ಸಾಂದರ್ಭಿಕ ಚಿತ್ರ 
ರಾಜ್ಯ

ಫೋರ್ಟಿಸ್ ಆಸ್ಪತ್ರೆಯಿಂದ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕೋವಿಡ್‌ ಲಸಿಕೆ ಶಿಬಿರ

ರಾಜ್ಯದ ಲಾಕ್‌ಡೌನ್ ಪರಿಸ್ಥಿತಿ ಮತ್ತು ಕೋವಿಡ್- 19 ಪ್ರಕರಣಗಳ ಉಲ್ಬಣವನ್ನು ಪರಿಗಣಿಸಿ, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳು ನಗರದಾದ್ಯಂತ ವಿವಿಧ ನಿವಾಸಿಗಳ ಕಲ್ಯಾಣ....

ಬೆಂಗಳೂರು: ರಾಜ್ಯದ ಲಾಕ್‌ಡೌನ್ ಪರಿಸ್ಥಿತಿ ಮತ್ತು ಕೋವಿಡ್- 19 ಪ್ರಕರಣಗಳ ಉಲ್ಬಣವನ್ನು ಪರಿಗಣಿಸಿ, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳು ನಗರದಾದ್ಯಂತ ವಿವಿಧ ನಿವಾಸಿಗಳ ಕಲ್ಯಾಣ ಸಂಘ(ಆರ್‌ಡಬ್ಲ್ಯುಎ) ಮತ್ತು ಕಾರ್ಪೊರೇಟ್‌ ಸಂಸ್ಥೆಗಳಲ್ಲಿ ಲಸಿಕೆ ಶಿಬಿರಗಳನ್ನು ಹಮ್ಮಿಕೊಳ್ಳಲಿದೆ.

ಆರ್‌ಡಬ್ಲ್ಯುಎ ಮತ್ತು ಕಾರ್ಪೊರೇಟ್ ವ್ಯಾಕ್ಸಿನೇಷನ್ ಶಿಬಿರಗಳನ್ನು ವೈದ್ಯರು, ನರ್ಸ್‌ಗಳು, ದಾಖಲೆ ಪರಿಶೀಲಕರು, ಬಿಲ್ಲಿಂಗ್ ಸಿಬ್ಬಂದಿ, ಸಹಾಯಕ ಸಿಬ್ಬಂದಿ ಮತ್ತು ಸುಸಜ್ಜಿತ ಆಂಬ್ಯುಲೆನ್ಸ್ ಒಳಗೊಂಡ ತಂಡವನ್ನು ಮುನ್ನಡೆಸಲಿದೆ.

ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ವಲಯ ನಿರ್ದೇಶಕ ಡಾ.ಮನೀಶ್ ಮ್ಯಾಟೂ, ಈ ಅಭಿಯಾನದ ಮೂಲಕ ಜನರಿಗೆ ಅವರ ಮನೆ ಬಾಗಿಲಿಗೆ ಚುಚ್ಚುಮದ್ದು ತಲುಪಿಸುವ ಗುರಿ ಹೊಂದಿದ್ದೇವೆ. ಆರಂಭದಲ್ಲಿ ನೆರೆಹೊರೆಯಲ್ಲಿ ಮಾತ್ರ ಲಸಿಕಾ ಶಿಬಿರವನ್ನು ನಡೆಸಲು ಯೋಜಿಸಲಾಗಿತ್ತು. ಆದರೆ, ನಗರದಾದ್ಯಂತದ ಆರ್‌ಡಬ್ಲ್ಯೂಎ ಮತ್ತು ಕಾರ್ಪೊರೇಟ್‌ಗಳಿಂದ ಮನವಿಗಳು ಬಂದ ಹಿನ್ನೆಲೆಯಲ್ಲಿ, 30 ಕಾರ್ಪೊರೇಟ್‌ಗಳು ಮತ್ತು 31 ಆರ್‌ಡಬ್ಲ್ಯೂಎಗಳಲ್ಲಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?