ರಾಜ್ಯ

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತಜ್ಞರ ತಂಡ ಭೇಟಿ, ಪರಿಶೀಲನೆ

Manjula VN

ಚಾಮರಾಜನಗರ: ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಇದೀಗ ಜಿಲ್ಲಾಸ್ಪತ್ರೆಗೆ ಪರಿಣಿತರ ತಂಡ ರವಾನಿಸಿದ್ದು, ಈ ತಜ್ಞರ ತಂಡ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಮೈಸೂರು ಜಿಲ್ಲಾಸ್ಪತ್ರೆ ಆರ್'ಎಂಓ ಡಾ.ನಾಯಜ್ ಪಾಷಾ, ಪಿಕೆಟಿಬಿ ಆಸ್ಪತ್ರೆ ಅಧೀಕ್ಷಕ ಡಾ.ವಿರೂಪಾಕ್ಷ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯ ವ್ಯವಸ್ಥೆ, ರೋಗಿಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಆಸ್ಪತ್ರೆಯ ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದೇವೆಂದು ಹೇಳಿದರು. 

ದಿನನಿತ್ಯ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ, ಆಸ್ಪತ್ರೆಯಲ್ಲಿನ ಔಷಧಿ ಹಾಗೂ ಐಸಿಯು ಬೆಡ್ ಗಳ ಸಂಖ್ಯೆ ಕಲೆ ಹಾಕುತ್ತಿದ್ದೇವೆ. 2ನೇ ಅಲೆಯಲ್ಲಿ ಇಡೀ ವಿಶ್ವದಲ್ಲೇ ಡೆತ್ ರೇಟ್ ಜಾಸ್ತಿ ಇದೆ. ಮಾನವ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕುಟುಂಬದವರನ್ನು ಕಳೆದುಕೊಂಡಾಗ ವರ್ಷ ಕಳೆದರೂ ನೋವು ಕಡಿಮಯಾಗುವುದಿಲ್ಲ. ಪ್ರತಿಯೊಬ್ಬರನ್ನು ಬದುಕಿಸಲು ದಿನನಿತ್ಯ ಪ್ರಯತ್ನಿಸುತ್ತಿದ್ದೇವೆ. ದಿನನಿತ್ಯ ಬೆಳವಣಿಗೆ ಪರಿಶೀಲಿಸುತ್ತಲೇ ಇದ್ದೇವೆ. ಆಸ್ಪತ್ರೆ ವೈದ್ಯರ ಜೊತೆಗೂ ಸಮಾಲೋಚನೆ ನಡೆಸಿದ್ದೇವೆಂದು ತಿಳಿಸಿದರು.

SCROLL FOR NEXT