ರಾಜ್ಯ

ಶಾಲಾ ಶುಲ್ಕ ವಿವಾದದಲ್ಲಿ ಭಾವನೆಗಳನ್ನು ಪರಿಗಣಿಸಲು ಸಾಧ್ಯವಿಲ್ಲ: ಹೈಕೋರ್ಟ್ 

Sumana Upadhyaya

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ ಖಾಸಗಿ ಶಾಲೆಗಳ ಶುಲ್ಕ ವಿವಾದವನ್ನು ಬಗೆಹರಿಸಲು ಸಮಿತಿಯನ್ನು ರಚಿಸಿ ನ್ಯಾಯಾಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅನುಮತಿ ಕೇಳಿರುವ ರಾಜ್ಯ ಸರ್ಕಾರದ ಹೇಳಿಕೆ ಭಾವನಾತ್ಮಕವಾಗಿದೆ ಎಂದು ಹೈಕೋರ್ಟ್ ಬಣ್ಣಿಸಿದೆ.

ಕೋವಿಡ್-19 ಸಂಕಷ್ಟದಿಂದ ಪೋಷಕರಿಗೆ ಆಗುತ್ತಿರುವ ಸಂಕಷ್ಟವನ್ನು ಪರಿಗಣಿಸಿ ಖಾಸಗಿ ಶಾಲೆಗಳ ಪರ ಅಡ್ವೊಕೇಟ್ ನಿನ್ನೆ ಹೈಕೋರ್ಟ್ ಮುಂದೆ ವಾದ ಮಂಡಿಸಿ ತಾವು ಕಾನೂನು ಪ್ರಕಾರವೇ ಸಾಗುತ್ತಿದ್ದು ಭಾವನಾತ್ಮಕ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.

ನ್ಯಾಯಮೂರ್ತಿಗಳಾದ ಸಚಿನ್ ಶಂಕರ್ ಮಗದುಮ್ ಅವರ ಮುಂದೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಸಲ್ಲಿಸಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಲವು ಖಾಸಗಿ ಶಾಲೆಗಳ ಪ್ರತಿನಿಧಿಯಾದ ಹಿರಿಯ ವಕೀಲ ಮಧುಸೂದನ್ ಆರ್ ನಾಯಕ್, ಲಾಕ್ ಡೌನ್ ನಿಂದಾಗಿ ಹಲವರು ತಮ್ಮ ಜೀವನೋಪಾಯದ ಆದಾಯವನ್ನು ಕಳೆದುಕೊಂಡಿದ್ದಾರೆ, ಕೆಲವರ ಆರ್ಥಿಕ ಪರಿಸ್ಥಿತಿಯಂತೂ ಚಿಂತಾಜನಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾವನಾತ್ಮಕ ಹೇಳಿಕೆಗಳಿಗೆ ಪ್ರಾಮುಖ್ಯತೆ ನೀಡದೆ ಕಾನೂನು ಪ್ರಕಾರವೇ ಸಾಗುತ್ತೇವೆ ಎಂದಿದ್ದಾರೆ.

ಟಿಎಂಎ ಪೈ ಫೌಂಡೇಶನ್ ಮತ್ತು ರಾಜಸ್ಥಾನ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದಂತೆ ಶಾಲೆಗಳ ನಿರ್ವಹಣೆಯ ವ್ಯಾಪ್ತಿಯಲ್ಲಿರುವ ಶುಲ್ಕವನ್ನು ನಿಯಂತ್ರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಯಾರೊಬ್ಬರ ಭಾವನಾತ್ಮಕ ಹೇಳಿಕೆಯನ್ನು ಪೂರೈಸಲು ಸಾಮಾನ್ಯ ಆದೇಶವನ್ನು ಪರಿಗಣಿಸಲಾಗುವುದಿಲ್ಲ ಎಂದು ಹಿರಿಯ ವಕೀಲ ಮಧುಸೂದನ್ ಆರ್ ನಾಯಕ್ ಹೇಳಿದ್ದಾರೆ.

SCROLL FOR NEXT