ರಾಜ್ಯ

ಕೋವಿನ್ ನಲ್ಲಿ ಕೋವಿಡ್-19 ಲಸಿಕೆ ನೋಂದಣಿ ಪ್ರಕ್ರಿಯೆ ಸಮಸ್ಯೆ: ಸಹಾಯಕ್ಕೆ ಟೆಕ್ಕಿಗಳು ಮುಂದು!

Manjula VN

ಬೆಂಗಳೂರು: ಯಾವುದೇ ಕ್ಷೇತ್ರದಲ್ಲಿ ಸಮಸ್ಯೆಗಳು ಎದುರಾದರೂ ತಂತ್ರಜ್ಞಾನ ಮೂಲಕ ಸಾಫ್ಟ್ ಇಂಜಿನಿಯರ್ ಗಳು ಪರಿಹಾರ ಹುಡುಕಿಕೊಡುತ್ತಾರೆ. ಆದರೆ, ಕೋವಿಡ್ ಪೋರ್ಟಲ್ ನಲ್ಲಿ 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನ ಜನರಿಗೆ ಲಸಿಕೆ ಹಾಕಿಸಿಕೊಳ್ಳಲು ನೋಂದಾಣಿ ಮಾಡಿಕೊಳ್ಳುವ ವಿಚಾರದಲ್ಲಿ ಮಾತ್ರ ಟೆಕ್ಕಿಗಳಿಗೂ ಸಂಕಷ್ಟಗಳು ಎದುರಾಗುತ್ತಿವೆ. 

ಕೋವಿಡ್ ಪೋರ್ಟಲ್ ನಲ್ಲಿ ಎದುರಾಗುತ್ತಿದ್ದ ಡೇಟಾ ಎಂಟ್ರಿ ದೋಷ ಸರಿಪಡಿಸಲು 4 ಅಂಕಿಗಳ ಸೆಕ್ಯೂರಿಟಿ ಕೋಡ್ ಪರಿಚಯಿಸುವುದಾಗಿ ನಿನ್ನೆಯಷ್ಟೇ ಸರ್ಕಾರ ಹೇಳಿತ್ತು. ಆದರೂ, ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳುವಲ್ಲಿ ಸಾಕಷ್ಟು ಜನರಿಗೆ ಸಮಸ್ಯೆಗಳು ಎದುರಾಗುತ್ತಲೇ ಇದೆ. ಪ್ರಮುಖವಾಗಿ ಮೆಟ್ರೋ ನಗರದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. 

18-45 ವರ್ಷದವರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ ಬಳಿಕ ಈ ವರೆಗೂ ಸುಮಾರು 5,44,33,405 ಜನರು ತಮ್ಮ ಹೆಸರುಗಳನ್ನು ಕೋವಿಡ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಹೆಸರು ನೊಂದಾಯಿಸಿಕೊಳ್ಳಲು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸಾಫ್ಟ್ ಎಂಜಿನಿಯರ್ ಹಾಗೂ ಕೋಡರ್ಸ್ ಗಳು ಸಹಾಯಕ್ಕೆ ಧಾವಿಸಿದರೂ ಕೂಡ ಸಮಸ್ಯೆ ಬಗೆಹರಿಯುತ್ತಿಲ್ಲ. ಟೆಕ್ಕಿಗಳಿಗೂ ಸಮಸ್ಯೆಗಳು ಎದುರಾಗುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Getjabs.in ಅನ್ನು ಅಭಿವೃದ್ಧಿಪಡಿಸಿದ ಶ್ಯಾಮ್ ಸುಂದರ್ ಅವರು ಮಾತನಾಡಿ, ಜಿಲ್ಲೆಗಳಲ್ಲಿ ಲಸಿಕೆ ಲಭ್ಯವಾದ ಕೂಡಲೇ ಪೋರ್ಟಲ್ ಚಂದಾದಾರರಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ಬಳಿಕ ಜನರು ಲಾಗಿನ್ ಆಗಿ ಕೆವೈಸಿ ಮಾಹಿತಿಗಲನ್ನು ನಮೂದಿಸಿ ಲಸಿಕೆ ಪಡೆಯಬಹುದಾಗಿದೆ. ಕೆಲವು ನಗರಗಳಲ್ಲಿ ಲಸಿಕೆಗಳ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆ ತಡವಾಗುತ್ತಿವೆ ಎಂದು ಹೇಳಿದ್ದಾರೆ. 

ಕೆಲವೆಡೆ ನಿಯಮಿತ ಪ್ರಮಾಣದಲ್ಲಿ ಲಸಿಕೆ ಲಭ್ಯವಿದ್ದು, ಇದರಿಂದ ಸಮಸ್ಯೆಗಳು ಎದುರಾಗುತ್ತಿವೆ ಎಂದು ಕೋವಿನ್ ಸಂಸ್ಥೆ ಮುಖ್ಯಸ್ಥ ಆರ್.ಎಸ್.ಶರ್ಮಾ ಅವರು ತಿಳಿಸಿದ್ದಾರೆ. ಇದೇ ವೇಳೆ ಪೋರ್ಟಲ್ ನಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ತಿಳಿಸಿದ್ದಾರೆ. 

SCROLL FOR NEXT