ರಾಜ್ಯ

ಬಿಬಿಎಂಪಿ ಲಸಿಕೆ ಸಂಗ್ರಹ ವಾಹನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

Manjula VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋವಿಡ್ ಲಸಿಕೆ ಅಭಿಯಾನದ ಅಂಗವಾಗಿ 'ಲಸಿಕಾ' ವಾಹನಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ಚಾಲನೆ ನೀಡಿದರು.

ಪ್ಯಾರೆಕ್ಸೆಲ್, ಫ್ಲೋಸರ್ವ್, ಕೀಸೈಟ್ ಮತ್ತು ಯುನೈಟೆಡ್ ವೇ ಬೆಂಗಳೂರಿನ ಸಹಭಾಗಿತ್ವದಲ್ಲಿ ಈ ವಾಹನಗಳನ್ನು ಪರಿಚಯಿಸಲಾಗಿದೆ. ಷಣ್ಮುಖ ಇನ್ನೋವೇಷನ್ಸ್ ತಯಾರಿಸಿರುವ ವಾಹನಗಳು ಐಸಿಎಂಆರ್ ಅನುಮೋದಿತ ಸಂಚಾರಿ ಪ್ರಯೋಗಾಲಯದ ಮೂಲಕ ಕೋವಿಡ್ ಪರೀಕ್ಷೆಗೆ ಸ್ವ್ಯಾಬ್ ಮಾದರಿಗಳನ್ನೂ ಕೂಡ ನಗರದ ವಿವಿಧ ಭಾಗಗಳಿಂದ ಸಂಗ್ರಹ ಮಾಡಲಿವೆ.

ಬಿಬಿಎಂಪಿಯ ಕೋವಿಡ್ ಲಸಿಕಾ ಅಭಿಯಾನದ ಅಂಗವಾಗಿ ಈ ವಾಹನಗಳು ಈ ವಾಹನಗಳು ನಗರದಾದ್ಯಂತ ಲಸಿಕೆಗಳನ್ನು ವಿತರಿಸುತ್ತವೆ. ಲಸಿಕಾ ಕೇಂದ್ರಗಳಿಗೆ ಲಸಿಕೆಗಳನ್ನು ವಾಹನದ ಮೂಲಕ ತಲುಪಿಸಲಾಗುತ್ತದೆ.

ಒಂದು ವಾಹನದಲ್ಲಿ 8 ಲಸಿಕೆ ಪೆಟ್ಟಿಗೆಗಳು/ 6 ಸಿರಿಂಜ್ ಪೆಟ್ಟಿಗೆಗಳನ್ನು ಸಾಗಿಸಬಲ್ಲದು. ಒಂದು ಬಾರಿಗೆ ಸುಮಾರು 9000 ಡೋಸ್ ಲಸಿಕೆಗಳನ್ನು ಈ ವಾಹನದಲ್ಲಿ ಸಾಗಿಸಬಹುದು.

ಕರ್ನಾಟಕದಲ್ಲಿಯೇ ಬೆಂಗಳೂರು ನಗರದಲ್ಲಿ ಕೋವಿಡ್ ಲಸಿಕೆ ಅಭಿಯಾನ ಚುರುಕಿನಿಂದ ನಡೆಯುತ್ತಿದೆ. ಸೋಮವಾರ ಮಹಾ ಲಸಿಕೆ ಅಭಿಯಾನದ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1,72,713 ಡೋಸ್ ಲಸಿಕೆಯನ್ನು ನೀಡಲಾಗಿದೆ.

SCROLL FOR NEXT