ರಾಜ್ಯ

ದೇಶದ ಏಳು ರಾಜ್ಯಗಳಲ್ಲಿ ಶೇ.25ಕ್ಕೂ ಹೆಚ್ಚು ಪಾಸಿಟಿವಿಟಿ ಪ್ರಕರಣಗಳು: ಕೇಂದ್ರ ಸರ್ಕಾರ

Nagaraja AB

ನವದೆಹಲಿ: 10 ವಾರಗಳ ಕಾಲ ನಿರಂತರವಾಗಿ ಕೋವಿಡ್-19 ಪಾಸಿಟಿವಿಟಿ ಕೇಸ್ ಗಳು ಹೆಚ್ಚಾದ ನಂತರ ಕಳೆದ ಎರಡು ವಾರಗಳಿಂದೀಚಿಗೆ  ಕುಸಿತದ ವರದಿಯಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಪಾಸಿಟಿವಿಟಿ ಪ್ರಕರಣಗಳು ಇಳಿಕೆಯಾದ ಜಿಲ್ಲೆಗಳ ಸಂಖ್ಯೆ ಏಪ್ರಿಲ್ 29-ಮೇ 5 ರವರೆಗಿನ 210 ರಿಂದ ಮೇ 13-19 ರವರೆಗೆ 303 ಜಿಲ್ಲೆಗಳಿಗೆ  ಹೆಚ್ಚಳವಾಗಿದೆ ಎಂದು ಹೇಳಿದೆ.

ಏಳು ರಾಜ್ಯಗಳಲ್ಲಿ ಶೇ.25 ಕ್ಕೂ ಹೆಚ್ಚು ಪಾಸಿಟಿವಿಟಿ ಪ್ರಕರಣಗಳಿವೆ. 22 ರಾಜ್ಯಗಳಲ್ಲಿ ಶೇ.15ಕ್ಕೂ ಹೆಚ್ಚು ಪಾಸಿಟಿವಿಟಿ
ಪ್ರಕರಣಗಳಿರುವುದಾಗಿ ಸರ್ಕಾರ ತಿಳಿಸಿದೆ. ಫೆಬ್ರವರಿ ಮಧ್ಯದಿಂದ ಕೋವಿಡ್-19 ಸಾಪ್ತಾಹಿಕ ಟೆಸ್ಟ್ ನಲ್ಲಿ ನಿರಂತರವಾಗಿ
 ಏರಿಕೆಯಾಗುತ್ತಲೇ ಇದೆ. 12 ವಾರಗಳಲ್ಲಿ  ಸರಾಸರಿ ದೈನಂದಿನ ಪರೀಕ್ಷೆಗಳು ಎರಡ್ಮೂರು ಪಟ್ಟು ಹೆಚ್ಚಳವಾಗಿದೆ.

ಅಧ್ಯಯನವೊಂದರ ಪ್ರಕಾರ, ಶೇ.50 ರಷ್ಟು ಜನರು ಈಗಲೂ ಕೂಡಾ ಮಾಸ್ಕ್ ಧರಿಸುತ್ತಿಲ್ಲ. ಶೇ. 64 ರಷ್ಟು ಜನರು ಕೇವಲ ಬಾಯಿ ಮಾತ್ರ ಮುಚ್ಚುತ್ತಿದ್ದಾರೆ. ಮೂಗನ್ನು ಮುಚ್ಚುತ್ತಿಲ್ಲ. ಜೂನ್ ಅಂತ್ಯದೊಳಗೆ ಕೋವಿಡ್-19 ಸರಾಸರಿ ದೈನಂದಿನ ಪರೀಕ್ಷೆ ಸಾಮರ್ಥ್ಯ 45 ಲಕ್ಷಕ್ಕೆ  ಹೆಚ್ಚಳವಾಗಲಿದೆ ಎಂದು ಸರ್ಕಾರ ತಿಳಿಸಿದೆ.

SCROLL FOR NEXT