ರಾಜ್ಯ

ಸಿಲಿಕಾನ್ ಸಿಟಿ ಪೊಲೀಸರಿಂದ ಕೋವಿಡ್-19 ಜಾಗೃತಿ ವಿಡಿಯೋ ಬಿಡುಗಡೆ

Nagaraja AB

ಬೆಂಗಳೂರು: ದಿನೇ ದಿನೇ ಕೊರೊನಾ‌ ಎರಡನೇ ಅಲೆ ತನ್ನ ಬಾಹು ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೀಗಾಗಿ ಈ ಕುರಿತು ಸಾರ್ವಜನಿಕರು ಜಾಗೃತಿಯಿಂದ ಇರಬೇಕು ಎಂದು ಕೋರಿ ನಗರ ಕಮಿಷನರೇಟ್ ವತಿಯಿಂದ ವಿಡಿಯೋ ಒಂದು ಬಿಡುಗಡೆ ಮಾಡಲಾಗಿದೆ.

ಪೇದೆಯಿಂದ ಹಿಡಿದು ಪೊಲೀಸ್ ಆಯುಕ್ತರವರೆಗೂ ಎಲ್ಲರೂ ವಿಡಿಯೋದಲ್ಲಿ ಜಾಗೃತಿ  ಕುರಿತಾದ ಕಿವಿ ಮಾತುಗಳನ್ನು ಹೇಳಿದ್ದಾರೆ.

ಮಾಸ್ಕ್, ಸಾಮಾಜಿಕ ಅಂತರ, ಲಸಿಕೆ  ಇವು ಕೋವಿಡ್ ಸಾಂಕ್ರಾಮಿಕ ವಿರುದ್ಧ ಹೋರಾಡಲು ನಮ್ಮ ಬಳಿಯಿರುವ ಅಸ್ತ್ರಗಳು. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡದೇ ಈಗಲೇ ಜಾಗೃತರಾಗೋಣ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಹಾಗೂ ತಪ್ಪದೇ 
ಲಸಿಕೆ ತೆಗೆದುಕೊಳ್ಳಿ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮನವಿ  ಮಾಡಿದ್ದಾರೆ.

SCROLL FOR NEXT