ರಾಜ್ಯ

ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಿಂದಾಗಿ ಕೋವಿಡ್ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ!

Manjula VN

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೊರೋನಾ ಸೋಂಕಿತರ ಚಿಕಿತ್ಸೆಗೆ 14 ಔಷಧಿಗಳು ಪ್ರಮುಖವಾಗಿದ್ದು, ಈಗಾಗಲೇ ಆಸ್ಪತ್ರೆಗಳಲ್ಲಿ ಈ ಔಷಧಿಗಳ ಕೊರತೆ ಶುರುವಾಗಿದೆ ಎಂದು ತಿಳಿದುಬಂದಿದೆ. 

ಔಷಧಿಗಳ ಕೊರತೆ ಶುರುವಾಗಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರಿಗೆ ಪತ್ರ ಬರೆದಿರುವ ನಗರ ಹರ್ಷ ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ಸಮಸ್ಯೆಯನ್ನು ವಿವರಿಸಿದ್ದಾರೆ. 

ರೆಮ್ಡೆಸಿವಿರ್ 7 ಚುಚ್ಚುಮದ್ದುಗಳು, ಎನೋಕ್ಸೋಪರೀನ್ 60 ಎಂಜಿ ಮತ್ತು 40 ಎಂಜಿ, ಆಂಫೊಟೆರಿಸಿನ್ ಬಿ 50 ಎಂಜಿ, ಮೀಥೈಲ್ ಪ್ರೆಡಿನಿಸೋಲೋನ್ 40 ಎಂಜಿ, 125 ಎಂಹೆಚ್, 500 ಎಂಜಿ ಮತ್ತು 1 ಗ್ರಾಂ, ಬೆವಾಟಾಸ್ 400 ಎಂಜಿ (ಬೆವಾಸಿಜುಮಾಬ್) ಮತ್ತು ಅಲ್ಜುಮಾಬ್ ಎಲ್ (ಇಟೊಲಿಜುಮಾಬ್). ಪಲ್ಸ್ ಆಕ್ಸಿಮೀಟರ್, ಸ್ಟೀಮರ್, ಗ್ಲೌಸ್ ಗಳ ಕೊರತೆ ಶುರುವಾಗಿದೆ. 

ಇದರ ಜೊತೆಗೆ ಇನ್ಹಲಾಂಟ್ ಕ್ಯಾಪ್ (ಕಾರ್ವೊಲ್ ಪ್ಲಸ್, ಸಿನಾರೆಸ್ಟ್ ವಾಪೋಕಪ್ಸ್) ಮತ್ತು ಡಾಕ್ಸಿಸೈಕ್ಲಿನ್ ಪ್ಲಸ್, ಲ್ಯಾಕ್ಟೋಬಾಸಿಲಸ್ ಕ್ಯಾಪ್ಸುಲ್ ಗಳು, ಡೊಲೋಟಸ್ ಎಸ್‌ಎಫ್, ಜೆರೊಟಸ್ ಎಕ್ಸ್‌ಪಿ ಮತ್ತು ಪಲ್ಮೋಕ್ಲಿಯರ್ ಕೆಮ್ಮು ಸಿರಪ್ ಗಳ ಕೊರತೆಯೂ ಆರಂಭವಾಗಿದೆ. ಈ ಔಷಧಿಗಳು ಎಲ್ಲಿಯೂ ಸಿಗುತ್ತಿಲ್ಲ ಎಂದಿದ್ದಾರೆ. 

ಈ ಔಷಧಿಗಳು ಕೊರೋನಾ ಸೋಂಕಿತರ ಚಿಕಿತ್ಸೆಗೆ ಅತ್ಯಗತ್ಯವಾಗಿದ್ದು, ಯಾವುದೇ ಔಷಧಿಗಳು ಅಂಗಡಿಗಳು, ಸರಬರಾಜುದಾರರ ಬಳಿಯೂ ದೊರೆಯುತ್ತಿಲ್ಲ. ನಮ್ಮ ಬಳಿ ಔಷಧಿಗಳಿದ್ದರೂ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಔಷಧಿಗಳು ಸಾಕಾಗುವುದಿಲ್ಲ ಎಂದು ತಿಳಿಸಿದ್ದಾರೆ. 

ರಾಜಾಜಿನಗರದಲ್ಲಿರುವ ಔಷಧಿ ಅಂಗಡಿಗಳ ಮಾಲೀಕರು ಮಾತನಾಡಿ, ಆಕ್ಸಿಜನ್ ಮಾಸ್ಕ್, ಗ್ಲೌಸ್ ಗಳು ಹಾಗೂ ಇತರೆ ಔಷಧಿಗಳ ಕೊರತೆ ಶುರುವಾಗಿದೆ ಎಂದು ಹೇಳಿದ್ದಾರೆ. 

SCROLL FOR NEXT