ಶಿವಕುಮಾರ್ 
ರಾಜ್ಯ

ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್​ಪಿನ್ ಶಿವಕುಮಾರ್​​ ಕೊರೋನಾಗೆ ಬಲಿ

ವಿವಿಧ ಪಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಕೋವಿಡ್‌ನಿಂದ ಮಂಗಳವಾರ ಸಾವನ್ನಪ್ಪಿದ್ದಾನೆ. 

ತುಮಕೂರು: ವಿವಿಧ ಪಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಶಿವಕುಮಾರ್ ಕೋವಿಡ್‌ನಿಂದ ಮಂಗಳವಾರ ಸಾವನ್ನಪ್ಪಿದ್ದಾನೆ. 

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಕಾಗ್ಗೆರೆ ಗ್ರಾಮದವರಾಗಿದ್ದು, ಮೇ 16ರಂದು ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

2011ರಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಈತನ ವಿರುದ್ಧ ಗುಬ್ಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2012ರಲ್ಲಿ ತುಮಕೂರಿನ ಹೊಸ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ದೂರು ದಾಖಲಾಗಿತ್ತು. ಅಲ್ಲೂ ಶಿವಕುಮಾರ್‌ ಹೆಸರು ಕೇಳಿ ಬಂದಿತ್ತು.

2013ರಲ್ಲಿ ದ್ವಿತೀಯ ಪಿಯುಸಿ ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ನಂದಿನಿ ಲೇಔಟ್‌ ನಿವಾಸಿ ದೇವೇಂದ್ರ, ತುಮಕೂರಿನ ಗುಬ್ಬಿ ಮೂಲದ ಮಲ್ಲೇಶ್‌ ಎಂಬಾತನನ್ನು ತುಮಕೂರು ಪೊಲೀಸರು ಬಂಧಿಸಿದ್ದರು. ಆಗ ವಿಚಾರಣೆ ವೇಳೆ ಕಿಂಗ್‌ಪಿನ್‌ ಇದೇ ಶಿವಕುಮಾರ್‌ ಎಂಬ ವಿಷಯ ಬೆಳಕಿಗೆ ಬಂದಿತ್ತು.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು, ಪೊಲೀಸ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆ ಹಂತದಲ್ಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೀಕರ ಭೂಕುಸಿತದಲ್ಲಿ 14 ಸಾವು, ಸಿಕ್ಕಿಂ ಸಂಪರ್ಕ ಕಡಿತ

ಡೊನಾಲ್ಡ್ ಟ್ರಂಪ್ ಕರೆಗೂ ನಿಲ್ಲದ ಘರ್ಷಣೆ: ಇಸ್ರೇಲ್ ದಾಳಿಗೆ ಗಾಜಾದಲ್ಲಿ ಕನಿಷ್ಠ 60 ಮಂದಿ ಸಾವು

Cricket: ಕೇವಲ 141 ಎಸೆತಗಳಲ್ಲಿ ಬರೊಬ್ಬರಿ 314 ರನ್ ಚಚ್ಚಿದ ಭಾರತ ಮೂಲದ ಆಸಿಸ್ ಕ್ರಿಕೆಟಿಗ Harjas Singh, ಇತಿಹಾಸ ನಿರ್ಮಾಣ!

ಬಿಹಾರ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ: ಶೇ.50ರಷ್ಟು ಸಚಿವರಿಗೆ ಕೊಕ್..?

ಕೆಮ್ಮಿನ ಸಿರಪ್ ಬಗ್ಗೆ ಕೇಂದ್ರ ಸರ್ಕಾರ ಯೂ-ಟರ್ನ್: ಮಧ್ಯ ಪ್ರದೇಶ, ರಾಜಸ್ತಾನ, ತಮಿಳು ನಾಡು ಬ್ಯಾನ್

SCROLL FOR NEXT