ಕೊಡಗು: 30 ಬೆಡ್ ಗಳ ಕೇಂದ್ರದಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ 
ರಾಜ್ಯ

ಕೊಡಗು: 30 ಬೆಡ್ ಗಳ ಕೇಂದ್ರದಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ

ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಕ್ಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ 30 ಬೆಡ್ ಗಳ ಕೇಂದ್ರವನ್ನು ತೆರಯಲಾಗಿದೆ. 

ಮಡಿಕೇರಿ: ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಕೋವಿಡ್-19 ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಕ್ಕೆ ಖಾಸಗಿ ಆಸ್ಪತ್ರೆಯೊಂದರಲ್ಲಿ 30 ಬೆಡ್ ಗಳ ಕೇಂದ್ರವನ್ನು ತೆರಯಲಾಗಿದೆ. 

ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇಂದ್ರ (ಡಿಸಿಹೆಚ್ ಸಿ)ಯನ್ನು ಕರುಣಾ ಟ್ರಸ್ಟ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. 

ಮೇ.15 ರಿಂದ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು,  ಈ ಕೇಂದ್ರಗಳಲ್ಲಿ 15 ಬೆಡ್ ಗಳಲ್ಲಿ ಪೈಪ್ ಲೈನ್ಡ್ ಆಕ್ಸಿಜನ್ ಗಳು, 5 ಬೆಡ್ ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಹಾಗೂ 10 ಬೆಡ್ ಗಳಲ್ಲಿ ಬಿಪಾಪ್ ಮೆಷಿನ್ (ವೆಂಟಿಲೇಟರ್ ಗಳು) ಗಳಿದೆ ಎಂದು ಕರುಣಾ ಟ್ರಸ್ಟ್ ನ ಜಂಟಿ ಕಾರ್ಯದರ್ಶಿ ವೆಂಕಟ್ ಚೆಕುರಿ ಹೇಳಿದ್ದಾರೆ. 

ಅಮೆರಿಕದಲ್ಲಿರುವ ಕೊಡವ ಕೂಟ, ಕೂರ್ಗ್ ಸಂಘಟನೆಗಳು, ಕೊಡವ ಸಮಾಜದವರು ಕರುಣಾ ಟ್ರಸ್ಟ್ ನ ನೆರವಿಗೆ ಧಾವಿಸಿದ್ದು ಕೈ ಜೋಡಿಸಿದ್ದಾರೆ. ಲೋಪಮುದ್ರಾ ಖಾಸಗಿ ಆಸ್ಪತ್ರೆಯಲ್ಲಿರುವ ಕೋವಿಡ್-19 ಚಿಕಿತ್ಸಾ ಕೇಂದ್ರದಲ್ಲಿ ಫಾರ್ಮಸಿ ಲ್ಯಾಬ್ ಸೌಲಭ್ಯಗಳು ಇರಲಿವೆ ಎಂದು ವೆಂಕಟ್ ಮಾಹಿತಿ ನೀಡಿದ್ದಾರೆ. 

ಜಿಲ್ಲಾಡಳಿತ ಹೇಳುವ ಕೋವಿಡ್-19 ರೋಗಿಗಳಿಗೆ ಈ ಕೇಂದ್ರದಲ್ಲಿ ಚಿಕಿತ್ಸೆ ದೊರೆಯಲಿದೆ. ಊಟದ ವ್ಯವಸ್ಥೆಯೊಂದಿಗೆ ಉಚಿತ ಚಿಕಿತ್ಸೆಯನ್ನು ಈ ಕೇಂದ್ರ ಒದಗಿಸುತ್ತಿದ್ದು, ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸಂಪೂರ್ಣ ಬೆಂಬಲ ನೀಡಿದ್ದು, ಆಂಬುಲೆನ್ಸ್ ಸೌಲಭ್ಯವನ್ನೂ ಕೇಂದ್ರಕ್ಕೆ ಒದಗಿಸಿದ್ದಾರೆ. 

ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಸ್ಥಳಾವಕಾಶಕ್ಕೆ ಟ್ರಸ್ಟ್ ಬಾಡಿಗೆಯನ್ನೂ ನೀಡಲಿದ್ದು, ಟ್ರಸ್ಟ್ ವತಿಯಿಂದಲೇ ವೈದ್ಯರು ಹಾಗೂ ನರ್ಸ್ ಗಳನ್ನು ನೇಮಕ ಮಾಡಲಾಗುತ್ತಿದೆ, ಟ್ರಸ್ಟ್ ನ ಸ್ಥಾಪಕ ಸದಸ್ಯ ಡಾ. ಸುದರ್ಶನ್ ಇಡಿ ಯೋಜನೆಗೆ ಮಾರ್ಗದರ್ಶಿಗಳಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT