ಸಂಗ್ರಹ ಚಿತ್ರ 
ರಾಜ್ಯ

ದೇಶದಲ್ಲೇ ಮೊದಲು: ಬೆಂಗಳೂರಿನಲ್ಲಿ ವೈರಸ್ ನಾಶಕ್ಕೆ ಲಘು ವಿಮಾನದಿಂದ ಸೋಂಕು ನಿವಾರಕ ದ್ರಾವಣ ಸಿಂಪಡಣೆ

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಕೊಂಚ ಕಡಿಮೆಯಾಗುತ್ತಿದ್ದು ಇದರ ಮಧ್ಯೆ ಗಾಳಿಯಲ್ಲಿ ಅಲ್ಪ ಕಾಲ ತೇಲುವ ಕೊರೋನಾ ವೈರಸ್ ನಾಶಕ್ಕೆ ಬಿಬಿಎಂಪಿ ಮುಂದಾಗಿದ್ದು ಲಘು ವಿಮಾನಗಳ ಮೂಲಕ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲು ಪ್ಲಾನ್ ಮಾಡಿದೆ.

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಕೊಂಚ ಕಡಿಮೆಯಾಗುತ್ತಿದ್ದು ಇದರ ಮಧ್ಯೆ ಗಾಳಿಯಲ್ಲಿ ಅಲ್ಪ ಕಾಲ ತೇಲುವ ಕೊರೋನಾ ವೈರಸ್ ನಾಶಕ್ಕೆ ಬಿಬಿಎಂಪಿ ಮುಂದಾಗಿದ್ದು ಲಘು ವಿಮಾನಗಳ ಮೂಲಕ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲು ಪ್ಲಾನ್ ಮಾಡಿದೆ. 

ದೇಶದಲ್ಲೇ ಇದು ಮೊದಲ ವಿನೂತನ ಪ್ರಯತ್ನವಾಗಿದ್ದು ಏರಿಯಲ್ ವರ್ಕ್ಸ್ ಏರೋ ಎಲ್ಎಲ್ ಪಿ ಸಂಸ್ಥೆಯ ಜೊತೆ ದ್ರಾವಣ ಸಿಂಪಡಿಸುವ ಪ್ರಾಯೋಗಿಕ ಕಾರ್ಯಾಚರಣೆ ಯೋಜನೆಗೆ ಇಂದು ಚಾಲನೆ ನೀಡಲಾಯಿತು. 

ಬೆಂಗಳೂರಿನ ಕಲಾಸಿಪಾಳ್ಯ, ಕೆಆರ್ ಮಾರುಕಟ್ಟೆ ಮತ್ತು ಶಿವಾಜಿನಗರ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಮೂರು ದಿನಗಳ ಕಾಲ ಏರ್ ಸ್ಪ್ರೇ ಮಾಡಲಾಗುತ್ತದೆ. ಇನ್ನು ಇದನ್ನು ಎಲ್ಎಲ್ ಸಿ ಉಚಿತವಾಗಿ ಸಿಂಪಡಣೆ ಮಾಡುತ್ತಿದೆ. 

ಸೋಮವಾರದಿಂದ ಮೂರು ದಿನಗಳ ಕಾಲ ಬೆಳಗ್ಗೆ 8ರಿಂದ 10 ಗಂಟೆಯವರೆಗೆ ಮಾರುಕಟ್ಟೆ ಸ್ಥಳಗಳಲ್ಲಿ ಸೋಂಕು ನಿವಾರಕ ಸಾವಯವ ದ್ರಾವಣವನ್ನು ಸಿಂಪಡಣೆ ಮಾಡಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video