ಬಿಬಿಎಂಪಿ ಕೋವಿಡ್ ವಾರ್ ರೂಮ್ (ಸಂಗ್ರಹ ಚಿತ್ರ) 
ರಾಜ್ಯ

ಕೋವಿಡ್ ವಾರ್ ರೂಮ್ ನಿರ್ವಹಣೆಗೆ 40 ವೈದ್ಯರ ನೇಮಕ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ಕೋವಿಡ್ ಸಂಕಷ್ಟದ ನಡುವೆ ನೆರವಿಗಾಗಿ 1912 ಗೆ ಕರೆ ಮಾಡುವ ನಾಗರಿಕರಿಗೆ ಆಯಾ ವಲಯದ ವಾರ್ ರೂಮ್ ನಿಂದ ತ್ವರಿತವಾಗಿ ಸ್ಪಂದಿಸುವುದನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸರ್ಕಾರವು ಈಗ ಕನಿಷ್ಠ 40 ವೈದ್ಯರ ತಂಡವನ್ನು ರಚಿಸುವ ಸನ್ನಾಹದಲ್ಲಿದೆ.

ಬೆಂಗಳೂರು: ಕೋವಿಡ್ ಸಂಕಷ್ಟದ ನಡುವೆ ನೆರವಿಗಾಗಿ 1912 ಗೆ ಕರೆ ಮಾಡುವ ನಾಗರಿಕರಿಗೆ ಆಯಾ ವಲಯದ ವಾರ್ ರೂಮ್ ನಿಂದ ತ್ವರಿತವಾಗಿ ಸ್ಪಂದಿಸುವುದನ್ನು ಖಚಿತಪಡಿಸಿಕೊಳ್ಳಲು, ರಾಜ್ಯ ಸರ್ಕಾರವು ಈಗ ಕನಿಷ್ಠ 40 ವೈದ್ಯರ ತಂಡವನ್ನು ರಚಿಸುವ ಸನ್ನಾಹದಲ್ಲಿದೆ. ಗ್ರಾಹಕ ಸಂಬಂಧಗಳ ನಿರ್ವಹಣೆ (ಸಿಆರ್‌ಎಂ) ಸರ್ವೀಸ್ ಎನ್ ಕ್ವೈರಿ ವಿಫಲವಾಗಿದೆ ಎಂದು ಸರ್ಕಾರ ಗಮನಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ನಂತರ, ಅಲ್ಲಿ 1912 ಕಾಲ್ ಸೆಂಟರ್ ನಂತೆ ವರ್ತಿಸಿದೆ. ಅಲ್ಲದೆ ಆಯಾ ಕರೆಗಳನ್ನು ಆಯಾ ವಲಯದ ವಾರ್ ರೂಮ್ ಗೆ ವರ್ಗಾಯಿಸಿದೆ.

ಆದರೆ ಹೆಚ್ಚಿನ ಸಂಖ್ಯೆಯ ಕರೆಗಳನ್ನು ನಿರ್ವಹಿಸಲು ವಲಯದ ವಾರ್ ರೂಮ್ ಸಜ್ಜುಗೊಂಡಿಲ್ಲವಾದ್ದರಿಂದ, ಎನ್ ಕ್ವೈರಿಯನ್ನು ವಿಫಲವೆಂದು ಘೋಷಿಸಲಾಯಿತು ಮತ್ತು ಕೈಬಿಡಲಾಯಿತು. ಸರ್ಕಾರಿ ಅಧಿಕಾರಿಯೊಬ್ಬರು ಪತ್ರಿಕೆ ಜತೆ ಮಾತನಾಡಿ: “ಕೋವಿಡ್-19 ಗಾಗಿ ಬೆಂಗಳೂರಿನಲ್ಲಿ ಹೆಚ್ಚು ಬೇಡಿಕೆಯಿರುವ ಸಹಾಯವಾಣಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ, ಸಂಪರ್ಕಿತ ವಲಯದ ವಾರ್ ರೂಮ್ ವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಿಆರ್‌ಎಂ ಸೇವೆಯು ಯಾವುದೇ ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸದ ಕಾರಣ, ಅದನ್ನು ಕೈಬಿಡಲಾಯಿತು ಮತ್ತು ವಲಯ ವಾರ್ ರೂಮ್ ಗಳನ್ನು ನವೀಕರಿಸುವವರೆಗೆ ಪ್ರಾರಂಭಿಸಲಾಗುವುದಿಲ್ಲ. ಈ ಮಧ್ಯೆ, ಕನಿಷ್ಠ 40 ವೈದ್ಯರ ತಂಡವನ್ನು ರೋಗಿಗಳಿಗೆ ಸಹಾಯ ಮಾಡಲು ಮತ್ತು ಚಿಕಿತ್ಸೆ ನೀಡಲು 1912 ರ ವಾರ್ ರೂಮ್ ನಲ್ಲಿ ಶಾಶ್ವತವಾಗಿ ಬೀಡುಬಿಟ್ಟಿರಲು ಸೂಚಿಸಿದೆ. ಹಾಗಾಗಿ ನಾಗರಿಕರು ಸಹಾಯಕ್ಕಾಗಿ ಕಾಯಬೇಕಾದ ಅಗತ್ಯವಿಲ್ಲ" ಎಂದರು.

