ತ್ರಿವರ್ಣ ಧ್ವಜ ರ‍್ಯಾಲಿ 
ರಾಜ್ಯ

ಧಾರವಾಡ: 2 ಕಿಮೀ ಉದ್ದದ ರಾಷ್ಟ್ರಧ್ವಜ ರ‍್ಯಾಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆ!

75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ  ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕಲಘಟಗಿ‌ಯಲ್ಲಿ ತ್ರಿವರ್ಣ ಧ್ವಜ ರ‍್ಯಾಲಿ ನಡೆಸಲಾಗಿತ್ತು.

ಹುಬ್ಬಳ್ಳಿ: 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ  ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಕಲಘಟಗಿ‌ಯಲ್ಲಿ ತ್ರಿವರ್ಣ ಧ್ವಜ ರ‍್ಯಾಲಿ ನಡೆಸಲಾಗಿತ್ತು.

ಮಾಜಿ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ನಡೆದ 2 ಕಿ.ಮೀ ಉದ್ದ ಹಾಗೂ 3 ಮೀ. ಅಗಲದ ಬೃಹತ್ ತ್ರಿವರ್ಣ ಧ್ವಜ ರ‍್ಯಾಲಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಸೇರಿದೆ.

ತ್ರಿವರ್ಣ ಧ್ವಜ ಜಾಥಾದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ ರಾಷ್ಟ್ರಾಭಿಮಾನ ಮೆರೆದಿದ್ದರು. ಇಷ್ಟೊಂದು ದೊಡ್ಡ ಹಾಗು ಅಗಲದ ತ್ರಿವರ್ಣ ಧ್ವಜ ಅನಾವರಣ ಹಾಗು ರ‍್ಯಾಲಿ ಈವರೆಗೆ ಭಾರತದಲ್ಲಿ ಎಲ್ಲಿಯೂ ನಡೆದಿರಲಿಲ್ಲ.  ಕಲಘಟಗಿ ಪಟ್ಟಣ ಹಾಗೂ ಸುತ್ತ ಮುತ್ತಲ ಗ್ರಾಮಸ್ಥರು, ಅದರಲ್ಲೂ ವಿಶೇಷವಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.

ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆಯ ಕಲ್ಯಾಣ್‌ ಟೆಕ್ಸ್‌ಟೈಲ್ಸ್‌ನಲ್ಲಿ ಈ ಬೃಹತ್‌ ಧ್ವಜವನ್ನು ತಯಾರಿಸಲಾಗಿತ್ತು. ಜಾಥಾದಲ್ಲಿ ಬಳಸಿದ ಧ್ವಜದ ಒಟ್ಟು ತೂಕ 350 ಕೆ.ಜಿಯಷ್ಟಿತ್ತು. ಈ ಧ್ವಜ ಸಿದ್ಧಪಡಿಸಲು 48 ಗಂಟೆಗಳ ಸಮಯಾವಕಾಶ ತೆಗೆದುಕೊಳ್ಳಲಾಗಿದ್ದು, 60 ಮಂದಿ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದರು.

ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಸಂತೋಷ್ ಲಾಡ್ 75ನೇ ಸ್ವಾತಂತ್ರ್ಯ ದಿನಾಚರಣೆ ಅಪ್ರತಿಮವಾಗಿ ಸ್ಮರಣೆಯಲ್ಲಿರಬೇಕೆಂಬ ಆಲೋಚನೆ ಬಂತು. ಅದರ ಬಗ್ಗೆ ಯೋಜಿಸಿದಾಗ ಕಲಘಟಗಿಯಲ್ಲಿ ತಿರಂಗಾ ಮೆರವಣಿಗೆಯ ಕಲ್ಪನೆ ಬಂತು. ನನ್ನ ಸ್ನೇಹಿತರ ಸಹಾಯದಿಂದ ನಾವು 2 ಕಿಮೀ ಉದ್ದ, 9 ಅಡಿ ಅಗಲದ ರಾಷ್ಟ್ರಧ್ವಜವನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದೇವೆ.

ರಾಷ್ಟ್ರೀಯ ಹೆದ್ದಾರಿ 63 ರ ಮೂಲಕ ಮೆರವಣಿಗೆ ಸಾಗಿತು,  ಉತ್ಸಾಹಿ ವಾಹನ ಸವಾರರು ಮೆರವಣಿಗೆಯ ವೀಡಿಯೊಗಳನ್ನು ಚಿತ್ರೀಕರಿಸಿದರು ಮತ್ತು ಸಂದೇಶವನ್ನು ಹರಡಿದರು. ಈ ಪ್ರಯತ್ನವನ್ನು ಶ್ಲಾಘಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಇತ್ತೀಚೆಗೆ ಸಂತೋಷ್ ಲಾಡ್‌ ಅವರಿಗೆ ಪ್ರಮಾಣಪತ್ರ ಮತ್ತು ಪದಕವನ್ನು ಕಳುಹಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT