ಆಯುಷ್-64 ಔಷಧ 
ರಾಜ್ಯ

ಮನೆಯಲ್ಲಿ ಕ್ವಾರೆಂಟೈನ್ ಆಗಿರುವ ಕೋವಿಡ್-19 ರೋಗಿಗಳಿಗೆ ಆಯುಷ್-64 ಔಷಧ ವಿತರಣಾ ಅಭಿಯಾನ

ಆಯುಷ್ ಪದ್ಧತಿಗಳ ಮೂಲಕ ಕೋವಿಡ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಆಯುಷ್ ಸಚಿವಾಲಯ, ಭಾರತ ಸರಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.

ಬೆಂಗಳೂರು: ಆಯುಷ್ ಪದ್ಧತಿಗಳ ಮೂಲಕ ಕೋವಿಡ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ಆಯುಷ್ ಸಚಿವಾಲಯ, ಭಾರತ ಸರಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. 

ಆಯುಷ್ ಸಚಿವಾಲಯವು ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಜೊತೆಗೆ ಆಯುಷ್ 64 ಆಯುರ್ವೇದ ಮಾತ್ರೆಯ ಮೌಲ್ಯಮಾಪನ ಮಾಡಲು ಬಹು-ಕೇಂದ್ರ ಸಂಶೋಧನೆ ಮಾಡಿತ್ತು. ಈ ಪ್ರಯೋಗದಲ್ಲಿ ಸ್ಟ್ಯಾಂಡರ್ಡ್ ಆರೈಕೆ ಜೊತೆಗೆ ಆಯುಷ್- 64 ಔಷಧದ ಉಪಯೋಗ ಬೇಗ ರೋಗದಿಂದ ಗುಣಮುಖವಾಗಲು ಸಹಾಯಕಾರಿ ಎಂದು ತಿಳಿದು ಬಂದಿತು.

ಈ ಫಲಿತಾಂಶದ ಆಧಾರದ ಮೇಲೆ, ಆಯುಷ್ ಸಚಿವಾಲಯವು ಈ ಔಷಧಿಯನ್ನು ಮನೆಯಲ್ಲಿ  ಕ್ವಾರೆಂಟೈನ್ ಆಗಿರುವ ಕೋವಿಡ್- 19 ರೋಗಿಗಳಿಗೆ  ವಿತರಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿದೆ.ಈ ಮಾತ್ರೆಯು ನಾಲ್ಕು ಗಿಡಮೂಲಿಕೆಗಳಾದ ಸ್ವೆರ್ಶಿಯಾ ಚಿರಾತಾ (ಕಿರಾತ ತಿಕ್ತ), ಅಲ್ಸ್ಟೋನಿಯಾ ಸ್ಕೊಲರಿಸ್ (ಸಪ್ತಪರ್ಣ), ಪಿರ್ಕೊರ್ರಿಯಾ ಕುರೋವಾ (ಕಟುಕಿ) ಮತ್ತು ಸೀಸಲ್ಪಿನಿಯಾ ಕ್ರಿಸ್ಟಾ (ಕುಬೇರಾಕ್ಷ ) ಗಳನ್ನು ಒಳಗೊಂಡಿದೆ .

ಸಚಿವಾಲಯದ ಆಶ್ರಯದಲ್ಲಿರುವ ವಿವಿಧ ಸಂಸ್ಥೆಗಳ  ಹಾಗೂ ಸೇವಾ ಭಾರತಿಯ ನೆಟ್‌ವರ್ಕ ಬಳಸಿಕೊಂಡು ಆಯುಷ್- 64 ವಿತರಣೆಯನ್ನು ಹಂತಹಂತವಾಗಿ ದೇಶಾದ್ಯಂತದ ಕಾರ್ಯರೂಪಕ್ಕೆ ತರಲಾಗುವುದು.

ಬೆಂಗಳೂರಿನಲ್ಲಿ, ಕೇಂದ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆಯು  ಆಯುಷ್ -64 ಮಾತ್ರೆಗಳನ್ನು ಮನೆಯಲ್ಲಿ ಕ್ವಾರೆಂಟೈನ್ ಆಗಿರುವ ಕೋವಿಡ್-19 ರೋಗಿಗಳಿಗೆ ತನ್ನ ಒಂದು ಘಟಕವಾದ  ತುಳಸಿ ತೋಟ, ಉಪ್ಫಾರ್ ಪೇಟೆ ಪೊಲೀಸ್ ಠಾಣೆ ಬಳಿ, ಮೆಜೆಸ್ಟಿಕ್, ಬೆಂಗಳೂರು- 560009, ಫೋನ್– 22356889 ಹಾಗೂ # 12, ಉತ್ತರಹಳ್ಳಿ ಮನವರ್ತೆ ಕಾವಲ್, ಉತ್ತರಹಳ್ಳಿ (ಹೊಬ್ಲಿ), ಬೆಂಗಳೂರು ದಕ್ಷಿಣ, ಕನಕಪುರ ಮುಖ್ಯ ರಸ್ತೆ, ವ್ಯಾಲಿ ಸ್ಕೂಲ್ ರಸ್ತೆ, ತಲಘಟ್ಟಪುರ ಪೋಸ್ಟ್, ಬೆಂಗಳೂರು -560109, ಫೋನ್ –29535035, ರ ಮೂಲಕ  ಪ್ರತಿದಿನ 9.30 ರಿಂದ 4.30 ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಉಚಿತವಾಗಿ ನುರಿತ ವೈದ್ಯರ ಮೂಲಕ ಒದಗಿಸುತ್ತಿದೆ. 

ರೋಗಿಯ ಆಧಾರ್ ಸಂಖ್ಯೆ ಮತ್ತು ಕೋವಿಡ್ ಪಾಸಿಟಿವ್ ಫಲಿತಾಂಶಗಳನ್ನು (7 ದಿನಗಳೊಳಗಾಗಿ) ಹೊಂದಿರುವ ರೋಗಿಯ ಪ್ರತಿನಿಧಿಗೆ ಔಷಧಿಯನ್ನು ನೀಡಲಾಗುತ್ತದೆ. ಕರೋನಾ ಪೀಡಿತರು, ಪರಿವಾರದವರು  ಕ್ವಾರೆಂಟೈನ್ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕು. ಆಯುಷ್ -64 ಮಾತ್ರೆಯನ್ನು, ವೈದ್ಯರು ಕೊಟ್ಟಿರುವ ಅಲೋಪತಿ ಔಷಧಿಗಳ ಜೊತೆಗೆ ಉಪಯೋಗಿಸಬೇಕು. ಕೊರೋನಾ ಪೀಡಿತರು/ಪರಿವಾರದವರು  ಕ್ವಾರೆಂಟೈನ್ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸಬೇಕು. ಅಗತ್ಯವಿರುವ ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT