ರಾಜ್ಯ

ಬೆಂಗಳೂರು: ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿ ತೃತೀಯ ಲಿಂಗಿಗಳಿಗೆ ಕೋವಿಡ್ ಲಸಿಕಾ ಅಭಿಯಾನ

Shilpa D

ಬೆಂಗಳೂರು: ಪ್ರೈಡ್ ಮಂತ್ ಸ್ಮರಣಾರ್ಥ ಮಣಿಪಾಲ್ ಆಸ್ಪತ್ರೆ ಸಮೂಹ ಜೂನ್ 29 ರಿಂದ ಕೋವಿಡ್ 19 ಲಸಿಕಾ ಅಭಿಯಾನ ಆರಂಭಿಸಲಿದೆ. 

ಜೂನ್ 29 ರಿಂದ ಜುಲೈ 3 ರವೆರೆಗೆ ಲಸಿಕಾ ಅಭಿಯಾನ ನಡೆಯಲಿದ್ದು ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ, ತೃತೀಯ ಲಿಂಗಿ ಸಮುದಾಯಕ್ಕೆ ಆಗುತ್ತಿರುವ ತಾರತಮ್ಯವನ್ನು ತಪ್ಪಿಸಲು ಓಲ್ಡ್ ಏರ್ ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಲಸಿಕೆ ಹಾಕುವುದಾಗಿ ತಿಳಿಸಿದೆ.

ಸ್ಪುಟ್ನಿಕ್-ವಿ, ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಸ್ಲಾಟ್‌ಗಳನ್ನು ಕ್ರಮವಾಗಿ 1,145, 1,410 ಮತ್ತು 780 ರೂ. ಗಳ ವೆಚ್ಚದಲ್ಲಿ ಒದಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದೆ.

ತೃತೀಯ ಲಿಂಗಿಗಳು ಈಗಾಗಲೇ ಎಚ್ ಐವಿ, ಮತ್ತು ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರ ಜೊತೆಗೆ ಕೋವಿಡ್ 19 ಅವರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸದಂತೆ ಮಾಡಲು, ಅಪಾಯದಿಂದ ತಪ್ಪಿಸಲು ಅವರಿಗೆ ಲಸಿಕೆ ನೀಡಲಾಗುತ್ತದೆ, ಆಸ್ಪತ್ರೆಯ #vax4ALL ಅಭಿಯಾನದ ಒಂದು ಭಾಗವಾಗಿದೆ ಎಂದು ತಿಳಿಸಿದೆ.

SCROLL FOR NEXT