ರಾಜ್ಯ

ಎಸ್‌ವಿಸಿಎಸ್‌ಎಲ್‌ಎಲ್ ವಂಚನೆ ಪ್ರಕರಣ: ಬ್ಯಾಂಕ್ ಅಧಿಕಾರಿಗಳಿಗೆ ನೋಟಿಸ್ ನೀಡಿದ ಬೆಂಗಳೂರು ಪೊಲೀಸರು

Vishwanath S

ಬೆಂಗಳೂರು: ವಂಚನೆ ಆರೋಪದ ಮೇಲೆ ಶ್ರೀ ವಸಿಷ್ಠ ಕ್ರೆಡಿಟ್ ಸೌಹರ್ದಾ ಸಹಕಾರಿ ಲಿಮಿಟೆಡ್‌ನ ನಿರ್ದೇಶಕರು ಮತ್ತು ಮಂಡಳಿ ಸದಸ್ಯರಿಗೆ ಹನುಮಂತ್‌ನಗರ ಪೊಲೀಸರು ನೋಟಿಸ್ ನೀಡಿದ್ದಾರೆ.

ಮೂರು ದಿನಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದ್ದಾರೆ. ಇನ್ನು ವಂಚನೆ ಸಂಬಂಧ ಈವರೆಗೆ ನಾಲ್ಕು ಹೂಡಿಕೆದಾರರು ಪ್ರಕರಣ ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಎನ್‌ಐಇಯೊಂದಿಗೆ ಮಾತನಾಡಿದ ತನಿಖಾ ಅಧಿಕಾರಿಯೊಬ್ಬರು, ಪೊಲೀಸ್ ತಂಡವೊಂದು ಬ್ಯಾಂಕ್‌ಗೆ ಹೋಗಿ ನೋಟಿಸ್ ನೀಡಿದ್ದು, ಇದನ್ನು ಅಧ್ಯಕ್ಷ ವೆನಕಟ ನಾರಾಯಣ ಕೆಎನ್ ಮತ್ತು ನಿರ್ದೇಶಕ ಕೃಷ್ಣ ಪ್ರಸಾದ್ ಸ್ವೀಕರಿಸಿದ್ದಾರೆ. ವಂಚನೆ, ಖೋಟಾ, ದುರುಪಯೋಗ ಮತ್ತು ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಆರೋಪದಡಿ ಮೂರು ದಿನಗಳೊಳಗೆ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಲಾಗಿದೆ.

ಬನ್ನೇರುಘಟ್ಟ ನಿವಾಸಿ ಅರುಣ್ ಬಿ.ಎನ್ ದೂರಿನ ಆಧಾರದ ಮೇಲೆ ಎರಡು ದಿನಗಳ ಹಿಂದೆ ಎಫ್‌ಐಆರ್ ದಾಖಲಿಸಲಾಗಿದೆ. ಅರುಣ್ ಅವರು ತಮ್ಮ ತಂದೆ ನಾಗರಾಜ್ ಬಿಟಿ (78) ಹೆಸರಲ್ಲಿ 99 ಲಕ್ಷ ರೂ. ಠೇವಣಿ ಇಟ್ಟಿದ್ದು ನವೆಂಬರ್ 2020ರವರೆಗೆ ಬ್ಯಾಂಕ್ ಬಡ್ಡಿ ನೀಡುತ್ತಿತ್ತು. ಆದರೆ ಅದು ಥಟ್ಟನೆ ನಿಂತುಹೋಯಿತು. ನಂತರ ಇದು ಠೇವಣಿಗಳನ್ನು ಹಿಂಪಡೆಯುವುದನ್ನು ಸಹ ನಿಲ್ಲಿಸಿತು. ಪದೇ ಪದೇ ಸಂಪರ್ಕಿಸಿದಾಗ, ಬ್ಯಾಂಕ್ ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿ ಅರುಣ್ ಅವರನ್ನು ಕೆಲವು ತಿಂಗಳು ಕಾಯುವಂತೆ ಕೇಳಿಕೊಂಡಿತು. 

ಕೆಲ ತಿಂಗಳ ಬಳಿಕ ಮತ್ತೆ ಅರುಣ್ ಬ್ಯಾಂಕಿನವರನ್ನು ಮತ್ತೆ ಸಂಪರ್ಕಿಸಲು ಪುನರಾರಂಭಿಸಿದರು. ಆದರೆ ಜೂನ್ 2021ರವರೆಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಹೀಗಾಗಿ ಅರುಣ್ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ. ಅರುಣ್ ಅವರ ದೂರಿನ ಬಗ್ಗೆ ತಿಳಿದ ನಂತರ, ಕೆಲ ಇತರ ಹೂಡಿಕೆದಾರರು ಪೊಲೀಸರನ್ನು ಸಂಪರ್ಕಿಸಿದರು.

ಹೂಡಿಕೆದಾರರಿಂದ ಪೊಲೀಸರು ಹೂಡಿಕೆ ವಿವರಗಳನ್ನು ಕೇಳಿದ್ದಾರೆ. ಅಲ್ಲದೆ ಸಂಭವನೀಯ ದುರುಪಯೋಗದಲ್ಲಿ ಭಾಗಿಯಾಗಿರುವವರನ್ನು ಪ್ರಶ್ನಿಸಲು ಸಹ ಯೋಜಿಸಿದ್ದಾರೆ. ಅಲ್ಲದೆ ಕೆಲವು ಹೂಡಿಕೆದಾರರು ತಮ್ಮ ಹಣವನ್ನು ಕಳೆದುಕೊಳ್ಳುವ ಭಯದಿಂದ ದೂರುಗಳನ್ನು ನೀಡಲು ಮುಂದೆ ಬರಲು ಹೆದರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT