ರಾಜ್ಯ

ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ಅಬ್ಬರ: ಕೇವಲ 3 ದಿನಗಳಲ್ಲಿ 150 ಮಂದಿಯಲ್ಲಿ ಸೋಂಕು ಪತ್ತೆ!

Manjula VN

ಮೈಸೂರು: ಹಲವು ದಿನಗಳ ವಿರಾಮದ ನಂತರ, ಮೈಸೂರು ಜಿಲ್ಲೆಯಲ್ಲಿ ಹೊಸ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ,

ಅಕ್ಟೋಬರ್ 28-30 ಅಂದರೆ ಮೂರು ದಿನಗಳಲ್ಲಿ ಮೈಸೂರಿನಲ್ಲಿ 150 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಈ ನಡುವೆ ಸಕ್ರಿಯ ಪ್ರಕರಣಗಳ ಸಂಖ್ಯೆ 307ಕ್ಕೆ ತಲುಪಿದೆ.

ಜಿಲ್ಲೆಯಲ್ಲಿ ಅಕ್ಟೋಬರ್ 28 ರಂದು 47 ಪ್ರಕರಣಗಳು, ಅಕ್ಟೋಬರ್ 29 ರಂದು 55 ಪ್ರಕರಣಗಳು ಮತ್ತು ಅಕ್ಟೋಬರ್ 30 ರಂದು 44 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಪಾಸಿಟಿವಿಟಿ ಪ್ರಮಾಣವು ಶೇಕಡಾ 1 ಕ್ಕಿಂತ ಹೆಚ್ಚಾಗಿ ಶೇಕಡಾ 1.1 ರಿಂದ 1.4 ಕ್ಕೆ ಏರಿಳಿಕೆಯಾಗಿದೆ. ಇದರಂತೆ ಬೆಂಗಳೂರು ನಗರ ನಂತರ, ಮೈಸೂರು ಅತಿ ಹೆಚ್ಚು ಏಕದಿನ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ ಜಿಲ್ಲೆಯಾಗಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದರು. ಆದರೆ, ದಸರಾ ಉತ್ಸವ, ಜಂಬೂ ಸವಾರಿಯಿಂದಾಗಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಏರಿಕೆಯಾಗುವಂತೆ ಮಾಡಿದೆ.

ಈ ನಡುವೆ ಆರೋಗ್ಯಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಕೂಡ ಆರಂಭವಾಗುತ್ತಿದ್ದು, ಹಬ್ಬ ಹಿನ್ನೆಲೆಯಲ್ಲಿ ಕೋವಿಡ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಏತನ್ಮಧ್ಯೆ, ಶಾಲೆಗಳು ಪುನರಾರಂಭವಾಗಿರುವ ಸಮಯದಲ್ಲಿ ಸೋಂಕು ಹೆಚ್ಚಾಗುತ್ತಿರುವುದು ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ.

SCROLL FOR NEXT