಿಯಾನ ಮುಂದೂಡಿದ ಮಣಿಪಾಲ್ ಆಸ್ಪತ್ರೆ

Manjula VN

ಬೆಂಗಳೂರು; ಎರಡನೇ ಡೋಸ್ ಸ್ಪುಟ್ನಿಕ್ ವಿ ಲಸಿಕೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಮಾರುಕಟ್ಟೆ ಬಿಡುಗಡೆ ಮಾಡುವುದನ್ನು ಮುಂದೂಡಲಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ಹೇಳಿದೆ. 

ಸಮಸ್ಯೆಗಳು ಎದುರಾಗುವುದಕ್ಕೂ ಮುನ್ನ ಎರಡನೆಯ ಡೋಸ್ ಲಸಿಕೆ ಸಮರ್ಪಕವಾಗಿ ಸಂಗ್ರಹಿಸುವವರೆಗೆ ಅನ್ನು ಸ್ಪುಟ್ನಿಕ್ ವಿ ಲಸಿಕೆ ಅಭಿಯಾನವನ್ನು ಮುಂದೂಡುವ ನಿರ್ಧಾರಕ್ಕೆ ಬಂದಿದ್ದೇವೆ. ಸಾರ್ವಜನಿಕರಿಗೆ ಶೀಘ್ರಗತಿಯಲ್ಲಿ ಲಸಿಕೆ ವಿತರಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೊವಿಶೀಲ್ಡ್ ಮತ್ತು ಕೋವ್ಯಾಕ್ಸಿನ್​ ನಂತರ ಭಾರತದಲ್ಲಿ ತುರ್ತು ಸ್ಥಿತಿಯಲ್ಲಿ ಬಳಸಲು ಆನುಮತಿ ಪಡೆದಿರುವ ಮೂರನೇ ಲಸಿಕೆ ಸ್ಪುಟ್ನಿಕ್ ವಿ ಆಗಿದೆ.

ರಷ್ಯನ್ ಸಾವರೀನ್ ವೆಲ್ತ್ ಫಂಡ್ (ಆರ್​ಡಿಐಎಫ್) ನೆರವಿನಿಂದ ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾದ ಗಮಾಲೆಯಾ ಇನ್​ಸ್ಟಿಟ್ಯೂಟ್​ ಅಭಿವೃದ್ಧಿಪಡಿಸಿದ್ದು, ಜಾಗತಿವಾಗಿ ಆದರ ಮಾರ್ಕೆಟಿಂಗ್ ಸಹ ಮಾಡುತ್ತಿದೆ. 

ಸ್ಪುಟ್ನಿಕ್ ವಿ ಲಸಿಕೆಯು ಎರಡು-ಡೋಸ್​ಗಳ ಶಾಟ್ ಆಗಿದ್ದು ಇದು ಸೋಂಕನ್ನು ತಡೆಯುವಲ್ಲಿ ಶೇಕಡಾ 91.6 ರಷ್ಟು ಪರಿಣಾಮಕಾರಿಯಾಗಿದೆ. ಎರಡು ಡೋಸ್ ಲಸಿಕೆಗಳನ್ನು 21 ದಿನಗಳ ಅಂತರದಲ್ಲಿ ನೀಡಲಾಗುತ್ತದೆ.

SCROLL FOR NEXT