ರಾಜ್ಯ

ಇದೇ ಮೊದಲು, ರಕ್ಷಿಸಲಾಗಿದ್ದ ಈಜಿಪ್ಟ್ ನ ರಣಹದ್ದುವನ್ನು ರಾಮನಗರ ಅಭಯಾರಣ್ಯಕ್ಕೆ ಬಿಡಲಾಗಿದೆ!

Vishwanath S

ಬೆಂಗಳೂರು: ರಾಜ್ಯದ ಮೊದಲ ರಣಹದ್ದು ಅಭಯಾರಣ್ಯವಾದ ರಾಮನಗರ ಗುಡ್ಡಕ್ಕೆ ನಾಲ್ಕು ತಿಂಗಳ ಹಳೆಯ ಈಜಿಪ್ಟಿನ ರಣಹದ್ದುವನ್ನು ಬಿಡಲಾಯಿತು.

ಪಶುವೈದ್ಯರು ಮತ್ತು ಪೀಪಲ್ ಫಾರ್ ಅನಿಮಲ್ಸ್(ಪಿಎಫ್‌ಎ) ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಸ್ವಯಂಸೇವಕರು ಈ ಹಕ್ಕಿಯನ್ನು ಬಿಟ್ಟರು. ಈ ಗುಡ್ಡಗಾಡಿಗೆ ಇಂತಹ ಹಕ್ಕಿ ಮೊದಲ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಎಫ್‌ಎ ಮುಖ್ಯ ಪಶುವೈದ್ಯ ಡಾ. ಕರ್ನಲ್ ನವಾಜ್ ಷರೀಫ್ ಅವರ ಪ್ರಕಾರ, ವೈಟ್‌ಫೀಲ್ಡ್‌ನ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ಸುಮಾರು ಎರಡೂವರೆ ತಿಂಗಳ ವಯಸ್ಸಿನಲ್ಲಿದ್ದಾಗ ಆರೋಗ್ಯ ಸ್ಥಿರವಾಗಿದ್ದರೂ ನಿರ್ಜಲೀಕರಣಗೊಂಡಿದ್ದ ರಣಹದ್ದನ್ನು ಸ್ಥಳೀಯರು ರಕ್ಷಿಸಿ ಪಿಎಫ್‌ಎಗೆ ಹಸ್ತಾಂತರಿಸಿದರು. 

ಕೂಡಲೇ ಪಕ್ಷಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಮತ್ತು ಆಮ್ಲಜನಕ ಪೂರೈಕೆಯನ್ನು ಸಹ ನೀಡಲಾಯಿತು. ಹಕ್ಕಿಯನ್ನು ಆರಂಭದಲ್ಲಿ ಕೈಯಿಂದ ಸಾಕಿದ್ದು ನಂತರ ಅದಕ್ಕೆ ತಾನೇ ಹಾರುವುದನ್ನು ಕಲಿಸಲಾಯಿತು. ಅದು ಸ್ವತಃ ಆಹಾರ ಹುಡುಕುವುದು ಮತ್ತು ಹಾರಾಟವನ್ನು ಕಲಿಯಿತು. ಅದು ತನ್ನ ಆಹಾರವನ್ನು ತಾನೇ ಹುಡುಕುತ್ತದೆ ಎಂಬ ವಿಶ್ವಾಸ ಬಂದ ನಂತರ ಅದನ್ನು ರಾಮನಗರದ ಗುಡ್ಡಗಾಡಿಗೆ ಬಿಡಲಾಯಿತು ಎಂದು ಡಾ. ಶರೀಫ್ ಹೇಳಿದರು. 

ಇದು ಅಪರೂಪದ ಪಕ್ಷಿ ಪ್ರಭೇದವಾಗಿದೆ. 2013ರಲ್ಲಿ ದಾಂಡೇಲಿಗೆ ಕೊನೆಯದಾಗಿ ಈಜಿಪ್ಟಿನ ರಣಹದ್ದುವೊಂದನ್ನು ಬಿಡಲಾಗಿತ್ತು. 

ರಾಮನಾಗರ ಅರಣ್ಯ ಉಪ ಸಂರಕ್ಷಣಾಧಿಕಾರಿ ದೇವರಾಜ್ ವಿ ಅವರು, ಪಕ್ಷಿಯ ಬಗ್ಗೆ ನಿಕಟ ಕಾವಲು ಇಡಲಾಗುತ್ತಿದೆ. ಪಕ್ಷಿ ಚೆನ್ನಾಗಿ ಹೊಂದಿಕೊಂಡಿದೆ ಎಂದು ತೋರುತ್ತದೆ. ಮೊದಲು ಕೆಲ ನಿಮಿಷಗಳವರೆಗೆ ಸುತ್ತಮುತ್ತಲಿನ ಪ್ರದೇಶವನ್ನು ಅನ್ವೇಷಿದ ನಂತರ ಆತ್ಮವಿಶ್ವಾಸದಿಂದ ಆಗಸಕ್ಕೆ ನೆಗೆಯಿತು. ಕ್ಷೀಣಿಸುತ್ತಿರುವ ಈ ಪಕ್ಷಿ ಸಂಕುಲವನ್ನು ರಕ್ಷಿಸಲು ಮತ್ತು ಅದರ ಉಳಿವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ಪ್ರಯತ್ನ ಎಂದರು.

ಕರ್ನಾಟಕ ಅರಣ್ಯ ಇಲಾಖೆಯ ಕೊನೆಯ ಮೌಲ್ಯಮಾಪನದ ಪ್ರಕಾರ, ಅಭಯಾರಣ್ಯದಲ್ಲಿ ಏಳು ಉದ್ದದ ರಣಹದ್ದುಗಳು ಮತ್ತು 13 ಈಜಿಪ್ಟಿನ ರಣಹದ್ದುಗಳಿವೆ.

SCROLL FOR NEXT