ಕರೆ ಮಾಡುವವರಿಗೆ ಸೇವೆಗಳನ್ನು ಶೀಘ್ರದಲ್ಲೇ ಒದಗಿಸುವ ಉದ್ದೇಶದಿಂದ ಸಿಆರ್ ಎಂಅನ್ನು ಪ್ರಾರಂಭಿಸಲಾಯಿತು. 1912 ರ ಕರೆ ಸ್ವೀಕರಿಸಿದ ಮತ್ತು ವಲಯ ವಾರ್ ರೂಮ್ ಗಳಿಗೆ ರವಾನೆಯಾದ ಕರೆಗಳೂ ಸಫಲವಾಗಿದೆಯೆ ಇಲ್ಲವೆ  ಎಂದು ಖಚಿತಪಡಿಸಿಕೊಳ್ಳಲು ಯಾವುದೇ ಕಾರ್ಯವಿಧಾನವಿಲ್ಲ. 1912ಕ್ಕೆ ವ್ಯಕ್ತಿಯ ಕರೆ ಪರಿಹರಿಸಲ್ಪಟ್ಟಿದೆಯೆ ಎಂದು ತಿಳಿಯಲು ಯಾವುದೇ ಉಪಾಯವಿಲ್ಲ., ಏಕೆಂದರೆ ಅದು ಕರೆಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ ಮತ್ತು ಅವುಗಳನ್ನು ಬೇರೆ ಕಡೆಗೆ ವರ್ಗಾಯಿಸುತ್ತದೆ. ಇದನ್ನು ಪರಿಹರಿಸಲು ಮತ್ತು ಪರಿಹಾರ ಸಮಯವನ್ನು ನೀಡುವುದಿಲ್ಲ. ಆದರೆ ಅದೇ ವೈದ್ಯರು ಕರೆ ಮಾಡುವವರಿಗೆ ಸಹಾಯ ಮಾಡುತ್ತಾರೆ.

 ಪ್ರತಿ ಕರೆಗೆ ಡಾಕೆಟ್ ಸಂಖ್ಯೆಯನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ, ಇದು ಸಮಸ್ಯೆಯನ್ನು ಪರಿಹರಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಲಿದೆ.. ಇಲ್ಲಿಯವರೆಗೆ, 1912 ಗೆ ಕರೆ ಮಾಡಿದವರ ಕರೆ ತೆಗೆದುಕೊಳ್ಲಲಾಗುತ್ತಿತ್ತು.ಕರೆ ಮಾಡುವವರ ಕಾಯುವ ಸಮಯ ಒಂದೂವರೆ ನಿಮಿಷಕ್ಕಿಂತ ಹೆಚ್ಚಿಲ್ಲ ಎಂದು ಸರ್ಕಾರವು ಭಾವಿಸಿತ್ತು.“ಆದ್ದರಿಂದ ಈಗ ವೈದ್ಯರ ತಂಡ ಮತ್ತು ಡಾಕೆಟ್ ಸಂಖ್ಯೆಯೊಂದಿಗೆ, ಕರೆ ಮಾಡಿದವರು ಎಷ್ಟು ಬಾರಿ ಕರೆ ಮಾಡಿದ್ದಾರೆ, ಕರೆ ಮಾಡಿದವರು ತೃಪ್ತರಾಗಿದ್ದಾರೆಯೇ ಅಥವಾ ಇನ್ನೇನಾದರೂ ಅಗತ್ಯವಿದೆಯೇ ಎಂದು ನಮಗೆ ತಿಳಿಯುತ್ತದೆ.

ಇದು ಕೋವಿಡ್ ನಿರ್ವಹಣೆಯಲ್ಲಿ ಹೆಚ್ಚಿನ ಹೊಣೆಗಾರಿಕೆ ಮತ್ತು ಸಹಾಯದ ಭರವಸೆ ತರುತ್ತದೆ.ಸ್ವೀಕರಿಸಿದ ಕರೆಗಳಿಂದ, ಹೆಚ್ಚಿನ ರೋಗಿಗಳಿಗೆ ತಕ್ಷಣ ಐಸಿಯು ಅಗತ್ಯವಿಲ್ಲ ಎಂದು ಅಂದಾಜಿಸಲಾಗಿದೆ. ಅವರು ಮೊದಲ ಹಂತದಲ್ಲಿ ಸಲಹೆ ಮತ್ತು ವೈದ್ಯರ ಬಳಿ ಹಾಜರಾಗಿದ್ದರೆ ಅವರ ಆತಂಕದ ಮಟ್ಟವನ್ನು ನಿಯಂತ್ರಣ ಮಾಡಲಾಗುವುದು.ಆಸ್ಪತ್ರೆಗೆ ಸೇರಿಸುವುದನ್ನು ಸಹ ಕಡಿಮೆ ಮಾಡಲಾಗುತ್ತದೆ. ದಾಖಲೆಗಳ ಪ್ರಕಾರ, ಮೇ 9 ರಂದು 1912 ಕ್ಕೆ 2,634 ಕರೆಗಳು ಬಂದಿದೆ. ಇದರಲ್ಲಿ 80 ಕರೆಗಳನ್ನು ಕೈಬಿಡಲಾಗಿದ್ದು ಉಳಿದ 2,554 ಕರೆಗಳಿಗೆ ಉಚಿತ ಸಲಹೆ ನೆರವು ಸಿಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT