ರಾಜ್ಯ

ಶಾಸಕ ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ರಕ್ಷಣೆ ಇಲ್ಲ; ರೇಖಾ ಕದಿರೇಶ್ ಹತ್ಯೆ ರಾಜಕೀಯ ಪ್ರೇರಿತ: ಎನ್.ಆರ್. ರಮೇಶ್ 

Sumana Upadhyaya

ಬೆಂಗಳೂರು: ಬಿಜೆಪಿಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಸುರಕ್ಷತೆಯಿಲ್ಲ, ಅವರ ಬೆಂಬಲಿಗರೇ ಮಾಡಿರುವ ಕೊಲೆಯಿದು ಎಂದು ರಮೇಶ್ ಆರೋಪಿಸಿದ್ದಾರೆ.

ಇನ್ನು ಐದಾರು ತಿಂಗಳಲ್ಲಿ ಪಾಲಿಕೆ ಚುನಾವಣೆ ನಡೆಯಲಿದೆ. ಪಕ್ಷದ ಅಭ್ಯರ್ಥಿ ಎಂದು ರೇಖಾ ಕದಿರೇಶ್ ಅವರನ್ನೇ ಘೋಷಿಸಲಾಗಿತ್ತು. ಮುಂದಿನ ಚುನಾವಣೆಯಲ್ಲಿ ರೇಖಾ ಅವರೇ ಪುನರಾಯ್ಕೆ ಆಗುತ್ತಾರೆ, ಅದು ಆಗಬಾರದು ಎಂದು  ರಾಜಕೀಯ ದುರುದ್ದೇಶದಿಂದ ಅವರ ಜೊತೆ ಗುರುತಿಸಿಕೊಂಡಿದ್ದವರೇ, ರೇಖಾ ಅವರ ಜೊತೆ ಒಡನಾಟ ಇಟ್ಟುಕೊಂಡಿದ್ದವರಿಗೇ ಆಮಿಷವೊಡ್ಡಿ ಕೊಲೆ ಮಾಡಿಸಲಾಗಿದೆ ಎಂದು ಆರೋಪಿಸಿದರು.

ಇಂತಹ ಬೆಳವಣಿಗೆ ರಾಜಕೀಯದಲ್ಲಿ ಒಳ್ಳೆಯದಲ್ಲಿ, ಜಮೀರ್ ಅಹ್ಮದ್ ಅವರು ಕಾನೂನಿನ ಚೌಕಟ್ಟಿಗೆ, ಸಂವಿಧಾನಕ್ಕೆ ಬೆಲೆ ಕೊಡಬೇಕು, ಈ ರೀತಿ ತಮ್ಮ ಹಿಂಬಾಲಕರ ಮೂಲಕ ಸಮಾಜದಲ್ಲಿ ಕುಕೃತ್ಯಗಳನ್ನು ಮಾಡುವುದು ಸರಿಯಲ್ಲ ಎಂದರು.

SCROLL FOR NEXT