ರಾಜ್ಯ

ರಾಜ್ಯದಲ್ಲಿ ಕ್ಷೀಣಿಸುತ್ತಿರುವ ಕೊರೋನಾ: ನಿನ್ನೆ 3 ಸಾವಿರಕ್ಕಿಂತ ಕಡಿಮೆ ಕೇಸ್ ಪತ್ತೆ!

Manjula VN

ಬೆಂಗಳೂರು: ರಾಜ್ಯದಲ್ಲಿ ನಿನ್ನೆ 3 ಸಾವಿರಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಮರಳಿ ಸಾಮಾನ್ಯಕ್ಕೆ ಬರುವ ಸೂಚನೆಗಳು ಕಂಡು ಬರುತ್ತಿವೆ. 

ರಾಜ್ಯದಲ್ಲಿ ಸೋಮವಾರ 2,576 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮಾರ್ಚ್ 26ಕ್ಕೆ 2,566 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದಾಗಿ 94 ದಿನಗಳ ಬಳಿಕದ ಕನಿಷ್ಟ ಪ್ರಕರಣ ಪತ್ತೆಯಾಗಿದೆ. ಅದೇ ರೀತಿ ಪಾಸಿಟಿವಿಟಿ ದರ ಮತ್ತಷ್ಟು ಇಳಿಕೆ ಕಂಡಿದೆ. 

ಸೋಮವಾರ 1.93 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು, ಶೇ.1.92 ಪಾಸಿಟಿವಿಟಿ ದರ ಇದಾಗಿದ್ದು, ಎರಡನೇ ಅಲೆಯ ಆರಂಭಕ್ಕೂ ಮೊದಲ ದಿನ ಪ್ರಮಾಣಕ್ಕೆ ಹಿಂತಿರುಗಿದಂತಾಗಿದೆ. 

ಕಳೆದ 40 ದಿನಗಳಿಂದ ನಿರಂತರವಾಗಿ ಸೋಂಕಿತರ ಸಂಖ್ಯೆಗಿಂತ ಗುಣಮುಖರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ. ಈ ಕಾರಣದಿಂದ 6 ಲಕ್ಷ ದಾಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 97,592ಕ್ಕೆ ಇಳಿದಿದೆ. ಸೋಮವಾರವೂ 5,933 ಮಂದಿಯಲ್ಲಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 

ಈ ನಡುವೆ ಸತತ ಎರಡನೇ ದಿನ ನೂರಕ್ಕಿಂತ ಕಡಿಮೆ ಸಾವು ವರದಿಯಾಗಿದ್ದು, ಸೋಮವಾರ 92 ಮಂದಿ ಸಾವನ್ನಪ್ಪಿದ್ದರೆ, ಭಾನುವಾರ 89 ಮಂದಿ ಸಾವನ್ನಪ್ಪಿದ್ದರು. 

ರಾಜ್ಯದಲ್ಲಿ ಈ ವರೆಗೆ 28.37 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 27.04 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 34,836 ಮಂದಿ ಮರಣವನ್ನಪ್ಪಿದ್ದಾರೆ. ಒಟ್ಡಟು 3.39 ಕೋಟಿ ಕೋವಿಡ್ ಪರೀಕ್ಷೆ ನಡೆದಿದೆ. 

ಇನ್ನು ಬೆಂಗಳೂರು ನಗರದಲ್ಲಿ 563 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಮಾರ್ಚ್ 15 ರಂದು 550 ಮಂದಿಯಲ್ಲಿ ಸೋಂಕು ಪತ್ತೆಯಾದ 105 ದಿನಗಳ ಬಳಿಕದ ಅತ್ಯಂತ ಕಡಿಮೆ ಪ್ರಕಱಣ ದಾಖಲಾಗಿದೆ.

SCROLL FOR NEXT