ರಾಜ್ಯ

ಡೋಂಟ್ ವರಿ: ಕೋವಿಡ್ ಲಸಿಕೆ ತೆಗೆದುಕೊಂಡ 14 ದಿನಗಳ ನಂತರ ರಕ್ತದಾನ ಮಾಡಬಹುದು!

Shilpa D

ಬೆಂಗಳೂರು: ಬ್ಲಡ್ ಬ್ಯಾಂಕ್ ಮತ್ತು ಅಗತ್ಯವಿರುವವರಿಗೆ ರಕ್ತ ವರ್ಗಾವಣೆ ಅಗತ್ಯ ಇರುವವರಿಗೆ ಇಲ್ಲಿದೆ ಗುಡ್ ನ್ಯೂಸ್, ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ರಕ್ತದಾನ ಮಾಡುವ ಅವಧಿಯನ್ನು 28 ರಿಂದ 14 ದಿನಗಳಿಗೆ ಇಳಿಸಿ ರಾಷ್ಟ್ರೀಯ ರಕ್ತ ಮಂಡಳಿಯು ಆದೇಶ ಹೊರಡಿಸಿದೆ.

ಈ ಮೊದಲಿನ ಆದೇಶವನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತು. "ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಾಗುವಂತೆ ಮಾಡಿರುವುದರಿಂದ ಮತ್ತು ದೇಶದಲ್ಲಿ ಯಾವುದೇ ನೇರ ಲಸಿಕೆ ಲಭ್ಯವಿಲ್ಲದ ಕಾರಣ, ಸಲಹಾ ಪರಿಶೀಲನೆಗಾಗಿ ಡಿಜಿಎಚ್‌ಎಸ್ ಅಧ್ಯಕ್ಷ ಡಾ.ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ತಜ್ಞರ ತಂಡ ರಚಿಸಲಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ. .

ರಾಷ್ಟ್ರೀಯ ರಕ್ತ ಮಂಡಳಿ ಜೊತೆ ತಜ್ಞರ ತಂಡ ಚರ್ಚೆ ನಡೆಸಿದ ನಂತರ ಎನ್ ಬಿಟಿಸಿ ನಿರ್ದೇಶಕ ಡಾ.ಸುನೀಲ್ ಈ ಆದೇಶಕ್ಕೆ ಸಹಿ ಮಾಡಿದ್ದಾರೆ.

ಕೋವಿಡ್ ಲಸಿಕೆ ಎರಡು ಡೋಸ್ ತೆಗೆದುಕೊಂಡ ನಂತರ 56 ದಿನಗಳ ವರೆಗೆ ರಕ್ತದಾನ ಮಾಡುವಂತಿಲ್ಲ ಎಂದು ಮೂಲ ಆದೇಶದಲ್ಲಿತ್ತು.

SCROLL FOR NEXT