ರಾಜ್ಯ

ಮಂಗಳೂರು: ಕುವೈತ್'ನಿಂದ ಮಂಗಳೂರು ಬಂದರಿಗೆ 40 ಮೆಟ್ರಿಕ್ ಟನ್ ಆಕ್ಸಿಜನ್ ಆಗಮನ

Manjula VN

ಮಂಗಳೂರು: ಭಾರತದ ಜೊತೆಗಿನ ಅಂತರಾಷ್ಟ್ರೀಯ ಬಾಂಧವ್ಯದ ದ್ಯೋತಕವಾಗಿ ಕುವೈತ್ ಸರ್ಕಾರ ಎರಡು ಕಂಟೈನರ್'ಗಳಲ್ಲಿ 40 ಟನ್ ಮೆಡಿಕಲ್ ಆಕ್ಸಿಜನ್, ಹೈಫ್ಲೋ ಆಕ್ಸಿಜನ್ ಹಾಗೂ ಆಕ್ಸಿಜನ್ ಕಾನ್ಸೆನ್ಟ್ರೇಟರ್ ನ್ನು ಭಾರತಕ್ಕೆ ಕಳುಹಿಸಿದೆ. 

ಇದನ್ನು ಹೊತ್ತ ಭಾರತೀಯ ನೌಕಾದಳದ ಐಎನ್ಎಸ್ ಕೋಲ್ಕತ್ತಾ ನೌಕೆ ಸೋಮವಾರ ಮಂಗಳೂರಿನ ನವ ಮಂಗಳೂರು ಬಂದರು (ಎನ್ಎಂಪಿಟಿ)ಗೆ ಸೋಮವಾರ ಆಗಮಿಸಿತು. 

ಈ ನೌಕೆಯಲ್ಲಿ ತಲಾ 20 ಮೆಟ್ರಿಕ್ ಟನ್'ನ 2 ಟ್ಯಾಂಕ್, 200 ಆಕ್ಸಿಜನ್ ಸಿಲಿಂಡರ್, 10 ಮೆಟ್ರಿಕ್ ಟನ್'ನ 10 ಪೆಲ್ಲೆಟ್, 10 ಲೀಟರ್'ನ ನಾಲ್ಕು ಹೈಫ್ಲೋ ಆಕ್ಸಿಜನ್ ತಲುಪಿತು. ಇದರಲ್ಲಿ 20 ಮೆಟ್ರಿಕ್ ಟನ್ ದಕ್ಷಿಣ ಕನ್ನಡ ಜಿಲ್ಲೆಗೆ, ಉಳಿದ ತಲಾ 10 ಮೆ.ಟನ್ ಉಡುಪಿ ಹಾಗೂ ಕಾರವಾರಕ್ಕೆ ಪೂರೈಕೆಯಾಗಲಿದೆ. 

10 ಪೆಲ್ಲೆಟನ್ನು ಬೇರೆ ಬೇರೆ ಕಡೆಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಔಷಧ ನಿಯಂತ್ರಣಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಎನ್ಎಂಪಿಟಿ ಅಧ್ಯಕ್ಷ ಎ.ವಿ.ರಮಣ ಅವರು ಮಾತನಾಡಿ, ಯಾವುದೇ ಪರಿಸ್ಥಿತಿಯಲ್ಲಿ ನೆರವಿಗೆ ಬದಲು ಬಂದರು ಸರ್ವಸನ್ನದ್ಧವಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೇಶಕ್ಕೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ರಾಜ್ಯ ಸರ್ಕಾರ ನಿರ್ಧರಿಸಿದ ಸ್ಥಳಗಳಿಗೆ ಈ ಆಕ್ಸಿಜನ್ ರವಾನಿಸುತ್ತೇವೆ. 40 ಮೆಟ್ರಿಕ್ ಟನ್ ಆಕ್ಸಿಜನ್'ನಲ್ಲಿ 20 ಮೆಟ್ರಿಕ್ ಟನ್ ದಕ್ಷಿಣ ಕನ್ನಡ ಹಾಗೂ ಆಕ್ಸಿಜನ್'ನ್ನು ಉಡುಪಿ, ಉತ್ತರ ಕನ್ನಡಕ್ಕೆ ರವಾನಿಸಾಲಗುತ್ತದೆ ಎಂದು ಹೇಳಿದ್ದಾರೆ. 

ಐಎನ್ಎಸ್ ಕೊಚ್ಚಿ ಹಾಗೂ ಐಎನ್ಎಸ್ ಸುರಕ್ಷಾ ನೌಕೆಗಳು ಮೇ.11 ರಂದು ಆಗಮಿಸಲಿದ್ದು, ಕುವೈತ್ ನಿಂದ ಮತ್ತೆ ಎರಡು ನೌಕೆಗಳಲ್ಲಿ ಭಾರತಕ್ಕೆ ಆಕ್ಸಿಜನ್ ಪೂರೈಕೆಯಾಗಲಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT