ರಾಜ್ಯ

ಕೋಲಾರ: 11 ಮಕ್ಕಳು ಸೇರಿ 20 ಜನರಿಗೆ ಕೋವಿಡ್ ಪಾಸಿಟಿವ್

Shilpa D

ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಘಟ್ಟ ಕಾಮದೇವನಹಳ್ಳಿ ಗ್ರಾಮದಲ್ಲಿ 11 ಮಕ್ಕಳು ಸೇರಿ ಒಟ್ಟು 20 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಅವರನ್ನು ಸಂಭ್ರಮ್ ಆಸ್ಪತ್ರೆಯಲ್ಲಿ ಅಬ್ಸರ್ವೇಶನ್ ನಲ್ಲಿಡಲಾಗಿದೆ.

ಗ್ರಾಮದಲ್ಲಿ ವೈದ್ಯಕೀಯ ತಂಡವೊಂದು ಬೀಡು ಬಿಟ್ಟಿದ್ದು, ಉಳಿದ ನಿವಾಸಿಗಳ ತಾಪಮಾನ, ಮತ್ತು ಗಂಟಲು ದ್ರವ ಸಂಗ್ರಹಿಸಲು ತಿಳಿಸಲಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.

ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪ್ರತ್ಯೇಕಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಂಗಾರಪೇಟೆ ತಹಶೀಲ್ದಾರ್ ದಯಾನಂದ ಸ್ಥಳೀಯರಿಗೆ ಈ ಸಂಬಂಧ ಜಾಗೃತಿ ಮೂಡಿಸಲಿದ್ದಾರೆ.

ವೈರಸ್ ಸೋಂಕಿಗೆ ಒಳಗಾದವರಲ್ಲಿ 11 ಮಕ್ಕಳು ಇದ್ದುದರಿಂದ ಎರಡು ದಿನಗಳಲ್ಲಿ ಗ್ರಾಮಕ್ಕೆ ಭೇಟಿ ನೀಡಿ ವಿವರವಾದ ವರದಿಯನ್ನು ಸಲ್ಲಿಸುವಂತೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶಪ್ಪ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಸರಸ್ವತಿ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಸೋಂಕಿತರು ಚೇತರಿಸಿಕೊಂಡ ನಂತರ ಗ್ರಾಮ ಹಾಗೂ ಹಳ್ಳಿಯ ಸುತ್ತಮುತ್ತ ವಿಶೇಷ ವ್ಯಾಕ್ಸಿನೇಷನ್ ಡ್ರೈವ್ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಸೋಂಕಿತ 20 ಮಂದಿಯೂ ಸ್ಥಿರವಾಗಿದ್ದಾರೆ ಮತ್ತು ಅವರ ಆಮ್ಲಜನಕ ಸ್ಯಾಚುರೇಶನ್ ಮಟ್ಟ ಉತ್ತಮವಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜಹಾದೇಶ್ ತಿಳಿಸಿದ್ದಾರೆ. ಜಿಲ್ಲೆಯ ಇತರ ನಿವಾಸಿಗಳಲ್ಲಿ ಮತ್ತಷ್ಟು ಪಾಸಿಟಿವ್ ಪ್ರಕರಣಗಳನ್ನು ಕಡಿಮೆ ಮಾಡಲು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.

SCROLL FOR NEXT