ರಾಜ್ಯ

ಲಾಕ್ ಡೌನ್ ಹೆಸರಲ್ಲಿ ಜನರ ಮೇಲೆ ದರ್ಪ ತೋರಿಸುವುದು ನಿಲ್ಲಿಸಿ ಅವರ ಜೀವನಕ್ಕೆ ಕ್ರಮ ಕೈಗೊಳ್ಳಿ: ಹೆಚ್ ಡಿ ಕುಮಾರಸ್ವಾಮಿ ಸಲಹೆ 

Sumana Upadhyaya

ಬೆಂಗಳೂರು: ಜನಸಂಚಾರ ತಡೆಯುವುದು ಲಾಕ್ ಡೌನ್ ಎಂದು ಭಾವಿಸಿರುವ ರಾಜ್ಯ ಸರ್ಕಾರ ಜನರ ಜೀವನದ ಕಷ್ಟಗಳನ್ನು ಅರ್ಥ ಮಾಡಿಕೊಳ್ಳದಿರುವುದು ದುರಂತ. ಜನಹಿತದ ಲಾಕ್ ಡೌನ್ ಬದಲು ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಜಾರಿಯಾದರೆ ಹೇಗೆ ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ, ಕೇರಳ, ತಮಿಳು ನಾಡು, ಪಶ್ಚಿಮ ಬಂಗಾಳ ರಾಜ್ಯಗಳು ಪೂರ್ವ ಸಿದ್ಧತೆ ಮಾಡಿಕೊಂಡು ಜನರಿಗೆ ಆಹಾರ ಸೇರಿದಂತೆ ಇತರ ಕೆಲವು ಮೂಲಭೂತ ಪರಿಹಾರಗಳನ್ನು ಘೋಷಿಸಿ ಲಾಕ್ ಡೌನ್ ತಂದಿವೆ. ಆಂಧ್ರ ಪ್ರದೇಶದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದು ಸರ್ಕಾರದ ಜವಾಬ್ದಾರಿಯುತ ನಡೆ. ಅದು ಬಿಟ್ಟು ಕೇಂದ್ರದ ಆಣತಿಯಂತೆ ಬಡಜನರಿಗೆ ಕನಿಷ್ಠ ಸೌಲಭ್ಯ ನೀಡದೆ ಲಾಕ್ ಡೌನ್ ಜಾರಿ ಮಾಡಿದರೆ ಜನರು ಹೇಗೆ ಬದುಕಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಮನೆಗಳಿಂದ ಹೊರ ಬರುವ ಜನರ ಮೇಲೆ ದರ್ಪ ಪ್ರದರ್ಶಿಸುವುದನ್ನು ಬಿಟ್ಟು,  ಜನ ಹೊರಗೆ ಬಾರದಂತೆ ಅವರ ಅಗತ್ಯಗಳನ್ನು ಪೂರೈಸುವ, ಪರಿಹಾರ ಒದಗಿಸುವ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು. ಈ ವಿಚಾರದಲ್ಲಿ ನೆರೆ ರಾಜ್ಯಗಳು ಅನುಸರಿಸುತ್ತಿರುವ ಕ್ರಮಗಳನ್ನು ರಾಜ್ಯ ಅವಲೋಕಿಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

SCROLL FOR NEXT