ರಾಜ್ಯ

ಸ್ವಚ್ಛ ಬೆಂಗಳೂರಿಗೆ ನಾಗರಿಕರ ಸಹಭಾಗಿತ್ವ ಅಗತ್ಯ- ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್

Nagaraja AB

ಬೆಂಗಳೂರು: ಬೆಂಗಳೂರು ಮಹಾನಗರವನ್ನು ಸ್ವಚ್ಛವಾಗಿಡಲು ಮಾತ್ರವಲ್ಲದೇ, ಸ್ವಚ್ಛ ಭಾರತ ಶ್ರೇಯಾಂಕದಲ್ಲಿ ಪ್ರಗತಿಯಾಗಲು ನಾಗರಿಕರ ಸಹಭಾಗಿತ್ವ ಅಗತ್ಯವಾಗಿದೆ ಎಂದು ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ನೂತನ ವಿಶೇಷ ಆಯುಕ್ತರಾಗಿ ಶನಿವಾರ ಡಿ. ರಂದೀಪ್ ಅವರಿಂದ ಅಧಿಕಾರ ಸ್ವೀಕರಿಸಿದ ಡಾ. ಹರೀಶ್ ಕುಮಾರ್ ತಿಳಿಸಿದರು.

ನಗರವನ್ನು ಸ್ವಚ್ಛವಾಗಿಡಲು ಎಲ್ಲಾ ಹಂತಗಳಲ್ಲಿ ನಾಗರಿಕರ ಸಹಭಾಗಿತ್ವ ಅಗತ್ಯವಿದೆ ಎಂದು ಕುಮಾರ್ ಹೇಳಿದರು. ಪ್ರತಿಯೊಬ್ಬ ನಾಗರಿಕನು ಕಸ ಸಂಗ್ರಹಣೆಯ ಮೊದಲ ಹಂತದಲ್ಲಿ ತೊಡಗಿಸಿಕೊಂಡರೆ ಮತ್ತು ತಮ್ಮ ಮನೆ ಬಾಗಿಲಿಗೆ ಬರುವ ವ್ಯಕ್ತಿಯೂ ಗೊತ್ತಿದ್ದರೆ, ಅಲ್ಲಿ ಪರಿಣಾಮ ಬೀರುತ್ತದೆ ಎಂದರು. ರಂದೀಪ್ ಇದೀಗ ಬಿಬಿಎಂಪಿ ಆರೋಗ್ಯ ಮತ್ತು ಐಟಿ ವಿಶೇಷ ಆಯುಕ್ತರಾಗಿ ಅಧಿಕಾರ ಪಡೆದಿದ್ದಾರೆ.

ಮಾಸ್ಕ್ ಮತ್ತಿತರ ವೈದ್ಯಕೀಯ ಉಪಕರಣಗಳ ವಿಲೇವಾರಿ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೌರ ಕಾರ್ಮಿಕರೊಂದಿಗೆ ಚರ್ಚಿಸಲಾಗುವುದು, ಇದು ಪ್ರಮುಖವಾಗಿದೆ ಎಂದು ಕುಮಾರ್ ಹೇಳಿದರು.

ನಾಗರಿಕರು ಹಾಗೂ ಸಿಬ್ಬಂದಿಯಿಂದ ಪ್ರತಿಕ್ರಿಯೆ ಮತ್ತು ಚುರುಕಾಗಿ ತೊಡಗಿಸಿಕೊಳ್ಳುವುದರಿಂದ ತ್ಯಾಜ್ಯ ಮುಕ್ತ ಸ್ವಚ್ಛ ನಗರವನ್ನಾಗಿ ಮಾಡಲು ನೆರವಾಗಲಿದೆ. ರಸ್ತೆ ಸ್ವಚ್ಛತೆ ಪ್ರಕ್ರಿಯೆಯಲ್ಲಿ ನಾಗಿರಕರು ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.

SCROLL FOR NEXT