ಸಂಗ್ರಹ ಚಿತ್ರ 
ರಾಜ್ಯ

ಕೆಜಿಎಫ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ: ನಿಮಿಷಕ್ಕೆ 500 ಲೀಟರ್ ಉತ್ಪಾದನೆ

ಕೆಜಿಎಫ್ ಜನರಲ್ ಆಸ್ಪತ್ರೆಯಲ್ಲಿ ಕರ್ನಾಟಕದ ಮೊದಲ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದ್ದು, ಈ ಘಟಕ ಕಾರ್ಯ ಭಾನುವಾರದಿಂದಲೇ ಆರಂಭವಾಗಿದೆ. 

ಕೋಲಾರ: ಕೆಜಿಎಫ್ ಜನರಲ್ ಆಸ್ಪತ್ರೆಯಲ್ಲಿ ಕರ್ನಾಟಕದ ಮೊದಲ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದ್ದು, ಈ ಘಟಕ ಕಾರ್ಯ ಭಾನುವಾರದಿಂದಲೇ ಆರಂಭವಾಗಿದೆ. 

ಇಸ್ರೇಲ್‌ ಭಾರತಕ್ಕೆ ಇಂತಹ ಮೂರು ಆಕ್ಸಿಜನ್‌ ಉತ್ಪಾದನಾ ಘಟಕಗಳನ್ನು ನೀಡಿದ್ದು, ಅದರಲ್ಲಿ ಒಂದು ಉತ್ತರ ಪ್ರದೇಶದ ವಾರಣಾಸಿ, ಮತ್ತೂಂದು ಮೈಸೂರಿನ ಎಚ್‌ಡಿಕೋಟೆ ಹಾಗೂ ಕೋಲಾರ ಜಿಲ್ಲೆಯ ಕೆಜಿಎಫ್‌ ನಗರದಲ್ಲಿ ತೆರೆಯಲು ಆದೇಶ ನೀಡಲಾಗಿತ್ತು. ಸಾಕಷ್ಟು ಗೊಂದಲ ಬಳಿಕ ಕೆಜಿಎಫ್ ನಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ ಮಾಡಲಾಗಿದೆ. 

ಕೆಜಿಎಫ್'ಗೆ ಆಕ್ಸಿಜನ್ ಘಟಕ ತಲುಪಿದ ಕೂಡಲೇ ಬೆಂಗಳೂರಿನಿಂದ ತೆರಳಿದ್ದ ತಜ್ಞರನ್ನೊಳಗೊಂಡ ಮೂರು ತಂಡ ಘಟಕ ಸ್ಥಾಪನೆ ಮಾಡಲು ನಿರಂತರವಾಗಿ ಕೆಲಸ ಮಾಡುತ್ತಿತ್ತು. ಇದರಂತೆ ನಿನ್ನೆ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದ್ದು, ಕಾರ್ಯ ಆರಂಭಗೊಂಡಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿ, ಇಸ್ರೇಲ್ ರಾಷ್ಟ್ರ ರಾಜ್ಯಕ್ಕೆ ಎರಡು ಆಕ್ಸಿಜನ್ ಉತ್ಪಾದನಾ ಘಟಕವನ್ನು ರವಾನಿಸಿದ್ದು, ಈ ಘಟಕಗಳು ನಿಮಿಷಕ್ಕೆ 500 ಲೀಟರ್ ಆಮ್ಲಜನಕವನ್ನು ಉತ್ಪಾದನೆ ಮಾಡಲಾಗಿದೆ. ಎರಡರಲ್ಲಿ ಒಂದು ಆಕ್ಸಿಜನ್ ಘಟಕವನ್ನು ಕೋಲಾರ ಜಿಲ್ಲೆಗೆ ನೀಡಲಾಗಿದ್ದು, ಭಾನುವಾರ ರಾತ್ರಿ ಈ ಘಟಕವನ್ನು ಸ್ಥಾಪಿನೆ ಮಾಡಲಾಗಿದೆ. ಈಗಾಗಲೇ ಈ ಘಟಕ ತನ್ನ ಕಾರ್ಯಾವನ್ನೂ ಆರಂಭಿಸಿದೆ. ತಜ್ಞರ ತಂಡ ನಿರಂತರವಾಗಿ ಘಟಕವನ್ನು ಪರಿಶೀಲನೆ ಮಾಡುತ್ತಲೇ ಇದೆ ಎಂದು ಹೇಳಿದ್ದಾರೆ. 

ಜಿಲ್ಲಾ ಸರ್ಜನ್ ಡಾ.ಶಿವಕುಮಾರ್ ಅವರು ಮಾತನಾಡಿ, ಆಕ್ಸಿಜನ್ ಘಟಕ ಆಸ್ಪತ್ರೆಯ ಬಲವನ್ನು ಹೆಚ್ಚಿಸಲಿದೆ. ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ನಿರಂತರವಾಗಿ ಆಕ್ಸಿಜನ್ ನೀಡಬಹುದು. ಬೇರೆಯಿಂದ ಆಕ್ಸಿಜನ್ ಸಿಲಿಂಡರ್ ಗಳನ್ನು ತರಿಸುವ ಅವಶ್ಯಕತೆಗಳು ಬರುವುದಿಲ್ಲ. ಆಕ್ಸಿಜನ್ ಘಟಕದ ಕಾರ್ಯಾಚರಣೆಯಲ್ಲಿ ಯಾವುದೇ ಸಮಸ್ಯೆಗಳೂ ಎದುರಾಗಿಲ್ಲ. 65 ಆಕ್ಸಿಜನ್ ಸಿಲಿಂಡರ್ ಗಳನ್ನು ಕೆಜಿಎಫ್ ಆಸ್ಪತ್ರೆಯಲ್ಲಿ ಬಳಕೆ ಮಾಡಲಾಗುತ್ತದೆ. 35 ಸಿಲಿಂಡರ್ ಗಳನ್ನು ತುರ್ತು ಪರಿಸ್ಥಿತಿಗೆ ಬಳಕೆ ಮಾಡಲು ಇರಿಸಲಾಗುತ್ತದೆ. ಇನ್ನೂ 30 ಸಿಲಿಂಡರ್ ಗಳನ್ನು ಬಂಗಾರಪೇಟೆ ಸೇರಿ ಇತರೆ ಪ್ರದೇಶಗಳಿಗೆ ನೀಡಲಾಗುತ್ತೆದ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT