ರಾಜ್ಯ

ಬ್ಲ್ಯಾಕ್ ಫಂಗಸ್ ಪ್ರಕರಣಗಳು ತೀವ್ರಗತಿಯ ಏರಿಕೆ ನಡುವೆ ಬೆಂಗಳೂರಿನಲ್ಲಿ ಅದರ ಮುಖ್ಯ ಔಷಧಗಳ ಕೊರತೆ!

Nagaraja AB

ಬೆಂಗಳೂರು: ಕಳೆದ 10 ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ಅಥವಾ ಕೋವಿಡ್ -ಸಹಭಾಗಿತ್ವದ ಮ್ಯೂಕಾರ್ಮೈಕೋಸಿಸ್ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರಗತಿಯ ಏರಿಕೆಯಾಗುತ್ತಿದೆ, ಆದರೆ, ಮಹತ್ವದ ಶಿಲೀಂದ್ರ ಔಷಧ ಲಿಪೊಸೋಮಲ್ ಆಂಫೊಟೆರಿಸಿನ್ ಅಥವಾ ಆಂಫೊಟೆರಿಸಿನ್- ಬಿ ಸಂಗ್ರಹದ ಕೊರತೆಯಿದೆ.

ಈ ಔಷಧ ಇಲ್ಲದೆ ಕೆಲ ಆಸ್ಪತ್ರೆಗಳು ಪರ್ಯಾಯವಾಗಿ ಇತರ ಔಷಧಗಳನ್ನು ಬಳಸುತ್ತಿವೆ. ಇವುಗಳು ಸರಳ ಆಂಪೊಟೆರಿಸನ್ ಅಥವಾ ಆಂಫೊಟೆರಿಸಿನ್-ಬಿ ನಂತೆ ಪರಿಣಾಮಕಾರಿಯಾಗದಿರುವ ಸಾಧ್ಯತೆಯಿದೆ. ಇದು ನೆಫ್ರೊ-ವಿಷಕಾರಿ ಮತ್ತು ಮೂತ್ರಪಿಂಡಗಳನ್ನು ಹಾನಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

  ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿರುವ ಕೆಲ ಖಾಸಗಿ ಆಸ್ಪತ್ರೆಗಳು ಆಂಫೊಟೆರಿಸನ್ -ಬಿ ಔಷಧಕ್ಕಾಗಿ  ಹುಡುಕಾಡುತ್ತಿವೆ. ಕೆಲ ವೈಯಲ್ಸ್ ಗಾಗಿ ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರದ ಬಳಿಯೂ ಕೇಳಿಕೊಂಡಿವೆ. ಇತ್ತೀಚಿನವರೆಗೂ ಆಂಫೊಟೆರಿಸನ್ ಔಷಧ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತಿತ್ತು. ಆದರೆ, ಈಗ ದೊರೆಯುತ್ತಿಲ್ಲ ಎಂದು ಶ್ರೀ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಎಂಡಿ ಮಾರ್ಕರ್ ಹೇಳಿದರು.       

ಬ್ಲ್ಯಾಕ್ ಫಂಗಸ್ ಪ್ರಕರಣಗಳ  ಸಂಖ್ಯೆ ಹೆಚ್ಚಾಗುತ್ತಿದ್ದು, ತುರ್ತಾಗಿ ಆಂಫೊಟೆರಿಸನ್ ಔಷಧದ ಅಗತ್ಯವಿದೆ ಎಂದು ಅವರು ತಿಳಿಸಿದರು. ಲಿಪೊಸೋಮಲ್ ಆಂಫೊಟೆರಿಸಿನ್ ಹೆಚ್ಚಿನ ಡೋಸ್ ಬಳಸಬಹುದಾಗಿದೆ.ಈ ಔಷಧದ ಹೆಚ್ಚಿನ ಡೋಸ್ ಗಳಿಂದ ಉತ್ತಮ ಹಾಗೂ ವೇಗವಾಗಿ ಶಿಲೀಂದ್ರವನ್ನು ಮುಕ್ತಗೊಳಿಸಬಹುದಾಗಿದೆ. ದುರಾದೃಷ್ಟವಶಾತ್, ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಆಂಫೊಟೆರಿಸಿನ್- ಬಿ ಪೂರೈಕೆ ಅಸಮರ್ಪಕವಾಗಿದೆ.

ಸಕ್ಕರೆ ರೋಗ ನಿಯಂತ್ರಣದೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಳವೇ ಇರುವ ಪರ್ಯಾಯ ಮಾರ್ಗವಾಗಿದೆ. ಎರಡನೇ ಹಂತದ ಪೊಸಕೊನಜೋಲ್ ಅಥವಾ ಇಸಾವುಕೊನಜೋಲ್ ನಂತಹ ಔಷಧಗಳನ್ನು ಬಳಸಬಹುದಾಗಿದೆ. ಬ್ಲ್ಯಾಕ್ ಫಂಗಸ್ ಕಣ್ಣು, ಮೆದುಳಿಗೆ ಹರಡದಂತೆ ಆರಂಭದಲ್ಲಿಯೇ ಮಾಡಬೇಕಾಗಿದೆ. ಇದರಿಂದ ಸಾವು ಕೂಡಾ ಸಂಭವಿಸಬಹುದು ಎಂದು ಮಣಿಪಾಲ್ ಆಸ್ಪತ್ರೆಯ ಇಎನ್ ಟಿ ಸ್ಪೆಷಾಲಿಸ್ಟ್ ಡಾ. ಇ. ವಿ. ರಮಣ್ ಹೇಳಿದ್ದಾರೆ. ಹಠಾತ್ತನೇ ಏರಿಕೆಯಾಗುತ್ತಿರುವ ಪ್ರಕರಣಗಳ ಸಂಖ್ಯೆಯಿಂದ ಆಂಫೊಟೆರಿಸನ್ -ಬಿ ಔಷಧದ ಕೊರತೆಯಾಗಿದೆ ಎಂದು ಬನ್ನೇರುಘಟ್ಟ  ರಸ್ತೆಯ ಫೋರ್ಟಿಸ್ ಆಸ್ಪತ್ರೆ ಇಎನ್ ಟಿ ವೈದ್ಯ ಡಾ. ಅತಿರಾ ರಾಮಕೃಷ್ಣನ್ ಹೇಳಿದ್ದಾರೆ.

ಪೊಸಕೊನಜೋಲ್ ಅಥವಾ ಇಸಾವುಕೊನಜೋಲ್ ನಂತಹ ಔಷಧಗಳನ್ನು ಬಳಸಬಹುದಾಗಿದೆ. ಆದರೆ, ಅವುಗಳು ಆಂಫೋಟೆರಿಸನ್ ನಂತೆ ಪರಿಣಾಮಕಾರಿಯಾಗುವ ಸಾಧ್ಯತೆ ಇಲ್ಲ ಎಂದು ಡಾ. ಅತಿರಾ ರಾಮಕೃಷ್ಣನ್ ತಿಳಿಸಿದ್ದಾರೆ.

ಬ್ಲ್ಯಾಕ್ ಪಂಗಸ್ ಸಾಂಕ್ರಾಮಿಕ ರೋಗ ಎಂದು ಕೇಂದ್ರ ಸರ್ಕಾರ ದೃಢಿಕರಿಸಿದ ನಂತರ ರಾಜ್ಯ ಸರ್ಕಾರ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದು, ಆಂಫೋಟೆರಿಸನ್ ಕೊರತೆ ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸಲಾಗುವುದು ಎಂದು ಹೇಳಿದೆ.  ಆರು ಕಂಪನಿಗಳಿಂದ ಅದರ ಉತ್ಪಾದನೆಯನ್ನು  ಹೆಚ್ಚಿಸಲಾಗಿದೆ. ದೇಶದಲ್ಲಿ ಅದರ ಉತ್ಪಾದನೆಗಾಗಿ ಐದು ಸಂಸ್ಥೆಗಳು ಅನುಮೋದನೆ ಪಡೆದುಕೊಂಡಿದೆ.ಆಂಫೋಟೆರಿಸನ್ ನ 6 ಲಕ್ಷ ವೈಯಲ್  ಆಮದು ಮಾಡಿಕೊಳ್ಳಲು ಭಾರತೀಯ ಸಂಸ್ಥೆಗಳಿಗೆ ಆದೇಶ ನೀಡಲಾಗಿದೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

SCROLL FOR NEXT