ರಾಜ್ಯ

ಕೋವಿಡ್-19 ಮೂರನೇ ಅಲೆಗೆ ಸಿದ್ಧರಾಗಿ: ಸಿಎಂ ಯಡಿಯೂರಪ್ಪ ಸೂಚನೆ

Shilpa D

ಬೆಂಗಳೂರು: ಕೋವಿಡ್‌ ಮೂರನೇ ಅಲೆ ನಿಭಾಯಿಸಲು ಈಗಿನಿಂದಲೇ ಸಿದ್ಧರಾಗಬೇಕಿದ್ದು, ತಕ್ಷಣವೇ ಅದಕ್ಕೊಂದು ಕಾರ್ಯಪಡೆ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ರಾಜ್ಯದಲ್ಲಿ ಕೊರೋನಾದಿಂದ ಒಂದೇ ದಿನದಲ್ಲಿ 596 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ಎರಡನೇ ಅಲೆ ನಿಯಂತ್ರಣದ ಕುರಿತು ಕಾವೇರಿಯಲ್ಲಿ ಸಚಿವರು ಮತ್ತು ಅಧಿಕಾರಿಗಳ ಜತೆ ಏರ್ಪಡಿಸಿದ್ದ ಸಭೆಯಲ್ಲಿ ಸಿಎಂ ಮಾತನಾಡಿದರು.

ಮೂರನೇ ಅಲೆಯ ಮುನ್ನೆಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅದನ್ನು ಸಮರ್ಥವಾಗಿ ನಿಯಂತ್ರಿಸಲು ಕಾರ್ಯತಂತ್ರ ರೂಪಿಸಬೇಕು ಎಂದು ಹೇಳಿದರು.

ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು. ತುರ್ತು ಅಗತ್ಯವಿರುವ ರೋಗಿಗಳಿಗೆ ಬೆಡ್‌ ಹಂಚಿಕೆಗೆ ಕ್ರಮವಹಿಸುವುದು ಮತ್ತು ರೆಮ್‌ಡಿಸಿವಿರ್‌ ಅನ್ನು ಅಗತ್ಯಕ್ಕೆ ಅನುಸಾರ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು. 

ಖಾಸಗಿ ಆಸ್ಪತ್ರೆ ಬೆಡ್‌ಗಳ ಬಗ್ಗೆ ನಿಗಾ ಇಡಬೇಕು. ಆಮ್ಲಜನಕ, ರೆಮ್‌ಡಿಸಿವಿರ್‌ ಹಾಗೂ ಬೆಡ್‌ ಸೇರಿದಂತೆ ಇತರ ವಿಷಯಗಳಲ್ಲಿ ಅಕ್ರಮ ಕಂಡು ಬಂದರೆ ಕೈಗೊಳ್ಳಬೇಕು. ವಾರ್‌ ರೂಮ್‌ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ಎಂದರು.

ಹಂತ– ಹಂತವಾಗಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ಆಸ್ಪತ್ರೆಗಳಿಗೆ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹಾಕಲು ಈಗಿನಿಂದಲೇ ಕೆಲಸ ಶುರು ಮಾಡಲು ಯಡಿಯೂರಪ್ಪ ಸೂಚಿಸಿದರು.

ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ವೈರಾಲಜಿಸ್ಟ್‌ಗಳ ಪ್ರಕಾರ ಮೂರನೇ ಅಲೆಯಿಂದ ಯುವ ಪೀಳಿಗೆಗೆ ಹೆಚ್ಚಿನ ಅಪಾಯವಿದೆ. ಈ ವರ್ಷದ ಜುಲೈ-ಆಗಸ್ಟ್‌ನಲ್ಲಿ  ಕೋವಿಡ್ ಮೂರನೇ ಅಲೆ ಸಾಧ್ಯತೆಯಿದೆ ಹೀಗಾಗಿ ನಾವು ಅದನ್ನು ಎದುರಿಸಲು ಸರ್ವಸನ್ನದ್ದವಾಗಿರಬೇಕು ಎಂದು ಹೇಳಿದ್ದಾರೆ.

SCROLL FOR NEXT