ರಾಜ್ಯ

ಮೈಸೂರಿನ ಬೆಮೆಲ್‍ ಸಂಕೀರ್ಣದಲ್ಲಿ ಐದು ಚಿರತೆಗಳು ಪ್ರತ್ಯಕ್ಷ

Lingaraj Badiger

ಮೈಸೂರು: ನಗರದ ಹೊರವಲಯದ ಬೆಮೆಲ್‍ ಸಂಕೀರ್ಣದಲ್ಲಿ ಚಿರತೆಯೊಂದು ನಾಲ್ಕು ಪ್ರಾಯದ ಮರಿಗಳೊಂದಿಗೆ ಪ್ರತ್ಯಕ್ಷವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚಿರತೆಗಳು ಇರುವ ಬಗ್ಗೆ ಶಬ್ಧವೊಂದು ದೃಢಪಡಿಸಿದೆ. ಕೆಲ ಸಮಯದ ನಂತರ ಚಿರತೆಗಳು ಕಾಂಪೌಂಡ್‍ ಮೇಲೆ ಕುಳಿತು ನಂತರ ಪೊದೆಗಳಿಗೆ ಹಾರಿ ಕಣ್ಮರೆಯಾಗಿರುವ ದೃಶ್ಯ ಕಂಡುಬಂದಿದೆ.

ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿಗೆ ಚಿರತೆಗಳು ಕಾಣಿಸಿಕೊಂಡಿದ್ದು, ಅವರು ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ ಎಂದು ವಿಡಿಯೋದ ಸತ್ಯಾಸತ್ಯತೆ ದೃಢಪಡಿಸಿರುವ ಬೆಮೆಲ್‍ ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಅರಣ್ಯ ಉಪ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ಸಂಪರ್ಕಿಸಲಾಗಿ, ಮಾಧ್ಯಮ ವರದಿಗಳಂತೆ ತಾವು ಬೆಮೆಲ್‍ ಅಧಿಕಾರಿಗಳೊಂದಿಗೆ ಈ ಕುರಿತು ಮಾತನಾಡಿದ್ದು, ಮುಂದಿನ ಕ್ರಮಕ್ಕೆ ಸೂಚಿಸಿರುವುದಾಗಿ ಹೇಳಿದ್ದಾರೆ.

ಆದರೂ ಬೆಮೆಲ್‍ ಸಂಕೀರ್ಣದಲ್ಲಿ ಇದು ಸಾಮಾನ್ಯ ಎಂದಿರುವ ಅಧಿಕಾರಿ, ಪ್ರಾಣಿಗಳು ಪ್ರತ್ಯಕ್ಷವಾಗಿರುವ ಬಗ್ಗೆ ದೂರುಗಳು ಬಂದ ಕೂಡಲೇ ಸ್ಥಳಕ್ಕೆ ಧಾವಿಸಿ, ಅವುಗಳನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡುವ ಕೆಲಸವನ್ನು ಮಾಡುತ್ತಿದ್ದೇವೆ. ಇದೇ ಮೊದಲ ಬಾರಿಗೆ ಐದು ಚಿರತೆ ಕಂಡುಬಂದಿವೆ ಎಂದು ಹೇಳಿದ್ದಾರೆ.

ಮೈಸೂರಿನ ಬೆಮೆಲ್‍ ಸಂಕೀರ್ಣ 450 ಎಕರೆ ವಿಸ್ತೀರ್ಣ ಹೊಂದಿದ್ದು, ದಟ್ಟ ಗಿಡಮರಗಳನ್ನು ಹೊಂದಿದೆ. ಇದೇ ಕಾರಣಕ್ಕಾಗಿ ಚಿರತೆಗಳು ಆಶ್ರಯ ಬಯಿಸಿ ಇಲ್ಲಿಗೆ ಬಂದಿರಬಹುದು ಎನ್ನಲಾಗಿದೆ.

SCROLL FOR NEXT