ರಾಜ್ಯ

ರಾಜ್ಯ ಸರ್ಕಾರ ಎಲ್ಲಾ ಬಿಪಿಎಲ್ ಕಾರ್ಡುದಾರರ ಕುಟುಂಬಗಳ ಖಾತೆಗೆ ಮಾಸಿಕ 10 ಸಾವಿರ ರೂ. ಜಮೆ ಮಾಡಬೇಕು: ಕೃಷ್ಣ ಬೈರೇಗೌಡ

Nagaraja AB

ಬೆಂಗಳೂರು: ರಾಜ್ಯ ಸರ್ಕಾರ ಎಲ್ಲಾ ಬಿಪಿಎಲ್ ಕಾರ್ಡುದಾರ ಕುಟುಂಬಗಳ ಖಾತೆಗೆ ಮಾಸಿಕ 10 ಸಾವಿರ ಹಣವನ್ನು ನೇರವಾಗಿ ಜಮೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಕೃಷ್ಣ ಬೈರೇಗೌಡ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಹುಲ್ ಗಾಂಧಿ ತೋರಿಸಿಕೊಟ್ಟಿರುವ 'ನ್ಯಾಯ್' ಎಂಬ ಸರಳ ಮಾರ್ಗವೊಂದು ನಮ್ಮ ಮುಂದಿದೆ. ಜನರ ಖಾತೆಗೆ ನೇರವಾಗಿ ಹಣ ತಲುಪಿಸುವ ಮಾರ್ಗೋಪಾಯವನ್ನು ಕಾಂಗ್ರೆಸ್ ಅವಧಿಯಲ್ಲೇ ನಿರ್ಮಿಸಲಾಗಿದೆ. ಅದರಂತೆ ಬಿಜೆಪಿ ಸರ್ಕಾರ ಎಲ್ಲಾ ಬಿಪಿಎಲ್ ಕಾರ್ಡುದಾರ ಕುಟುಂಬಗಳ ಖಾತೆಗೆ ಮಾಸಿಕ 10,000 ಹಣವನ್ನು ನೇರವಾಗಿ ಜಮೆ ಮಾಡಬೇಕು ಎಂದರು.

ಲಾಕ್‌ಡೌನ್‌ನಿಂದಾಗಿ ತಮ್ಮ ಆದಾಯದ ಮೂಲ ಕಳೆದುಕೊಂಡಿರುವ ಬಡವರಿಗೆ ಈ ನಷ್ಟ ತಡೆದುಕೊಳ್ಳುವ ಶಕ್ತಿ ಇಲ್ಲ. ಲಾಕ್‌ಡೌನ್‌ಗೆ ನಮ್ಮ ವಿರೋಧವಿಲ್ಲ, ಆದರೆ ಬಡವರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ನಾವು ಮೊದಲೇ ಹೇಳಿದ್ದೆವು, ಆದರೆ ನಿರ್ದಯಿ ಬಿಜೆಪಿ ಸರ್ಕಾರ ಕಣ್ಣೊರೆಸುವ ತಂತ್ರದ ಪ್ಯಾಕೇಜ್ ನೀಡಿದೆ ಎಂದು ಅವರು ಹೇಳಿದರು.

ದೇಶದ ಜಿಡಿಪಿ ಬಾಂಗ್ಲಾ ದೇಶಕ್ಕಿಂತಲೂ ಕೆಳಗಿಳಿದಿದೆ. ಇಂಡಸ್ಟ್ರಿಯಲ್ ಹಬ್ ಆಗಿದ್ದ ಭಾರತದಿಂದ ಉದ್ಯಮಗಳು ಬಾಂಗ್ಲಾ, ವಿಯೆಟ್ನಾಂ ದೇಶಗಳಿಗೆ ವರ್ಗವಾಗುತ್ತಿವೆ, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇಂಥವರಿಗೆ ಹಾಗೂ ಸಣ್ಣ-ಮದ್ಯಮ ಕೈಗಾರಿಕೆಗಳಿಗೆ  ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಿಲ್ಲ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.

ಜನರು ನಗರ ಪ್ರದೇಶದಿಂದ ತಮ್ಮ ಊರುಗಳಿಗೆ ಹೋಗಿರುವುದರಿಂದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿಯ ದಿನಗಳನ್ನು 
100 ರಿಂದ 200 ದಿನಗಳಿಗೆ ಹೆಚ್ಚಿಸಬೇಕು ಎಂದು ಶಾಸಕ ರಿಜ್ವಾನ್ ಅರ್ಷದ್ ಒತ್ತಾಯಿಸಿದರು.

SCROLL FOR NEXT